ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ; ಕೊವಿಡ್ ವಾರ್ ರೂಂ ಮುಖ್ಯಸ್ಥ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್​ಗೆ ರಾಷ್ಟ್ರ ಪ್ರಶಸ್ತಿ

ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆ; ಕೊವಿಡ್ ವಾರ್ ರೂಂ ಮುಖ್ಯಸ್ಥ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್​ಗೆ ರಾಷ್ಟ್ರ ಪ್ರಶಸ್ತಿ
ಪ್ರಶಸ್ತಿ ಸ್ವೀಕರಿಸಿದ ಐಎಎಸ್​ ಅಧಿಕಾರಿ ಮೌನೀಶ್ ಮೌದ್ಗಿಲ್

Munish Moudgil IAS: ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡ ಕೊವಿಡ್ ರೂಂ ನಿರ್ವಹಣೆಯಲ್ಲಿ ಸಮಪರ್ಕವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಕೇಂದ್ರ ಸರ್ಕಾರದ ಇ-ಆಡಳಿತ ಪ್ರಶಸ್ತಿ ಪಡೆದಿರುವ ಐಎಎಸ್​ ಅಧಿಕಾರಿ ಮೌನೀಶ್ ಮೌದ್ಗಿಲ್ ತಂಡಕ್ಕೆ ಅಭಿನಂದಿಸಿದ್ದಾರೆ.

TV9kannada Web Team

| Edited By: Sushma Chakre

Jan 08, 2022 | 8:55 PM

ಬೆಂಗಳೂರು: ಡಿಜಿಟಲೀಕರಣವಾಗುತ್ತಿರುವ ಭಾರತದಲ್ಲಿ ದಿನನಿತ್ಯ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ತಂತ್ರಜ್ಞಾನದಿಂದ ಆಡಳಿತದ ಕೆಲಸಗಳೂ ಸುಲಭವಾಗಿವೆ. ಕರ್ನಾಟಕ ಕೂಡ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದು, ಕರ್ನಾಟಕ ಕೊವಿಡ್ ವಾರ್ ರೂಮ್ ಮುಖ್ಯಸ್ಥರಾದ ಐಎಎಸ್​ ಅಧಿಕಾರಿ ಮುನೀಶ್ ಮೌದ್ಗಿಲ್ ಮತ್ತು ಅವರ ತಂಡವು ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನ, ಡಿಜಿಟಲೀಕರಣವನ್ನು ಬಳಸಿದ್ದಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗುರವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಭಾರತ ಸರ್ಕಾರದ ಇ-ಆಡಳಿತ ಪ್ರಶಸ್ತಿ ಐಎಎಸ್​ ಅಧಿಕಾರಿ ಮೌನೀಶ್ ಮೌದ್ಗಿಲ್ ಪಾತ್ರರಾಗಿದ್ದಾರೆ. ಶುಕ್ರವಾರ ಹೈದರಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಪ್ರಶಸ್ತಿಯನ್ನು ವಿತರಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ (ಐಸಿಟಿ) ಬಳಕೆಗಾಗಿ ಕರ್ನಾಟಕದ ಕೊವಿಡ್ -19 ವಾರ್ ರೂಮ್‌ಗೆ ಕೇಂದ್ರದ ಇ-ಆಡಳಿತ ಪ್ರಶಸ್ತಿಯನ್ನು ನೀಡಲಾಗಿದೆ. ಕರ್ನಾಟಕ ರಾಜ್ಯ ಕೊವಿಡ್ -19 ವಾರ್ ರೂಮ್‌ನ ಹಿಂದಿನ ಮೆದುಳಾಗಿರುವ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಐಎಎಸ್​ ಮೌನೀಶ್ ಮೌದ್ಗಿಲ್ ತಂತ್ರಜ್ಞಾನವನ್ನು ಆಡಳಿತದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಈ ಹಿಂದೆಯೂ ನಾನಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಹಿಂದೆ ಕೊರೊನಾ ದೇಶಾದ್ಯಂತ ಹರಡಿ ಮೊದಲ ಬಾರಿಗೆ ಲಾಕ್​ಡೌನ್ ಆದ ಸಂದರ್ಭದಲ್ಲಿ ಕ್ವಾರಂಟೈನ್​ಗೆ ಒಳಗಾದ ವ್ಯಕ್ತಿಗಳು ಹೊರಗೆ ಓಡಾಡುವುದನ್ನು ಪತ್ತೆಹಚ್ಚಲು ಐಎಎಸ್​ ಅಧಿಕಾರಿ ಮೌನೀಶ್ ಮೌದ್ಗಿಲ್ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಮೌನೀಶ್ ಮೌದ್ಗಿಲ್ ಅವರ ಪತ್ನಿ, ಕರ್ನಾಟಕದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಟ್ವಿಟ್ಟರ್​ನಲ್ಲಿ ತಮ್ಮ ಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡ ಕೊವಿಡ್ ರೂಂ ನಿರ್ವಹಣೆಯಲ್ಲಿ ಸಮಪರ್ಕವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಕೇಂದ್ರ ಸರ್ಕಾರದ ಇ-ಆಡಳಿತ ಪ್ರಶಸ್ತಿ ಪಡೆದಿರುವ ಐಎಎಸ್​ ಅಧಿಕಾರಿ ಮೌನೀಶ್ ಮೌದ್ಗಿಲ್ ತಂಡಕ್ಕೆ ಅಭಿನಂದಿಸಿದ್ದಾರೆ. ಆಂತರಿಕ ಮೊಬೈಲ್ ಅಪ್ಲಿಕೇಶನ್‌ಗಳಾಗಿರಲಿ ಅಥವಾ ಸಂಪೂರ್ಣ ಸುಸಜ್ಜಿತ ವಾರ್ ರೂಮ್ ಆಗಿರಲಿ, ಕರ್ನಾಟಕದ ತಂತ್ರಜ್ಞಾನ ಚಾಲಿತ ಕೋವಿಡ್ ನಿರ್ವಹಣೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ 1998 ಕೇಡರ್ ಐಎಎಸ್ ಅಧಿಕಾರಿ ಮತ್ತು ರಾಜ್ಯ ಕೋವಿಡ್ -19 ವಾರ್ ರೂಮ್ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಈ ಹಿಂದೆ ಭೂ ದಾಖಲೆ ವಿಭಾಗದಲ್ಲಿದ್ದಾಗಲೂ ಡಿಜಿಟಲ್ ತಂತ್ರಜ್ಞಾನ ಅಳವಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಶ್ರಮದಿಂದ ಬೇನಾಮಿ ಆಸ್ತಿ ಸೃಷ್ಟಿ ಮಾಡುವವರಿಗೆ ಬ್ರೇಕ್ ಬಿದ್ದಿತ್ತು. ಹಾಗೇ, ಈ ಹಿಂದೆ 2020ರಲ್ಲಿ ಕೊರೊನಾ ಮೊದಲ ಅಲೆ ಕಾಣಿಸಿಕೊಂಡಾಗ ಕ್ವಾರಂಟೈನ್​ಗೆ ಒಳಗಾದ ವ್ಯಕ್ತಿಗಳು ಹೊರಗೆ ಓಡಾಡುವುದನ್ನು ಪತ್ತೆಹಚ್ಚಲು ಐಎಎಸ್​ ಅಧಿಕಾರಿ ಮೌನೀಶ್ ಮೌದ್ಗಿಲ್ ಹಾಗೂ ಅವರ ತಂಡ ಕ್ವಾರಂಟೈನ್ ವಾಚ್ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿತ್ತು.

ಹೀಗಾಗಿ, ಮೆಟ್ರೋ ಮ್ಯಾನ್​ ಶ್ರೀಧರನ್ ಅವರಂತೆ ಮೌನೀಶ್ ಮೌದ್ಗಿಲ್ ಅವರನ್ನು ಟೆಕ್ ಮೌದ್ಗಿಲ್ ಎಂದು ಕರೆದರೂ ತಪ್ಪಾಗಲಾರದು. ಶುಕ್ರವಾರ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಇ-ಆಡಳಿತದ 24 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮೌನೀಶ್ ಮೌದ್ಗಿಲ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಬೆಡ್ ಹಂಚಿಕೆ, ಕೊವಿಡ್ ವಾರ್ ರೂಮ್ ನಿರ್ವಹಣೆ ಬಗ್ಗೆ ಅರವಿಂದ ಲಿಂಬಾವಳಿ ಮಾಹಿತಿ; ಸಂಪೂರ್ಣ ವಿವರ ಇಲ್ಲಿದೆ

3ನೇ ಅಲೆ ನಿರ್ವಹಣೆಗೆ ತಂಡ ರೂಪಿಸಿದ ಕರ್ನಾಟಕ ಸರ್ಕಾರ: ಕೊವಿಡ್ ವಾರ್​ರೂಂಗೆ ಮುನಿಶ್ ಮೌದ್ಗಿಲ್ ನೇತೃತ್ವ

Follow us on

Related Stories

Most Read Stories

Click on your DTH Provider to Add TV9 Kannada