ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿರ್ಮಿಸಿದ ಗಿನ್ನಿಸ್ ದಾಖಲೆ ಏನು ಗೊತ್ತಾ?
ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ವಿದ್ಯಾರ್ಥಿನಿ ನೇಹಾ ಸಿಂಗ್ ನೈಸರ್ಗಿಕ ಬಣ್ಣಗಳನ್ನು ಮತ್ತು ಬಳಕೆ ಅವಧಿ ಮೀರಿದ ಮಸಾಲೆ ಪದಾರ್ಥಗಳನ್ನು ಬಳಸಿ ವಿಶ್ವದ ಅತಿದೊಡ್ಡ ವರ್ಣಚಿತ್ರವನ್ನು ರಚಿಸಿದ್ದಾರೆ.
ದೇಶದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಬಾಲಕಿಯೊಬ್ಬಳು ಒಂದು ಗಂಟೆಯೊಳಗೆ 46 ಭಕ್ಷ್ಯಗಳನ್ನು ಮಾಡಿ ವಿಶ್ವ ದಾಖಲೆ ಮೆರೆದಿದ್ದಾಳೆ. ಅದೇ ರೀತಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ವಿದ್ಯಾರ್ಥಿನಿ ನೇಹಾ ಸಿಂಗ್ ನೈಸರ್ಗಿಕ ಬಣ್ಣಗಳಿಂದ ಮತ್ತು ಬಳಕೆ ಅವಧಿ ಮುಗಿದ ಮಸಾಲೆ ಪದಾರ್ಥಗಳಿಂದ ವಿಶ್ವದಲ್ಲೇ ಅತಿ ದೊಡ್ಡ ಚಿತ್ರಕಲೆ ಬಿಡಿಸುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪಾತ್ರಳಾಗಿದ್ದಾಳೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಕೊತ್ವಾರಿ ಗ್ರಾಮದ ನೇಹಾ ಸಿಂಗ್ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವೈದಿಕ ವಿಜ್ಞಾನದ ವಿದ್ಯಾರ್ಥಿನಿ. ಅದೇ ವಿಶ್ವವಿದ್ಯಾಲಯದಲ್ಲಿ ಲಲಿತ ಕಲೆಯನ್ನು ಅಭ್ಯಾಸ ಮಾಡಿದಳು. ನೇಹಾ ಚಿತ್ರಿಸಿದ ಚಿತ್ರಕಲೆಯ ಗಾತ್ರ 62.72 ಚದರ ಮೀಟರ್ನಷ್ಟಿದೆ. ಚಿತ್ರದಲ್ಲಿ ‘ಮೋಕ್ಷ್ ಕಾ ವೃಕ್ಷ್’(ಮೋಕ್ಷದ ವೃಕ್ಷ)ವನ್ನು ಚಿತ್ರಿಸಿದ್ದಾಳೆ.
ಮಸಾಲೆ ಪದಾರ್ಥಗಳನ್ನು ಬಿಸಾಕುತ್ತಾರೆ. ಇದನ್ನು ಉಪಯೋಗಕ್ಕೆ ಬಳಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಚಿತ್ರಕಲೆಯಲ್ಲಿ ಬಣ್ಣಗಳಿಗಾಗಿ ನೇಹಾ ಬಳಸಿಕೊಂಡಿದ್ದಾಳೆ.
ಬಲಿಯಾ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಹರಿ ಪ್ರತಾಪ್ ಶಾಹಿ, ನೇಹಾ ಸಿಂಗ್ ಅವರ ಸಾಧನೆಯನ್ನು ಗುರುತಿಸಿ ಗೌರವಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ, ನೇಹಾ ಸಿಂಗ್ ನೈಸರ್ಗಿಕ ಬಣ್ಣಗಳನ್ನು ಬಳಸಿಕೊಂಡು ವಿಶ್ವದ ಅತಿದೊಡ್ಡ ವರ್ಣಚಿತ್ರವನ್ನು ಬಿಡಿಸಿದ್ದಾರೆ. ಚಿತ್ರಕಲೆ 62.72 ಚದರ ಮೀಟರ್ ಗಾತ್ರದಲ್ಲಿದೆ. ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಇವರ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.
Ballia: Neha Singh, a student of Banaras Hindu University (BHU) made it to Guinness World Records for creating 'the largest spice painting'. Size of the painting is 62.72 square metres.
(20.12.2020) pic.twitter.com/AYxs5tY5Kn
— ANI UP (@ANINewsUP) December 20, 2020
ಕೇವಲ 58 ನಿಮಿಷದಲ್ಲಿ 46 ವಿಧದ ಭಕ್ಷ್ಯಗಳ ತಯಾರಿಸಿ, ವಿಶ್ವ ದಾಖಲೆ ಸೃಷ್ಟಿಸಿದ ತಮಿಳುನಾಡಿನ ಬಾಲಕಿ!
Published On - 6:06 pm, Mon, 21 December 20