ಬೆಡ್ ಹಂಚಿಕೆ, ಕೊವಿಡ್ ವಾರ್ ರೂಮ್ ನಿರ್ವಹಣೆ ಬಗ್ಗೆ ಅರವಿಂದ ಲಿಂಬಾವಳಿ ಮಾಹಿತಿ; ಸಂಪೂರ್ಣ ವಿವರ ಇಲ್ಲಿದೆ
ಅವ್ಯವಹಾರಗಳನ್ನು ತಡೆಯಲು ಈ ಕ್ರಮಕೈಗೊಂಡಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ವಾರ್ ರೂಮ್, ಹೆಲ್ಪ್ಲೈನ್ ಇದೆ. ರಾಜ್ಯದ 57 ತಾಲೂಕುಗಳಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆದಿದ್ದೇವೆ. ಉಳಿದ ತಾಲೂಕುಗಳಲ್ಲೂ ಕೇರ್ ಸೆಂಟರ್ ತೆರೆಯುತ್ತೇವೆ ಎಂದು ಅರವಿಂದ ಲಿಂಬಾವಳಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಇನ್ಮುಂದೆ ಬೆಡ್ ಹಂಚಿಕೆ ಆಗುವವರಿಗೆ ಎಸ್ಎಮ್ಎಸ್ ಕಳಿಸುತ್ತೇವೆ. ಈ ಮೊದಲು ಬೆಡ್ ಹಂಚಿಕೆ ಆಗಲು 12 ಗಂಟೆ ಸಮಯ ಆಗುತ್ತಿತ್ತು. ಈಗ ಈ ಅವಧಿಯನ್ನು 12 ಗಂಟೆ ಬದಲು 4 ಗಂಟೆಗೆ ಇಳಿಕೆ ಮಾಡಲಾಗಿದೆ. ಬೆಡ್ ಹಂಚಿಕೆಯಾದ 4 ಗಂಟೆಯೊಳಗೆ ಸಂಬಂಧಪಟ್ಟವರು ಆಸ್ಪತ್ರೆಗೆ ದಾಖಲಾಗಬೇಕು ಎಂದು ವಿಧಾನಸೌಧದಲ್ಲಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.
4 ಗಂಟೆಯೊಳಗೆ ರೋಗಿ ಆಸ್ಪತ್ರೆಗೆ ದಾಖಲಾಗಬೇಕು. ಅವ್ಯವಹಾರಗಳನ್ನು ತಡೆಯಲು ಈ ಕ್ರಮಕೈಗೊಂಡಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ವಾರ್ ರೂಮ್, ಹೆಲ್ಪ್ಲೈನ್ ಇದೆ. ರಾಜ್ಯದ 57 ತಾಲೂಕುಗಳಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆದಿದ್ದೇವೆ. ಉಳಿದ ತಾಲೂಕುಗಳಲ್ಲೂ ಕೇರ್ ಸೆಂಟರ್ ತೆರೆಯುತ್ತೇವೆ ಎಂದು ಅರವಿಂದ ಲಿಂಬಾವಳಿ ಮಾಹಿತಿ ನೀಡಿದ್ದಾರೆ.
ಲಸಿಕೆಯ ಎರಡನೇ ಡೋಸ್ಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದಾರೆ. ಅದನ್ನು ಕೂಡ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ವಾರ್ ರೂಮ್ ಇರುತ್ತದೆ ಅದರಲ್ಲಿ ಪ್ರತಿಯೊಂದು ವಿವರಗಳು ಇರಬೇಕು. ಅದನ್ನು ಡ್ಯಾಶ್ ಬೋರ್ಡ್ನಲ್ಲಿ ಹಾಕಬೇಕು. ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಬೆಡ್ ಡಿಸ್ಪ್ಲೇ ಮಾಡಬೇಕು. ಅದರ ಸಂಪೂರ್ಣ ವಿವರ ಮಂಗಳವಾರ ನೀಡುತ್ತೇವೆ. ಬೆಂಗಳೂರಿನಲ್ಲಿ ಕಮಾಂಡಿಂಗ್ ಸೆಂಟರ್ನಲ್ಲಿ ನಿರ್ವಹಣೆ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೊವಿಡ್ ವಾರ್ ರೂಂ ಉಸ್ತುವಾರಿಯನ್ನು ಅರವಿಂದ ಲಿಂಬಾವಳಿಗೆ ನೀಡಲಾಗಿದೆ. ಈ ಬಗ್ಗೆ 3-4 ದಿನಗಳಿಂದ ವಾರ್ ರೂಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿಧಾನಸೌಧದಲ್ಲಿ ಲಿಂಬಾವಳಿ ತಿಳಿಸಿದರು. ವಲಯವಾರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿರುವೆ. ಕಾಲ್ ಸೆಂಟರ್ 1912ಗೂ ಭೇಟಿ ಮಾಡಿದ್ದೇನೆ. ನೋಡಲ್ ಅಧಿಕಾರಿಗಳ ಜತೆಯೂ ಸಭೆ ನಡೆಸಲಾಗಿದೆ. ಮುಂಬೈನಲ್ಲಿ ಸೋಂಕು ತಡೆ ನಡೆಸಿದ ಬಗ್ಗೆ ಅಧ್ಯಯನ ನಡೆಸಿದ್ದೇವೆ. ವಾರ್ಡ್ ಮಟ್ಟದಲ್ಲಿ ತುರ್ತು ಸೇವೆ ಒದಗಿಸಲು ಸಮಿತಿ ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಲಿಂಬಾವಳಿ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ರಾಜ್ಯದ ಅರ್ಧದಷ್ಟು ಕೇಸ್‌ಗಳಿವೆ. ಬೆಂಗಳೂರಿನಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ವಾರ್ಡ್‌ವಾರು ಜನಪ್ರತಿನಿಧಿಗಳು, ಸ್ವಯಂ ಸೇವಕರು, ಅಧಿಕಾರಿಗಳನ್ನೊಳಗೊಂಡ 50 ಜನರ ಸಮಿತಿ ರಚಿಸುತ್ತೇವೆ. ಈ ಸಮಿತಿ ವಾರ್ಡ್‌ವಾರು ಕೇಸ್ ತಡೆಯಲು ಶ್ರಮಿಸುತ್ತದೆ. ಪ್ರತಿ ವಾರ್ಡ್‌ನಲ್ಲಿ ನಿತ್ಯ 100-150 ಕೇಸ್‌ಗಳು ಬರುತ್ತಿವೆ. ವಾರ್ಡ್‌ಗಳನ್ನು ವಲಯ ಮಟ್ಟದಲ್ಲೇ ನಿರ್ವಹಿಸುತ್ತಿದ್ದಾರೆ. ಇದನ್ನು ತಪ್ಪಿಸಲು ವಾರ್ಡ್ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಶೇ.85ರಷ್ಟು ಜನ ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಹೋಮ್ ಐಸೋಲೇಷನ್‌ನಲ್ಲಿರುವವರಿಗೆ ಕಿಟ್ ಕೊಡ್ತೇವೆ. ಟೆಲಿ ಕನ್ಸಲ್ಟೆನ್ಸಿ ಮೂಲಕ ಅವರ ಆರೋಗ್ಯ ವಿಚಾರಿಸುತ್ತೇವೆ ಎಂದೂ ಲಿಂಬಾವಳಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ನಡುವೆ ಅಮಾನುಷ ಕೆಲಸ: ದೇಶದ ವಿವಿಧೆಡೆ ನಕಲಿ ರೆಮಿಡಿಸಿವಿರ್ ಮಾರಾಟ; ಪೊಲೀಸರಿಂದ ಖದೀಮರ ಬಂಧನ
ಗ್ರಾಮೀಣ ಭಾಗದ ಜನರಿಗೆ ನನ್ನ ನೆರವು ಬಳಕೆಯಾಗಲಿ! ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಿಷಭ್ ಪಂತ್
Published On - 7:42 pm, Sat, 8 May 21