ಸುಪ್ರೀಂ ಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೊವಿಡ್ ಪಾಸಿಟಿವ್ ದೃಢ

ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳಿಗೂ ಕೊವಿಡ್ ಪಾಸಿಟಿವ್ ದೃಢಪಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸೋಮವಾರ ವರ್ಚುವಲ್ ಮೂಲಕ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗುವುದು.

ಸುಪ್ರೀಂ ಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೊವಿಡ್ ಪಾಸಿಟಿವ್ ದೃಢ
ಸುಪ್ರೀಂಕೋರ್ಟ್​
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 08, 2022 | 9:30 PM

ನವದೆಹಲಿ: ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳಿಗೆ ಭಾರೀ ಬಿಗಿಭದ್ರತೆ ಇರುತ್ತದೆ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಆದರೆ, ಕಟ್ಟುನಿಟ್ಟಿನ ನಿಗಾದಲ್ಲಿದ್ದ ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳಿಗೂ ಕೊವಿಡ್ ಪಾಸಿಟಿವ್ ದೃಢಪಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸೋಮವಾರ ವರ್ಚುವಲ್ ಮೂಲಕ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗುವುದು. ಹಾಗೇ, ತೀವ್ರ ತುರ್ತಾಗಿ ನಡೆಸಬೇಕಾದ ಪ್ರಕರಣಗಳ ವಿಚಾರಣೆಯನ್ನು ಮಾತ್ರ ಈ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ.

ಒಂದೆಡೆ ಭಾರತದಲ್ಲಿ ಕೊವಿಡ್ ಕೇಸುಗಳು ಹೆಚ್ಚಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಇನ್ನೊಂದೆಡೆ ಸಚಿವರು, ಶಾಸಕರು, ಸಂಸದರು, ಐಎಎಸ್​-ಐಪಿಎಸ್ ಅಧಿಕಾರಿಗಳು, ಸೆಲೆಬ್ರಿಟಿಗಳು ಸೇರಿದಂತೆ ಗಣ್ಯರಿಗೂ ಕೊರೊನಾ ಸೋಂಕು ತಗುಲುತ್ತಿದೆ. ಇದೀಗ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಿಗೂ ಕೊವಿಡ್ ವೈರಸ್ ತಗುಲಿದೆ.

ಕೊವಿಡ್ ಸೋಂಕು ತಗುಲಿರುವ ಸುಪ್ರೀಂ ಕೋರ್ಟ್​ನ ನಾಲ್ವರು ಜಡ್ಜ್​ಗಳ ಪೈಕಿ ಓರ್ವ ನ್ಯಾಯಮೂರ್ತಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನುಳಿದ ಮೂವರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಜನವರಿ 10ರಿಂದ ಸುಪ್ರೀಂ ಕೋರ್ಟ್​ನ ವಿಚಾರಣೆಗಳು ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆಯಲಿದೆ.

ಸುಪ್ರೀಂ ಕೋರ್ಟ್​ ಮಾತ್ರವಲ್ಲದೆ ಹಲವು ರಾಜ್ಯಗಳ ಹೈಕೋರ್ಟ್​ಗಳ ನ್ಯಾಯಮೂರ್ತಿಗಳಿಗೆ ಕೂಡ ಕೊರೊನಾವೈರಸ್​ ದೃಢಪಟ್ಟಿದೆ. ಬಾಂಬೆ ಹೈಕೋರ್ಟ್, ಕಲ್ಕತ್ತಾ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಹೀಗಾಗಿ, ಹೈಕೋರ್ಟ್​ಗಳಲ್ಲೂ ವರ್ಚುವಲ್ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ; ಕೊವಿಡ್ ವಾರ್ ರೂಂ ಮುಖ್ಯಸ್ಥ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್​ಗೆ ರಾಷ್ಟ್ರ ಪ್ರಶಸ್ತಿ

ಕೊರೊನಾ ತಗುಲುವ ಭೀತಿಯಲ್ಲಿ ಕೊವಿಡ್​ ಸೋಂಕಿತ ಮಗನನ್ನು ಕಾರ್ ಡಿಕ್ಕಿಯೊಳಗೆ ಲಾಕ್ ಮಾಡಿದ ತಾಯಿ!