AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ನೇಮಕ

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್(Supreme Court) ​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ಅಂದರೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನೇಮಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ ನೀವು ನಿಮ್ಮ ಧ್ವನಿಯನ್ನು ಬಲವಾಗಿ ಹೇಳಬೇಕಾಗುತ್ತದೆ. ಆದರೆ ಈ ಹೋರಾಟದಲ್ಲಿ ವಕೀಲರಿಗೆ ಮಾತೇ ಬರದಿದ್ದರೆ ಏನು ಮಾಡಬೇಕು. ಕೇವಲ ಸನ್ನೆಯ ಮೂಲಕ ವಾದ ಮಾಡಿದರೆ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಥವಾಗುವುದು ಕಷ್ಟ ಹಾಗಾಗಿ ಇಂಟರ್​ಪ್ರಿಟರ್​ಅನ್ನು ನೇಮಿಸಬೇಕು ಎಂದು ದಿವ್ಯಾಂಗ ವಕೀಲೆ ಸಾರಾ ಸನ್ನಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದರು.

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ನೇಮಕ
ಸಾರಾ ಸನ್ನಿ
ನಯನಾ ರಾಜೀವ್
|

Updated on: Oct 06, 2023 | 11:43 AM

Share

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಪ್ರೀಂಕೋರ್ಟ್(Supreme Court) ​ನಲ್ಲಿ ದಿವ್ಯಾಂಗ ವಕೀಲರಿಗಾಗಿ ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ಅಂದರೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನೇಮಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುವುದು ಸುಲಭದ ಕೆಲಸವಲ್ಲ. ಏಕೆಂದರೆ ನೀವು ನಿಮ್ಮ ಧ್ವನಿಯನ್ನು ಬಲವಾಗಿ ಹೇಳಬೇಕಾಗುತ್ತದೆ. ಆದರೆ ಈ ಹೋರಾಟದಲ್ಲಿ ವಕೀಲರಿಗೆ ಮಾತೇ ಬರದಿದ್ದರೆ ಏನು ಮಾಡಬೇಕು. ಕೇವಲ ಸನ್ನೆಯ ಮೂಲಕ ವಾದ ಮಾಡಿದರೆ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಥವಾಗುವುದು ಕಷ್ಟ ಹಾಗಾಗಿ ಇಂಟರ್​ಪ್ರಿಟರ್​ಅನ್ನು ನೇಮಿಸಬೇಕು ಎಂದು ದಿವ್ಯಾಂಗ ವಕೀಲೆ ಸಾರಾ ಸನ್ನಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದರು.

ಸಾರಾ ಸನ್ನಿ ಸುಪ್ರೀಂಕೋರ್ಟ್​ ಅನ್ನು ಪ್ರತಿನಿಧಿಸುವ ಮೊದಲ ದಿವ್ಯಾಂಗ ವಕೀಲರಾಗಿದ್ದಾರೆ. ಸೈನ್ ಲ್ಯಾಂಗ್ವೇಜ್ ಇಂಟರ್​ಪ್ರಿಟರ್ ಸಹಾಯದಿಂದ ಅವರು ತಮ್ಮ ವಾದವನ್ನು ಮಂಡಿಸಬಹುದಾಗಿದೆ. ಇಂಟರ್​ಪ್ರಿಟರ್​ಗಳು ಸಾಮಾನ್ಯವಾಗಿ ಗಂಟೆಗಳ ಆಧಾರದ ಮೇಲೆ ಶುಲ್ಕವನ್ನು ಪಡೆಯುತ್ತಾರೆ, ಪ್ರತಿ 30 ನಿಮಿಷಗಳಿಗೊಮ್ಮೆ ವಿರಾಮವನ್ನು ಪಡೆಯುತ್ತಾರೆ. ಹಾಗಾಗಿ ಇಬ್ಬರು ವ್ಯಾಖ್ಯಾನಕಾರರನ್ನು ನೇಮಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಸಾರಾ ಬೆಂಗಳೂರಿನ ಸೇಂಟ್​ ಜೋಸೆಫ್ ಕಾನೂನು ವಿದ್ಯಾಲಯದಲ್ಲಿ ಎಲ್​ಎಲ್​ಬಿ ಪದವಿ ಪಡೆದಿದ್ದಾರೆ. ಹಾಗೆಯೇ ಜಿಲ್ಲಾ ನ್ಯಾಯಾಲಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ಅಲ್ಲಿ ಇಂಟರ್​ಪ್ರಿಟರ್​ ನೇಮಕಕ್ಕೆ ಅವಕಾಶವಿರಲಿಲ್ಲ.

ಕೇರಳದ ಕೊಟ್ಟಾಯಂನವರು ಸಾರಾ ಸನ್ನಿ ಕೇರಳದ ಕೊಟ್ಟಾಯಂನವರು, ಅವರ ತಂದೆ ಚಾರ್ಟರ್ಡ್​ ಅಕೌಂಟೆಂಟ್, ತಾಯಿ ಗೃಹಿಣಿ, ಸಾರಾ ಸನ್ನಿ ಅವಳಿ ಮಕ್ಕಳು ಇಬ್ಬರಿಗೂ ಕಿವಿ ಕೇಳಿಸದು, ಮಾತು ಬಾರದು, ಅದಕ್ಕೂ ಮುಂಚೆ ಹುಟ್ಟಿದ್ದ ಅವರ ಸಹೋದರನಿಗೂ ಕೂಡ ಕಿವಿ ಕೇಳಿಸುವುದಿಲ್ಲ. ಆದರೂ ಛಲ ಬಿಡದೆ ಸಾಮಾನ್ಯ ಮಕ್ಕಳಂತೆ ಶಿಕ್ಷಣ ಪಡೆದಿದ್ದಾರೆ. ಸಾರಾ ಬಿಕಾಂ ಮಾಡಿ ನಂತರ ಕಾನೂನು ಶಿಕ್ಷಣವನ್ನು ಪೂರ್ಣಗೊಳಿಸಿದರು.

ಮತ್ತಷ್ಟು ಓದಿ: ದಿವ್ಯಾಂಗರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾರಾ ಸಾಕ್ಷಿ, ಇಲ್ಲಿದೆ ಕೇರಳದ ದಿವ್ಯಾಂಗ ವಕೀಲೆಯ ಯಶೋಗಾಥೆ

ನ್ಯಾಯಾಲಯದಲ್ಲಿ ವಾದ ಮಾಡಲು ಉತ್ಸುಕರಾಗಿದ್ದರು ಕಾನೂನು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ್ದ ಸಾರಾ, ಎಲ್ಲಾ ವಕೀಲರಂತೆ ನ್ಯಾಯಾಲಯದಲ್ಲಿ ಪ್ರಕರಣಗಳಲ್ಲಿ ಹೋರಾಡಲು ಉತ್ಸುಕರಾಗಿದ್ದರು. ಆದರೆ ಮುಖ್ಯ ಸಮಸ್ಯೆಯೆಂದರೆ ಮಾತು ಬರುವುದಿಲ್ಲ. ಜಿಲ್ಲಾ ನ್ಯಾಯಾಲಯವು ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ನಿರಾಕರಿಸಿತು.

ಸಾರಾ ಏನು ಹೇಳ್ತಾರೆ? ಆ ದಿನ ನಾನು ತುಂಬಾ ಉತ್ಸುಕಳಾಗಿದ್ದೆ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ನಿಂತು ವಾದ ಮಂಡನೆ ಮಾಡಿದ್ದು ತುಂಬಾ ಸಂತಸ ತಂದಿದೆ. ಈ ಸಮಯದಲ್ಲಿ ನನ್ನ ತಂದೆ-ತಾಯಿ ಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಈ ಹಿಂದೆ ನಾನು ಲಿಖಿತ ರೂಪದಲ್ಲಿ ನನ್ನ ಪ್ರಕರಣದ ಎಲ್ಲಾ ಸಮಸ್ಯೆಗಳನ್ನು ವಿವಿಧ ನ್ಯಾಯಾಲಯಗಳ ಮುಂದೆ ಮಂಡಿಸುತ್ತಿದ್ದೆ ಎಂದಿದ್ದಾರೆ.

ಸಾರಾ ಸಾಮಾನ್ಯ ಮಕ್ಕಳಂತೆಯೇ ಕಲಿತಿದ್ದರು ಸಾರಾ ಓದಿದ ಶಾಲೆ ಕಿವುಡ ಮಕ್ಕಳದ್ದಾಗಿರಲಿಲ್ಲ ಹಾಗಾಗಿ ಬರವಣಿಗೆಯ ಮೂಲಕವೇ ಸಾರಾ ಇತರರೊಂದಿಗೆ ಸಂವನ ನಡೆಸುತ್ತಿದ್ದರು. ಸಮಸ್ಯೆ ಎದುರಾದಾಗಲೆಲ್ಲಾ ತಂದೆಯ ಸಹಾಯ ಪಡೆಯುತ್ತಿದ್ದರು. ಆಗ ನಿರಂತರವಾಗಿ ಅಭ್ಯಾಸ ಮಾಡುತ್ತಾ ವಿಷಯ ಅರ್ಥ ಮಾಡಿಕೊಳ್ಳುತ್ತಿದ್ದರು. ಈ ಮೂಲಕ ಸಾರಾ ತನ್ನ ಕೊರತೆಗಳ ಬಗ್ಗೆ ಹೆಚ್ಚು ಚಿಂತಿಸದೆ ತನ್ನ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ಸಾರಾ ಕುಟುಂಬದ ಬಗ್ಗೆ ಮಾಹಿತಿ ಸಾರಾಳ ಅವಳಿ ಸಹೋದರಿ ಮಾರಿಯಾ ಮತ್ತು ಹಿರಿಯ ಸಹೋದರ ಪ್ರತೀಕ್ ಕೂಡ ದಿವ್ಯಾಂಗರು, ಮಾರಿಯಾ ಸಿಎ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದರೆ ಅಣ್ಣ ಪ್ರತೀಕ್ ಅಮೆರಿಕದಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮೊದಲಿನಿಂದಲೂ ಕಾನೂನಿನ ಬಗ್ಗೆ ಹೆಚ್ಚಿನ ಆಸಕ್ತಿ ಸಾರಾ ಮೊದಲಿನಿಂದಲೂ ಕಾನೂನಿನ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಎಲ್ಲಾ ಬಾಗಿಲುಗಳು ಮುಚ್ಚಿರುವಾಗ ದೇವರು ಯಾವುದೋ ಒಂದು ಕಿಟಕಿಯನ್ನು ತೆರೆದಿರುತ್ತಾನೆ ಎಂದು ಬಲವಾಗಿ ನಂಬಿದ್ದರು, ಸದಾ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿದ್ದರೆ ಯಶಸ್ಸು ಖಚಿತ ಎನ್ನುವ ಆತ್ಮವಿಶ್ವಾಸವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ