ಇಬ್ಬರು ಜಂಟಲ್​​ಮೆನ್ ಜತೆ ಊಟ; ತನಗೆ ಸಹಾಯ ಮಾಡಿದವರಿಗೆ ಕೊರಿಯಾದ ಯುಟ್ಯೂಬರ್ ಧನ್ಯವಾದ ಹೇಳಿದ ಪರಿ ಇದು

ವಿಡಿಯೊವನ್ನು ಪೋಸ್ಟ್ ಮಾಡಲು ಮತ್ತು ಬೀದಿಯಲ್ಲಿ ನನಗೆ ಸಹಾಯ ಮಾಡಿದ ಭಾರತದ ಇಬ್ಬರು ಜಂಟಲ್​ಮೆನ್ ಆದಿತ್ಯ ಮತ್ತು ಅಥರ್ವ ಜತೆ ಭೋಜನ ಎಂದು ಪಾರ್ಕ್ ಅವರು ಮುಂಬೈ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವ ಫೋಟೊ ಟ್ವೀಟ್ ಮಾಡಿದ್ದಾರೆ.

ಇಬ್ಬರು ಜಂಟಲ್​​ಮೆನ್ ಜತೆ ಊಟ; ತನಗೆ ಸಹಾಯ ಮಾಡಿದವರಿಗೆ ಕೊರಿಯಾದ ಯುಟ್ಯೂಬರ್ ಧನ್ಯವಾದ ಹೇಳಿದ ಪರಿ ಇದು
ತನಗೆ ಸಹಾಯ ಮಾಡಿದ ಯುವಕರ ಜತೆ ಪಾರ್ಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 02, 2022 | 7:25 PM

ದೆಹಲಿ: ಮುಂಬೈನ ಬೀದಿಯೊಂದರಲ್ಲಿ ಲೈವ್‌ಸ್ಟ್ರೀಮ್ ಮಾಡುತ್ತಿರುವಾಗ ಲೈಂಗಿಕ ಕಿರುಕುಳಕ್ಕೊಳಗಾದ ದಕ್ಷಿಣ ಕೊರಿಯಾದ ಯೂಟ್ಯೂಬರ್, (Youtuber) ತನಗೆ ಸಹಾಯ ಮಾಡಿದ ಇಬ್ಬರು ಭಾರತೀಯ ಯುವಕರಿಗೆ ಧನ್ಯವಾದ ಹೇಳಿ ಫೋಟೊ ಟ್ವೀಟ್ ಮಾಡಿದ್ದಾರೆ. ಕೊರಿಯಾದ ಪ್ರವಾಸಿ, ಹ್ಯೋಜಿಯಾಂಗ್ ಪಾರ್ಕ್ (Hyojeong Park) ತನಗೆ ಸಹಾಯ ಮಾಡಿದ ಆದಿತ್ಯ ಮತ್ತು ಅಥರ್ವ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕಿರುಕುಳದ ವಿಡಿಯೊ ಪೋಸ್ಟ್ ಮಾಡಲು ಆದಿತ್ಯ ಸಹಾಯ ಮಾಡಿದ್ದು, ಯುವಕರು ಸತಾಯಿಸುತ್ತಿದ್ದ ಹೊತ್ತಲ್ಲಿ ಆಕೆಗೆ ನೆರವಿಗೆ ಬಂದಿದ್ದರು ಅಥರ್ವ. ವಿಡಿಯೊವನ್ನು ಪೋಸ್ಟ್ ಮಾಡಲು ಮತ್ತು ಬೀದಿಯಲ್ಲಿ ನನಗೆ ಸಹಾಯ ಮಾಡಿದ ಭಾರತದ ಇಬ್ಬರು ಜಂಟಲ್​ಮೆನ್ ಆದಿತ್ಯ ಮತ್ತು ಅಥರ್ವ ಜತೆ ಭೋಜನ ಎಂದು ಪಾರ್ಕ್ ಅವರು ಮುಂಬೈ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವ ಫೋಟೊ ಟ್ವೀಟ್ ಮಾಡಿದ್ದಾರೆ. ಪಾರ್ಕ್​​ಗೆ ಕಿರುಕುಳ ನೀಡಿದ ಇಬ್ಬರು ಆರೋಪಿಗಳಾದ ಮೊಬೀನ್ ಚಂದ್ ಮೊಹಮ್ಮದ್ ಶೇಖ್ (19) ಮತ್ತು ಮೊಹಮ್ಮದ್ ನಕೀಬ್ ಸದಾರಿಯಾಲಂ ಅನ್ಸಾರಿ (20) ಅವರನ್ನು ಬಂಧಿಸಿದ್ದು ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ಒಂದು ನಿಮಿಷದ ಅವಧಿಯ ದಿನಾಂಕವಿಲ್ಲದ ವಿಡಿಯೊದಲ್ಲಿ ಯುವಕನೊಬ್ಬ ಆಕೆ ಆಕ್ಷೇಪಿಸಿದರೂ ಆಕೆಯ ಕೈಯನ್ನು ಹಿಡಿದುಕೊಂಡು ಲಿಫ್ಟ್ ನೀಡುತ್ತೇನೆ ಎಂದು ಹೇಳುತ್ತಿರುವಂತೆ ಕಾಣಿಸುತ್ತದೆ. ಅವನು ಅವಳ ಹತ್ತಿರ ಬರಲು ಪ್ರಯತ್ನಿಸಿದಾಗಲೂ ಪಾರ್ಕ್ ಅವನಿಂದ ದೂರ ಹೋಗಲು ವಿನಂತಿಸುತ್ತಾಳೆ. ಆಕೆ ಆತನನ್ನು ದೂಡಿ ಮನೆಗೆ ಹೋಗುವ ಸಮಯ ಎಂದು ಅಲ್ಲಿಂದ ಹೊರಡುತ್ತಾಳೆ. ಶೀಘ್ರದಲ್ಲೇ ಆ ವ್ಯಕ್ತಿ, ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ಅವಳನ್ನು ಹಿಂಬಾಲಿಸಿ ಮತ್ತೆ ಲಿಫ್ಟ್ ನೀಡುವುದಾಗಿ ಹೇಳುತ್ತಾನೆ. ಬನ್ನಿ, ಈ ಸೀಟ್ ಎಂದು ಆತ ಹರುಕುಮುರುಕು ಇಂಗ್ಲಿಷ್‌ನಲ್ಲಿ ಹೇಳುತ್ತಾನೆ, ಅದಕ್ಕೆ ಅವಳು ತನ್ನ ವಾಹನವು ಹತ್ತಿರದಲ್ಲಿ ನಿಂತಿದೆ ಎಂದು ಉತ್ತರಿಸುತ್ತಾಳೆ.

ಆಕೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ, ಕೊರಿಯಾದ ಪ್ರವಾಸಿ, “ನನ್ನ ಹೆಸರು ಹ್ಯೋಜಿಯಾಂಗ್ ಪಾರ್ಕ್. ನಾನು ದಕ್ಷಿಣ ಕೊರಿಯಾದವಳು. ನನ್ನ ಮೇಲೆ ಭಾರತದ ಮುಂಬೈನಲ್ಲಿ ಹಲ್ಲೆ ಮಾಡಲಾಗಿದೆ. ಇದು ವೀಡಿಯೊ” ಎಂದು ಹೇಳಿದ್ದಾಳೆ. ‘ಮ್ಹ್ಯೋಚಿ’ ಎಂಬ ಹೆಸರಿನ ವ್ಲೋಗರ್ ಆಗಿರುವ ಪಾರ್ಕ್, ತಾನು ವಿಡಿಯೋ ಗೇಮ್‌ಗಳನ್ನು ಆಡುವುದನ್ನು ಮತ್ತು ಟ್ವಿಚ್ ಮೂಲಕ ಇತರರೊಂದಿಗೆ ಸಂಪರ್ಕ ಹೊಂದಲು ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ