Sonali Phogat Murder Case: ಫೋಗಟ್ ಸೇವಿಸಿದ ಜ್ಯೂಸ್ನಲ್ಲಿ ನಾವೇ ವಿಷ ಬೆರೆಸಿದ್ದು ಎಂದು ಒಪ್ಪಿಕೊಂಡ ಆರೋಪಿಗಳು
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಆರೋಪಿ ಸುಧೀರ್ ಸಂಗ್ವಾನ್ ಮತ್ತು ಅವರ ಸಹವರ್ತಿ ಸುಖ್ವಿಂದರ್ ಸಿಂಗ್ ಅವರು ಕ್ಲಬ್‌ನಲ್ಲಿ ಸೋನಾಲಿ ಫೋಗಟ್ ಜೊತೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅವರಲ್ಲಿ ಒಬ್ಬರು ಆಕೆ ಜ್ಯೂಸ್ನಲ್ಲಿ ವಿಷವನ್ನು ಹಾಕಿದ್ದಾರೆ ಎಂದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ಪೊಲೀಸ್ ಮಹಾನಿರೀಕ್ಷಕ ತಿಳಿಸಿದ್ದಾರೆ.
ದೆಹಲಿ: ಸೋನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿದೆ. ಬಿಜೆಪಿ ನಾಯಕನ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಅವರ ಸ್ನೇಹಿತ ಸುಖವಿಂದರ್ ವಾಸಿ ಅವರು ಉದ್ದೇಶಪೂರ್ವಕವಾಗಿ ಆಕೆಯ ಜ್ಯೂಸ್ನಲ್ಲಿ ವಿಷವನ್ನು ಹಾಕಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಗೋವಾ ಪೊಲೀಸರು ಶುಕ್ರವಾರ ಹೇಳಿದ್ದಾರೆ. “
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಆರೋಪಿ ಸುಧೀರ್ ಸಂಗ್ವಾನ್ ಮತ್ತು ಅವರ ಸಹವರ್ತಿ ಸುಖ್ವಿಂದರ್ ಸಿಂಗ್ ಅವರು ಕ್ಲಬ್‌ನಲ್ಲಿ ಸೋನಾಲಿ ಫೋಗಟ್ ಜೊತೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಬಲವಂತವಾಗಿ ಜ್ಯೂಸ್ ಕುಡಿಯುವಂತೆ . ಬಲವಂತ ಮಾಡುತ್ತಿರುವುದು ವಿಡಿಯೋದಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಓಂವಿರ್ ಸಿಂಗ್ ಬಿಷ್ಣೋಯ್ ಹೇಳಿದ್ದಾರೆ. ಸುಖ್ವಿಂದರ್ ಮತ್ತು ಸುಧೀರ್ ಅವರು ಉದ್ದೇಶಪೂರ್ವಕವಾಗಿ ಜ್ಯೂಸ್ಗೆ ವಿಷವನ್ನು ಹಾಕಿ ಸೋನಾಲಿ ಫೋಗಟ್ ಕುಡಿಯುವಂತೆ ಮಾಡಿದ್ದಾರೆ ಎಂದು ಒಪ್ಪಿಕೊಂಡರು.
#WATCH | Sonali Phogat death: Goa IGP says,"…Video establishes that one of the accused forcefully made her consume a substance. When confronted, accused Sukhwinder Singh & Sudhir Sangwan confessed they intentionally mixed obnoxious chemical into a liquid & made her drink it…" pic.twitter.com/85aPyjuGy4
— ANI (@ANI) August 26, 2022
ಸೋನಾಲಿ ಫೋಗಟ್ ಸಾವಿನ ಪ್ರಕರಣ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗಳು
- ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಆರೋಪಿಗಳು ಪತ್ತೆಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
- ಎಫ್‌ಎಸ್‌ಎಲ್‌ನ ತಜ್ಞರನ್ನು ಕರೆಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ, ಹೆಚ್ಚಿನ ಸಾಕ್ಷ್ಯಗಳನ್ನು ಪಡೆಯಲು ಆರೋಪಿಗಳನ್ನು ವಿವಿಧ ಸ್ಥಳಗಳಿಗೆ ತಂಡದೊಂದಿಗೆ ಕಳುಹಿಸಲಾಗುವುದು
- ಆಕೆಯ ಶವಪರೀಕ್ಷೆ ವರದಿಯು ಫೋಗಟ್ ಅವರ ದೇಹದ ಮೇಲೆ ಬಲದ ಗಾಯಗಳು ಆಗಿವೆ ಎಂದು ಬಹಿರಂಗಪಡಿಸಿತು.
- ಆಕೆಯ ಶವಪರೀಕ್ಷೆಯನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಫೋಗಟ್ ಅವರ ದೇಹವನ್ನು ನಡೆಸಲಾಯಿತು.
- ಪೊಲೀಸರ ಪ್ರಕಾರ, ಫೋಗಟ್ಗೆ ಸೋಮವಾರ ರಾತ್ರಿ ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಮರುದಿನ ಬೆಳಿಗ್ಗೆ (ಮಂಗಳವಾರ), 8 ಗಂಟೆ ಸುಮಾರಿಗೆ ಅಂಜುನಾದ ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ನಿಧನರಾಗಿದ್ದರೆ ಎಂದು ಹೇಳಲಾಗಿದೆ.
- ಫೋಗಟ್ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಅಂಜುನಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
- ಸೋನಾಲಿ ಫೋಗಟ್ ಸಹೋದರ ರಿಂಕು ಢಾಕಾ ನೀಡಿದ ದೂರಿನ ಮೇರೆಗೆ ಗುರುವಾರ ಪ್ರಕರಣ ದಾಖಲಿಸಲಾಗಿದೆ. ರಿಂಕು ಢಾಕಾ ಇಬ್ಬರು ವ್ಯಕ್ತಿಗಳ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ದೂರಿನ ಆಧಾರದಲ್ಲಿ ಅವರಿಬ್ಬರನ್ನು ತನಿಖೆ ನಡೆಲಾಗಿತ್ತು ಎಂದು ಬಿಷ್ಣೋಯ್ ಹೇಳಿದರು.
- ಆಗಸ್ಟ್ 22 ರಂದು ಗೋವಾಕ್ಕೆ ಬಂದಿದ್ದ ಆಕೆ ಅಂಜುನಾ ಹೋಟೆಲ್‌ನಲ್ಲಿ ತಂಗಿದ್ದಳು. ಆರೋಪಿಗಳು ಸಿನಿಮಾ ಚಿತ್ರೀಕರಣದ ನೆಪದಲ್ಲಿ ಆಕೆಯನ್ನು ಗೋವಾಕ್ಕೆ ಕರೆತಂದಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
- ಸುಧೀರ್ ಸಗ್ವಾನ್ (ಫೋಗಟ್‌ನ ಪಿಎ) ನಮಗೆ ಆಗಸ್ಟ್ 24 ರಂದು ಚಲನಚಿತ್ರದ ಶೂಟಿಂಗ್ ಇತ್ತು ಎಂದು ಹೇಳಿದರು. ಆದರೆ ಆಗಸ್ಟ್ 22 ಮತ್ತು 23ರಂದು ಎರಡು ದಿನಗಳ ಕಾಲ ಹೋಟೆಲ್ ರೂಮ್ ಬುಂಕ್ ಮಾಡಲಾಗಿತ್ತು. ಯಾವುದೇ ಚಲನಚಿತ್ರ ಚಿತ್ರೀಕರಣ ಇರಲಿಲ್ಲ. ನಾವು ಇಲ್ಲಿ ಯಾವುದೇ ನಟ ಅಥವಾ ಚಲನಚಿತ್ರದ ಚಿತ್ರೀಕರಣವನ್ನು ನೋಡಿಲ್ಲ ಎಂದು ಸೋನಾಲಿ ಫೋಗಟ್ ಅವರ ಸಹೋದರ ರಿಂಕು ಧಾಕಾ.
- ಆರೋಪಿಯೊಬ್ಬನೊಂದಿಗೆ ತನ್ನ ಸಹೋದರಿ ನೃತ್ಯ ಮಾಡುತ್ತಿರುವ ವಿಡಿಯೋ ಗುರುಗ್ರಾಮದಿಂದ ಬಂದಿದ್ದು ಗೋವಾದಿಂದಲ್ಲ ಎಂದು ಅವರು ಹೇಳಿದ್ದಾರೆ.
Published On - 5:14 pm, Fri, 26 August 22