ಸಂಸತ್ ಆವರಣದಲ್ಲಿದ್ದ ಮಹಾತ್ಮಾ ಗಾಂಧಿ, ಛತ್ರಪತಿ ಶಿವಾಜಿ, ಅಂಬೇಡ್ಕರ್ ಪ್ರತಿಮೆಗಳ ಸ್ಥಳಾಂತರ; ಕಾಂಗ್ರೆಸ್ ಖಂಡನೆ
ಗಾಂಧಿ, ಶಿವಾಜಿ ಮತ್ತು ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗಳನ್ನು ಹಳೆಯ ಸಂಸತ್ತಿನ ಕಟ್ಟಡ ಮತ್ತು ಸಂಸತ್ತಿನ ಗ್ರಂಥಾಲಯದ ನಡುವಿನ ಹುಲ್ಲುಹಾಸಿಗೆ ಸ್ಥಳಾಂತರಿಸಲಾಗಿದೆ. ಸಂಸತ್ತಿನ ಆವರಣದಲ್ಲಿರುವ ಎಲ್ಲಾ ಪ್ರತಿಮೆಗಳು ಈಗ ಒಂದೇ ಸ್ಥಳದಲ್ಲಿರಲಿವೆ.

ದೆಹಲಿ ಜೂನ್ 06: ಸಂಸತ್ತಿನ ಆವರಣದಲ್ಲಿ ಮಹಾತ್ಮ ಗಾಂಧಿ (Mahatma Gandhi), ಬಿ ಆರ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಮತ್ತು ಇತರರ ಪ್ರತಿಮೆಗಳನ್ನು ಸ್ಥಳಾಂತರಿಸಿದ್ದಕ್ಕೆ ಕಾಂಗ್ರೆಸ್ (Congress) ಪಕ್ಷ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದೆ. ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಈ ಹಿಂದೆ ಇದ್ದ ಸ್ಥಳದಿಂದ ಪ್ರತಿಮೆಗಳನ್ನು ಸ್ಥಳಾಂತರಿಸಲಾಗುತ್ತದೆ. ಗಾಂಧಿ, ಶಿವಾಜಿ ಮತ್ತು ಅಂಬೇಡ್ಕರ್ ಪ್ರತಿಮೆ ಸೇರಿದಂತೆ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗಳನ್ನು ಹಳೆಯ ಸಂಸತ್ತಿನ ಕಟ್ಟಡ ಮತ್ತು ಸಂಸತ್ತಿನ ಗ್ರಂಥಾಲಯದ ನಡುವಿನ ಹುಲ್ಲುಹಾಸಿಗೆ ಸ್ಥಳಾಂತರಿಸಲಾಗಿದೆ. ಸಂಸತ್ತಿನ ಆವರಣದಲ್ಲಿರುವ ಎಲ್ಲಾ ಪ್ರತಿಮೆಗಳು ಈಗ ಒಂದೇ ಸ್ಥಳದಲ್ಲಿರಲಿವೆ. ಪ್ರಮುಖ ನಾಯಕರ ಪ್ರತಿಮೆಗಳನ್ನು ಸ್ಥಳಾಂತರಿಸುವ ಕ್ರಮವನ್ನು ಕಾಂಗ್ರೆಸ್ ಪಕ್ಷವು ಖಂಡಿಸಿದ್ದು, ಇದನ್ನು “ದುಷ್ಕೃತ್ಯ” ಎಂದು ಕರೆದಿದೆ.
ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮಾ ಗಾಂಧಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ ಭವನದ ಮುಂಭಾಗದಿಂದ ತೆಗೆದುಹಾಕಲಾಗಿದೆ. ಇದು ದುಷ್ಟತನ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಪವನ್ ಖೇರಾ ಎಕ್ಸ್ ಪೋಸ್ಟ್
▪️अयोध्या ने भाजपा को हराया तो ये लोग राम भक्तों को गरियाने लगे। ▪️महाराष्ट्र के वोटर्स ने भाजपा को वोट नहीं दिया तो संसद में छत्रपति शिवाजी महाराज और बाबा साहिब अंबेडकर की मूर्तियाँ अपने मूल स्थान से हटा दीं। ▪️गुजरात में इन्हें 26/26 सीटें नहीं मिलीं तो महात्मा गांधी की मूर्ति… https://t.co/53QWiLr3iL
— Pawan Khera 🇮🇳 (@Pawankhera) June 6, 2024
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಹಾರಾಷ್ಟ್ರದ ಮತದಾರರು ಪಕ್ಷಕ್ಕೆ ಒಲವು ತೋರದಿದ್ದಾಗ, ಶಿವಾಜಿ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ತಿನ ಮೂಲ ಸ್ಥಳದಿಂದ ತೆಗೆದುಹಾಕಲಾಯಿತು. ಗುಜರಾತಿನಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಸಿಗದಿದ್ದಾಗ ಅವರು ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಸಂಸತ್ತಿನ ಮೂಲ ಸ್ಥಳದಿಂದ ಸ್ಥಳಾಂತರಿಸಿದರು ಎಂದಿದ್ದಾರೆ. ಯೋಚಿಸಿ, ಒಂದು ವೇಳೆ ಅವರಿಗೆ 400 ಸ್ಥಾನಗಳನ್ನು ನೀಡಿದ್ದರೆ, ಅವರು ಸಂವಿಧಾನವನ್ನು ಉಳಿಸುತ್ತಿದ್ದರೇ?” ಎಂದು ಖೇರಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೊಸ ಚುನಾಯಿತ ಸಂಸದರ ಮೊದಲ ಅಧಿವೇಶನಕ್ಕಾಗಿ ಆವರಣವನ್ನು ನವೀಕರಿಸಲು ಸಂಸತ್ತಿನಲ್ಲಿ ಪುನರಾಭಿವೃದ್ಧಿ ಯೋಜನೆ ನಡೆಯುತ್ತಿದೆ. ಸಂಸತ್ ಜೂನ್‌ನಲ್ಲಿ ಹೊಸ ರೂಪವನ್ನು ಪಡೆಯಲಿದೆ. ಅದೇ ವೇಳೆ ನಾಲ್ಕು ವಿಭಿನ್ನ ಕಟ್ಟಡಗಳನ್ನು ಒಳಗೊಂಡಿರುವ ಸಂಪೂರ್ಣ ಸಂಕೀರ್ಣವನ್ನು ಸಂಯೋಜಿಸುವ ಕೆಲಸ ನಡೆಯುತ್ತಿದೆ.
ಬಾಹ್ಯ ಪ್ರದೇಶಗಳ ಪುನರಾಭಿವೃದ್ಧಿಯ ಭಾಗವಾಗಿ, ಗಾಂಧಿ, ಶಿವಾಜಿ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಸೇರಿದಂತೆ ರಾಷ್ಟ್ರೀಯ ನಾಯಕರ ಗಳ ಪ್ರತಿಮೆಗಳನ್ನು ಹಳೆಯ ಸಂಸತ್ತಿನ ಕಟ್ಟಡದ ಗೇಟ್ ಸಂಖ್ಯೆ 5 ರ ಬಳಿ ಇರುವ ಹುಲ್ಲುಹಾಸಿಗೆ ಸ್ಥಳಾಂತರಿಸಲಾಯಿತು, ಇದನ್ನು ಸಂವಿಧಾನ್ ಸದನ್ ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಸಂಸತ್ನಲ್ಲಿ ವಿರೋಧ ಪಕ್ಷದ ನಾಯಕರಾಗುವಂತೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರ ಒತ್ತಾಯ
ಪ್ರತಿಮೆಗಳನ್ನು ಗಜ ದ್ವಾರದ ಮುಂಭಾಗದಲ್ಲಿ ದೊಡ್ಡ ಹುಲ್ಲುಹಾಸನ್ನು ರಚಿಸಲು ಸ್ಥಳಾಂತರಿಸಲಾಯಿತು, ಇದನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಹೊಸ ಸಂಸತ್ತಿನ ಕಟ್ಟಡಕ್ಕೆ ಪ್ರವೇಶಿಸಲು ಬಳಸುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ