Sri Lanka Crisis: ಶ್ರೀಲಂಕಾ ಬಿಕ್ಕಟ್ಟಿಗೆ ಮಧ್ಯಪ್ರವೇಶಿಸಲು ತಮಿಳುನಾಡು ಪಕ್ಷಗಳ ಒತ್ತಾಯ; ಇಂದು ಸರ್ವ ಪಕ್ಷ ಸಭೆ

Delhi News: 7 ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ತುರ್ತುಸ್ಥಿತಿಯನ್ನು ಎದುರಿಸುತ್ತಿರುವ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳಿಗರ ರಕ್ಷಣೆಗೆ ಮಧ್ಯಪ್ರವೇಶಿಸಬೇಕು ಎಂದು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಭಾರತ ಸರ್ಕಾರವನ್ನು ಒತ್ತಾಯಿಸಿವೆ.

Sri Lanka Crisis: ಶ್ರೀಲಂಕಾ ಬಿಕ್ಕಟ್ಟಿಗೆ ಮಧ್ಯಪ್ರವೇಶಿಸಲು ತಮಿಳುನಾಡು ಪಕ್ಷಗಳ ಒತ್ತಾಯ; ಇಂದು ಸರ್ವ ಪಕ್ಷ ಸಭೆ
ಶ್ರೀಲಂಕಾದಲ್ಲಿ ಪ್ರತಿಭಟನೆImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 19, 2022 | 10:25 AM

ನವದೆಹಲಿ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಇಂದು (ಮಂಗಳವಾರ) ಸಂಜೆ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಶ್ರೀಲಂಕಾದಲ್ಲಿ (Sri Lanka Crisis) ಸಿಲುಕಿರುವ ತಮಿಳಿಗರಿಗೆ ನೆರವು ನೀಡಲು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ಡಾ. ಎಸ್ ಜೈಶಂಕರ್ (S Jaishankar) ಮಧ್ಯಪ್ರವೇಶಿಸುವಂತೆ ತಮಿಳುನಾಡು ಮೂಲದ ಪಕ್ಷಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ನಡೆದ ತಮಿಳುನಾಡಿನ ಸ್ಥಳೀಯ ಪಕ್ಷಗಳ ಸಭೆಯಲ್ಲಿ, 7 ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ತುರ್ತುಸ್ಥಿತಿಯನ್ನು ಎದುರಿಸುತ್ತಿರುವ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳಿಗರ ರಕ್ಷಣೆಗೆ ಭಾರತ ಮಧ್ಯಪ್ರವೇಶಿಸಬೇಕು ಎಂದು ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಒತ್ತಾಯಿಸಿವೆ. ಈ ಕುರಿತ 10 ಪ್ರಮುಖ ಬೆಳವಣಿಗೆಗಳು ಹೀಗಿವೆ.

  1. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸಂಸತ್ತಿನ ಉಭಯ ಸದನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಇಂದಿನ ಸಭೆಯಲ್ಲಿ ಮಾಹಿತಿ ನೀಡಲಿದ್ದಾರೆ.
  2. ಭಾನುವಾರ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲು ನಡೆದ ಸರ್ವಪಕ್ಷಗಳ ಸಭೆಯಲ್ಲಿ 7 ದಶಕಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ತುರ್ತುಸ್ಥಿತಿಯನ್ನು ಎದುರಿಸುತ್ತಿರುವ ನೆರೆಯ ದೇಶ ಶ್ರೀಲಂಕಾದ ಸುತ್ತಲಿನ ಬಿಕ್ಕಟ್ಟಿನಲ್ಲಿ ಭಾರತ ಮಧ್ಯಪ್ರವೇಶಿಸಬೇಕು ಎಂದು ಡಿಎಂಕೆ ಮತ್ತು ಎಐಎಡಿಎಂಕೆ ಒತ್ತಾಯಿಸಿದ್ದವು.
  3. ಭಾರತದ ತಮಿಳು ಜನಸಂಖ್ಯೆಯ ಸ್ಥಿತಿ ಮತ್ತು ತಮಿಳುನಾಡಿಗೆ ಬರುತ್ತಿರುವ ನಿರಾಶ್ರಿತರ ಬಗ್ಗೆ ಚಿಂತಿತರಾಗಿರುವ ತಮಿಳುನಾಡಿನಲ್ಲಿ ಹಲವಾರು ರಾಜಕೀಯ ಪಕ್ಷಗಳ ಕಳವಳವನ್ನು ಪರಿಹರಿಸಲು ಸರ್ಕಾರವು ಈ ಸಭೆಯನ್ನು ಕರೆದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
  4. ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ದ್ವೀಪ ರಾಷ್ಟ್ರದ ಪರಿಸ್ಥಿತಿ ಮತ್ತು ಭಾರತ ಇದುವರೆಗೆ ನೀಡಿದ ನೆರವಿನ ಕುರಿತು ಸದಸ್ಯರ ಮುಂದೆ ಮಾಹಿತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
  5. ಇದನ್ನೂ ಓದಿ
    Image
    ಅಮೆರಿಕಾದಲ್ಲಿ ಮತ್ತೆ ಗುಂಡಿನ ಸದ್ದು; ಇಂಡಿಯಾನಾ ಮಾಲ್​ನಲ್ಲಿ ಬಂದೂಕಿನ ದಾಳಿಗೆ ಮೂವರು ಸಾವು; ಗನ್​ಮ್ಯಾನ್ ಹತ್ಯೆ
    Image
    ಶ್ರೀಲಂಕಾ ಬಿಕ್ಕಟ್ಟು: ಭಾರತದ ಹಸ್ತಕ್ಷೇಪಕ್ಕೆ ಡಿಎಂಕೆ, ಎಐಎಡಿಎಂಕೆ ಒತ್ತಾಯ, ಜುಲೈ 19ಕ್ಕೆ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ
    Image
    Israel Attack: ಜೋ ಬೈಡೆನ್ ಭೇಟಿ ಬೆನ್ನಲ್ಲೇ ಗಾಜಾದ ಮಿಲಿಟರಿ ನೆಲೆ ಮೇಲೆ ಇಸ್ರೇಲ್​ನಿಂದ ವಾಯು ದಾಳಿ
  6. ದೇಶದಲ್ಲಿ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಭಾರತ ಶ್ರೀಲಂಕಾಕ್ಕೆ ಭರವಸೆ ನೀಡಿದೆ.
  7. ಕಳೆದ ವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶ್ರೀಲಂಕಾ ತನ್ನ ನೆರೆಹೊರೆಯ ಮೊದಲ ನೀತಿಯಲ್ಲಿ ಕೇಂದ್ರ ಸ್ಥಾನವನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿತ್ತು. ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ಮೌಲ್ಯಗಳು, ಸ್ಥಾಪಿತ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಗಾಗಿ ಅವರ ಆಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಶ್ರೀಲಂಕಾದ ಜನರಿಗೆ ಭಾರತ ಬೆಂಬಲ ನೀಡಲಿದೆ ಎಂದು ಭಾರತ ಹೇಳಿತ್ತು.
  8. ಕಳೆದ ವಾರ ನಡೆದ ಭಾರೀ ಪ್ರತಿಭಟನೆಗಳ ನಂತರ ಗೊಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ, ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಶ್ರೀಲಂಕಾ ದೇಶದ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ನೇಮಿಸಲಾಯಿತು. ಶ್ರೀಲಂಕಾ ಸಂಸತ್ತು ಬುಧವಾರ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ.
  9. ಶ್ರೀಲಂಕಾದ ಅಧ್ಯಕ್ಷ ಚುನಾವಣೆಗೂ ಮುನ್ನ ದೇಶಾದ್ಯಂತ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೀಲಂಕಾದ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ನಾಳೆ ಮತದಾನ ಮಾಡಲಿರುವ ಸಂಸದರ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ.
  10. ಶ್ರೀಲಂಕಾದ ಪ್ರತಿಭಟನಾ ಚಳವಳಿ ಭಾನುವಾರ 100ನೇ ದಿನವನ್ನು ತಲುಪಿದೆ. ದೇಶದ ಆರ್ಥಿಕ ಪ್ರಕ್ಷುಬ್ಧತೆಗೆ ರಾಜಪಕ್ಸ ಕುಟುಂಬವನ್ನು ಪ್ರತಿಭಟನಾಕಾರರು ದೂಷಿಸಿದ್ದಾರೆ. ಕಳೆದ ವರ್ಷದ ಅಂತ್ಯದಿಂದ ಶ್ರೀಲಂಕಾದ 22 ಮಿಲಿಯನ್ ಜನರು ಆಹಾರ, ಇಂಧನ ಮತ್ತು ಔಷಧಿಗಳ ಕೊರತೆಯನ್ನು ಅನುಭವಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
  11. ಶ್ರೀಲಂಕಾದಲ್ಲಿ ಈಗಾಗಲೇ ಪೆಟ್ರೋಲ್ ಪೂರೈಕೆ ಬಹುತೇಕ ಸ್ಥಗಿತವಾಗಿದೆ. ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಇಂಧನವನ್ನು ಉಳಿಸಲು ಸರ್ಕಾರವು ಅನಿವಾರ್ಯವಲ್ಲದ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚಲು ಆದೇಶಿಸಿದೆ.