Tamil Nadu: ಶ್ರೀರಂಗಂ ದೇವಸ್ಥಾನದ ಲೆಕ್ಕಪತ್ರಗಳನ್ನು ಸರಿಯಾಗಿ ಆಡಿಟ್ ಮಾಡಲಾಗಿದೆ, ಸಿಎಜಿ ಆಡಿಟ್ ಅಗತ್ಯವಿಲ್ಲ ಎಂದ ಕೋರ್ಟ್​

ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಖಾತೆಗಳನ್ನು ಜೂನ್ 30, 2021 ರವರೆಗೆ ಸರಿಯಾಗಿ ಆಡಿಟ್ ಮಾಡಲಾಗಿದೆ ಮತ್ತು ಈ ದೇವಾಲಯದ ಖಾತೆಗೆ ಸಿಎಜಿ ಆಡಿಟ್ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್  ಅಭಿಪ್ರಾಯಪಟ್ಟಿದೆ

Tamil Nadu: ಶ್ರೀರಂಗಂ ದೇವಸ್ಥಾನದ ಲೆಕ್ಕಪತ್ರಗಳನ್ನು ಸರಿಯಾಗಿ ಆಡಿಟ್ ಮಾಡಲಾಗಿದೆ, ಸಿಎಜಿ ಆಡಿಟ್ ಅಗತ್ಯವಿಲ್ಲ ಎಂದ ಕೋರ್ಟ್​
Temple
Follow us
TV9 Web
| Updated By: ನಯನಾ ರಾಜೀವ್

Updated on:Dec 21, 2022 | 9:48 AM

ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಖಾತೆಗಳನ್ನು ಜೂನ್ 30, 2021 ರವರೆಗೆ ಸರಿಯಾಗಿ ಆಡಿಟ್ ಮಾಡಲಾಗಿದೆ ಮತ್ತು ಈ ದೇವಾಲಯದ ಖಾತೆಗೆ ಸಿಎಜಿ ಆಡಿಟ್ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್  ಅಭಿಪ್ರಾಯಪಟ್ಟಿದೆ. 2000 ರಿಂದ ಇಲ್ಲಿಯವರೆಗಿನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ನಿರ್ದೇಶನ ನೀಡುವಂತೆ ಕೋರಿ ಶ್ರೀರಂಗಂನ ರಂಗರಾಜನ್ ನರಸಿಂಹನ್ ಸಲ್ಲಿಸಿದ್ದ ರಿಟ್ ಮನವಿಯನ್ನು ನ್ಯಾಯಾಲಯವು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿತು.

ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಯಿಂದ ಶ್ರೀರಂಗಂ ರಂಗನಾಥ ದೇವಸ್ಥಾನದ ಲೆಕ್ಕಪರಿಶೋಧನೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಶ್ರೀರಂಗಂನ ರಂಗರಾಜನ್ ನರಸಿಂಹನ್ ಅವರು 2018 ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಆ ಅರ್ಜಿಯಲ್ಲಿ ಶ್ರೀರಂಗಂ ರಂಗನಾಥ ದೇವಸ್ಥಾನದ ಲೆಕ್ಕ ಪರಿಶೋಧನೆಗೆ ಕೇಂದ್ರ ಲೆಕ್ಕ ಪರಿಶೋಧನಾ ಸಮಿತಿ ಆದೇಶ ನೀಡಬೇಕು. ಶ್ರೀರಂಗಂ ರಂಗನಾಥ ದೇವಸ್ಥಾನವನ್ನು ಆಡಳಿತಾಧಿಕಾರಿಗಳು ಸರಿಯಾಗಿ ನಿರ್ವಹಿಸುತ್ತಿಲ್ಲ.

ಆದ್ದರಿಂದ ದೇವಸ್ಥಾನದ  ಆಡಳಿತವನ್ನು ಸಂಪೂರ್ಣವಾಗಿ ಕೂಲಂಕಷವಾಗಿಸಲು ಆದೇಶಿಸಬೇಕು ಎಂದು ಉಲ್ಲೇಖಿಸಲಾಗಿತ್ತು. ನಂತರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಐಎಎಸ್ ಅಧಿಕಾರಿಗಳು ಶ್ರೀರಂಗಂ ರಂಗನಾಥ ದೇವಸ್ಥಾನದ ಲೆಕ್ಕಪರಿಶೋಧನೆ ನಡೆಸುತ್ತಿರುವುದರಿಂದ ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಯಿಂದ ಲೆಕ್ಕ ಪರಿಶೋಧನೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದರು.

ಮತ್ತಷ್ಟು ಓದಿ: ಹೊಸಕೋಟೆಯಲ್ಲಿ ದೇವಸ್ಥಾನ‌ ವಿಚಾರದಲ್ಲಿ ಪಾಲಿಟಿಕ್ಸ್: ಸಚಿವರ ಪುತ್ರ ಹೋಗ್ತಾನೆಂದು ದೇವಸ್ಥಾನಕ್ಕೆ ಬೀಗ

ಇನ್ನು, ಶ್ರೀರಂಗಂ ರಂಗನಾಥ ದೇವಸ್ಥಾನದ ನಿರ್ವಹಣೆಯನ್ನು ಸಂಪೂರ್ಣವಾಗಿ ಬದಲಾಯಿಸಿರುವುದರಿಂದ ಪ್ರಕರಣ ಅಸಿಂಧುವಾಗಿದ್ದು, ದೇವಸ್ಥಾನದ ಸಂಪೂರ್ಣ ಆಡಳಿತ ಬದಲಾವಣೆಗೆ ಆದೇಶ ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ದೇವಾಲಯಗಳ ಆಸ್ತಿಗಳು ಮತ್ತು ಹಣಕಾಸಿನ ಖಾತೆಗಳನ್ನು ಆಯಾ ದೇವಸ್ಥಾನಗಳು ಆಡಿಟ್ ಮಾಡುತ್ತವೆ ಮತ್ತು ತಮಿಳುನಾಡು ಸರ್ಕಾರದ ಹಣಕಾಸು ಇಲಾಖೆಯ ನಿಯಂತ್ರಣದಲ್ಲಿರುವ ಪ್ರತ್ಯೇಕ ಲೆಕ್ಕಪರಿಶೋಧನಾ ಇಲಾಖೆ ಘಟಕವು ಅದನ್ನು ಪರಿಶೀಲಿಸುತ್ತದೆ.

ಸಿಎಜಿ ಕಾಯ್ದೆಯಡಿಯಲ್ಲಿ, ಆಡಿಟ್ ಸೇರಿದಂತೆ ಧಾರ್ಮಿಕ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದ ವಿಶೇಷ ಕಾಯಿದೆಯು ಈಗಾಗಲೇ ಜಾರಿಯಲ್ಲಿರುವಾಗ ಸಿಎಜಿ ಡಿಪಿಸಿ ಕಾಯಿದೆಯಡಿಯಲ್ಲಿ ನಿಬಂಧನೆಗಳನ್ನು ಅನ್ವಯಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:48 am, Wed, 21 December 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ