ಆಂಧ್ರದಲ್ಲಿ ಆಡಳಿತ ಪಕ್ಷದ ಬ್ಯಾನರ್ ಹಾಳು ಮಾಡಿದ್ದಾರೆಂದು 4ನೇ ಕ್ಲಾಸ್ ಮಕ್ಕಳನ್ನು ಸ್ಟೇಶನ್ಗೆ ಕರೆದುಕೊಂಡು ಹೋದ ಪೊಲೀಸರು !
ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ನಾಡು ಪೊಲೀಸರು 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಈ ಚಿಕ್ಕಪುಟ್ಟ ಹುಡುಗರು ಆಂಧ್ರಪ್ರದೇಶದ ಆಡಳಿತ ಪಕ್ಷವಾದ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ (YSRCP)ಯ ಬ್ಯಾನರ್ಗಳನ್ನು ಹಾಳು ಮಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಪೊಲೀಸರು ಬಂಧಿಸಿ ಸ್ಟೇಶನ್ಗೆ ಕರೆದುಕೊಂಡು ಹೋಗಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ. ಪೊಲೀಸರು ಈ ವಿದ್ಯಾರ್ಥಿಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಸ್ಟೇಶನ್ನೊಳಗೆ ಕೂರಿಸಿದ್ದರು. ಜೈಲಿಗೆ ಹಾಕದಿದ್ದರೂ ಠಾಣೆಯಲ್ಲಿ ನೆಲಕ್ಕೆ ಕೂರಿಸಿ, ಪ್ರಶ್ನೆ ಕೇಳಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖವಾಗಿದೆ.
ವೈಎಸ್ಆರ್ಸಿಪಿ ಪಕ್ಷದ ಪೋಸ್ಟರ್ಗಳನ್ನು ಹುಡುಗರು ಹಾಳು ಮಾಡಿದ್ದಾರೆ ಎಂದು ಆ ಪಕ್ಷದ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನೆಲ್ಲ ಸ್ಟೇಶನ್ಗೆ ಕರೆಸಲಾಗಿತ್ತು. ಅವರೊಂದಿಗೆ ಬರುವಂತೆ ಪಾಲಕರಿಗೂ ಹೇಳಿದ್ದೆವು. ಇವರೆಲ್ಲ 10-15ವರ್ಷದ ವಯಸ್ಸಿನ ಹುಡುಗರಾಗಿದ್ದು ಜನಪಡು ಗ್ರಾಮದವರು ಎಂದು ಡೆಪ್ಯೂಟಿ ಎಸ್ಪಿ ಜಯರಾಮ್ ಪ್ರಸಾದ್ ತಿಳಿಸಿದ್ದಾರೆ. ಸಂಜೆ ಹೊತ್ತಿಗೆ ಎಲ್ಲರನ್ನೂ ಬಿಟ್ಟುಕಳಿಸಿದ್ದಾಗಿಯೂ ಮಾಹಿತಿ ನೀಡಿದ್ದಾರೆ.
ಟಿಡಿಪಿಯಿಂದ ಖಂಡನೆ
ಆಂಧ್ರ ಪೊಲೀಸರು ಒಂದು ಚಿಕ್ಕ ಕಾರಣಕ್ಕಾಗಿ ಅಪ್ರಾಪ್ತರನ್ನು ಕರೆದುಕೊಂಡು ಹೋಗಿ ಸ್ಟೇಶನ್ನಲ್ಲಿ ಇಟ್ಟುಕೊಂಡಿದ್ದನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಖಂಡಿಸಿದೆ. ದೂರು ನೀಡಿದ ವೈಎಸ್ಪಿ ಪಕ್ಷದ ನಾಯಕರು ಮತ್ತು ಕರೆದುಕೊಂಡು ಹೋದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಟಿಡಿಪಿ ಪಕ್ಷದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ನರಾ ಲೋಕೇಶ್ ಟ್ವೀಟ್ ಮಾಡಿ, ಒಂದು ಕ್ಷುಲ್ಲಕ ಕಾರಣಕ್ಕಾಗಿ ಮಕ್ಕಳನ್ನು ಹೀಗೆ ಸ್ಟೇಶನ್ಗೆ ಕರೆದುಕೊಂಡು ಬರುವುದು ಎಷ್ಟು ಸರಿ? ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ. ಮುಖ್ಯಮಂತ್ರಿ ಜಗನ್ ರೆಡ್ಡಿ ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: AirAsia India: ಏರ್ಏಷ್ಯಾ ಇಂಡಿಯಾದ ಸ್ವಾಧೀನಕ್ಕೆ ಟಾಟಾ ಒಡೆತನದ ಏರ್ ಇಂಡಿಯಾ ಯೋಜನೆ
Published On - 3:35 pm, Wed, 27 April 22