ಕಾಬೂಲ್: ತಾಲಿಬಾನ್ (Taliban)ಗೆ ಬೆಂಬಲ ಸೂಚಿಸಿ ಯಾವುದೇ ಪೋಸ್ಟ್ಗಳನ್ನು ಹಾಕುವುದನ್ನು ನಿಷೇಧಿಸುವುದಾಗಿ ಫೇಸ್ಬುಕ್ (Facebook) ಹೇಳಿಕೊಂಡಿದೆ. ತಾಲಿಬಾನ್ ಒಂದು ಉಗ್ರಸಂಘಟನೆಯಾಗಿದ್ದು, ಅದನ್ನು ನಾವು ನಿಷೇಧಿಸುತ್ತೇವೆ. ಹಾಗೇ, ತಾಲಿಬಾನ್ಗೆ ಬೆಂಬಲ ಸೂಚಿಸಿ ಪೋಸ್ಟ್ಗಳನ್ನು ಹಾಕುವವರನ್ನು, ಬರಹಗಳನ್ನು ಬರೆಯುವವರನ್ನೂ ನಿಷೇಧಿಸುತ್ತೇವೆ ಎಂದು ಫೇಸ್ಬುಕ್ ಹೇಳಿಕೊಂಡಿದೆ. ಇನ್ನು ಅಫ್ಘಾನ್ನಲ್ಲಿ ತಜ್ಞರ ತಂಡವೊಂದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ತಾಲಿಬಾನ್ ಉಗ್ರಗುಂಪಿಗೆ ಸಂಬಂಧಪಟ್ಟ ಬರಹಗಳು, ಪೋಸ್ಟ್ಗಳನ್ನು ಫೇಸ್ಬುಕ್ನಿಂದ ತೆಗೆದುಹಾಕಲೆಂದೇ ಆ ತಂಡವನ್ನು ನೇಮಕ ಮಾಡಲಾಗಿದೆ ಎಂದೂ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಹೇಳಿಕೊಂಡಿದೆ.
ಕಳೆದ ಹಲವು ವರ್ಷಗಳಿಂದಲೂ ತಾಲಿಬಾನ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಂದೇಶವನ್ನು ರವಾನಿಸುತ್ತಿದೆ. ಆದರೆ ಯುಎಸ್ ಕಾನೂನಿನಡಿ ತಾಲಿಬಾನ್ನ್ನು ಉಗ್ರರ ಸಂಘಟನೆ ಎಂದೇ ಪರಿಗಣಿಸಲಾಗಿದೆ. ನಾವೀಗ ನಮ್ಮ ಅಪಾಯಕಾರಿ ಸಂಸ್ಥೆ ನೀತಿಗಳಡಿ ತಾಲಿಬಾನ್ನ್ನು ನಿಷೇಧಿಸುತ್ತಿದ್ದೇವೆ. ಅಂದರೆ, ತಾಲಿಬಾನ್ ಮತ್ತು ಆ ಸಂಘಟನೆ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಫೇಸ್ಬುಕ್ ಖಾತೆಗಳನ್ನು ತೆಗೆದುಹಾಕುತ್ತೇವೆ. ಇನ್ನು ತಾಲಿಬಾನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುವವರ, ಬೆಂಬಲ ಸೂಚಿಸುವವರ ಹಾಗೂ ಅದಕ್ಕೆ ಪ್ರಾತಿನಿಧ್ಯ ನೀಡುವವರ ಖಾತೆಗಳನ್ನೂ ನಿಷೇಧಿಸುತ್ತೇವೆ ಎಂದು ಫೇಸ್ಬುಕ್ ವಕ್ತಾರರೊಬ್ಬರು ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ಹೇಳಿದ್ದಾರೆ.
ಇದರರ್ಥ ನಾವು ತಾಲಿಬಾನ್ ಅಥವಾ ಅವರ ಪರವಾಗಿ ನಿರ್ವಹಿಸುವ ಖಾತೆಗಳನ್ನು ತೆಗೆದುಹಾಕುತ್ತೇವೆ ಮತ್ತು ಅವರ ಪ್ರಶಂಸೆ, ಬೆಂಬಲ ಮತ್ತು ಪ್ರಾತಿನಿಧ್ಯವನ್ನು ನಿಷೇಧಿಸುತ್ತೇವೆ ಎಂದು ಫೇಸ್ಬುಕ್ ವಕ್ತಾರರು ಹೇಳಿದ್ದಾರೆ. ಇದೀಗ ಅಫ್ಘಾನ್ನಲ್ಲಿ ಫೇಸ್ಬುಕ್ ಸಂಸ್ಥೆಯಿಂದ ನೇಮಕ ಮಾಡಲಾದ ತಂಡದಲ್ಲಿ, ಸ್ಥಳೀಯ ಭಾಷಿಕರು, ಸ್ಥಳೀಯ ಸನ್ನಿವೇಶದ ಅರಿವು ಇರುವವರೇ ಇದ್ದಾರೆ ಎಂದೂ ಅವರು ತಿಳಿಸಿದ್ದಾರೆ. ನಮ್ಮ ಈ ನಿಷೇಧ ನೀತಿ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂನಲ್ಲೂ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದೆ. ಹಾಗೇ, ನಾವೂ ಕೂಡ ಹಿಂಸಾಚಾರವನ್ನು ಉತ್ತೇಜಿಸುವುದಿಲ್ಲ ಎಂದು ಟ್ವಿಟರ್ ಹೇಳಿಕೊಂಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಘಟನೆಗಳಿಗೆ ಮಾನವೀಯತೆಯಿಂದ ನಾವು ಪ್ರತಿಕ್ರಿಯಿಸಬೇಕಿದೆ: ಹೆಚ್ಡಿ ದೇವೇಗೌಡ ಟ್ವೀಟ್
ಕೆಲಸಕ್ಕೆ ಹಿಂದಿರುಗುವಂತೆ ಅಫ್ಘಾನ್ ಸರ್ಕಾರಿ ನೌಕರರಿಗೆ ಕರೆಕೊಟ್ಟ ತಾಲಿಬಾನ್ ಉಗ್ರರು; ಮಹಿಳೆಯರಿಗೂ ಆಹ್ವಾನ