ಡಿಜಿಟಲ್ ಡಿವೈಡ್ ಇರುವ ದೇಶದಲ್ಲಿ ಲಸಿಕೆ ಪಡೆಯಲು ಕೊವಿನ್ ಪೋರ್ಟಲ್​ನಲ್ಲಿ ಕಡ್ಢಾಯ ನೋಂದಣಿ ಹೇಗೆ ಸಾಧ್ಯ? ಸುಪ್ರೀಂಕೋರ್ಟ್

|

Updated on: May 31, 2021 | 3:30 PM

Supreme Court On Digital Divide: ದೇಶಾದ್ಯಂತ ಏನಾಗುತ್ತಿದೆ ಎಂದು ಕೇಂದ್ರ ಸರ್ಕಾರ ಗಮನಿಸಬೇಕು. ತನ್ನ ನೀತಿಯನ್ನು ಅದಕ್ಕನುಗುಣವಾಗಿ ಬದಲಾಯಿಸಬೇಕು ಎಂದು ಕೊವಿಡ್ ಲಸಿಕೆ ಪಡೆಯಲು ಇದ್ದ ಕಡ್ಡಾಯ ನೋಂದಣಿ ಪ್ರಕ್ರಿಯೆಯ ವಿರುದ್ಧ ತನ್ನ ನಿಲುವು ವ್ಯಕ್ತಪಡಿಸಿದೆ. 

ಡಿಜಿಟಲ್ ಡಿವೈಡ್ ಇರುವ ದೇಶದಲ್ಲಿ ಲಸಿಕೆ ಪಡೆಯಲು ಕೊವಿನ್ ಪೋರ್ಟಲ್​ನಲ್ಲಿ ಕಡ್ಢಾಯ ನೋಂದಣಿ ಹೇಗೆ ಸಾಧ್ಯ?  ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್​
Follow us on

ದೆಹಲಿ: ಕೊವಿಡ್​ ಸೋಂಕಿಗೆ ಲಸಿಕೆ ಪಡೆಯಲು ಕೊವಿನ್ ಪೋರ್ಟಲ್​ನಲ್ಲಿ ಕಡ್ಡಾಯ ನೋಂದಣಿ ಮಾಡಬೇಕಾದ ಪದ್ಧತಿಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ದೇಶದಲ್ಲಿ ಕೊವಿಡ್ ನಿರ್ವಹಣೆಯ ಕುರಿತು ಸ್ವಯಂ ಪ್ರೇರಿತ ದೂರಿನ ವಿಚಾರಣೆ ನಡೆಸಿದ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠ, ಈ ಪದ್ಧತಿಯ ಅನುಸರಣೆಯಿಂದ ದೇಶದ ಗ್ರಾಮೀಣ ಭಾಗದ ಜನರು ಸಮಸ್ಯೆ ಎದುರಿಸುತ್ತಾರೆ. ನೀತಿ ರೂಪಿಸುವವರು ಜನರ ಅಭಿಪ್ರಾಯ ತಿಳಿದಿರಬೇಕು. ದೇಶದ ತಳಮಟ್ಟದ ಜನರ ಅಭಿಪ್ರಾಯ ತಿಳಿದಿರಬೇಕು. ಅವರ ಅಭಿಪ್ರಾಯ ಕುಂದು ಕೊರತೆಗಳನ್ನೂ ಆಲಿಸಿ ನೀತಿಗಳನ್ನು ರೂಪಿಸಬೇಕು. ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ವೇಳೆ ಸುಪ್ರೀಂಕೋರ್ಟ್​ಗೆ ಉತ್ತರಿಸಿದ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟವರು ನೇರವಾಗಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು. 45 ವರ್ಷ ಮೇಲ್ಪಟ್ಟವರಿಗೆ ಕೊವಿನ್ ಪೋರ್ಟಲ್​ನಲ್ಲಿ ರಿಜಿಸ್ಟ್ರೇಷನ್ ಕಡ್ಡಾಯವಲ್ಲ ಎಂದು ತಿಳಿಸಿದೆ. ಜತೆಗೆ ಕೊರೊನಾ ಲಸಿಕಾ ನೀತಿಯ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಭಾರತದ ಸಮಾಜದಲ್ಲಿ ಡಿಜಿಟಲ್ ಡಿವೈಡ್ ಪರಿಸ್ಥಿತಿ ಇದೆ. ಎಲ್ಲರಿಗೂ ಅಂತರ್ಜಾಲ ಸೌಲಭ್ಯ ದೊರೆಯುವ ಮತ್ತು ಬಳಸುವ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ದೇಶಾದ್ಯಂತ ಏನಾಗುತ್ತಿದೆ ಎಂದು ಕೇಂದ್ರ ಸರ್ಕಾರ ಗಮನಿಸಬೇಕು. ತನ್ನ ನೀತಿಯನ್ನು ಅದಕ್ಕನುಗುಣವಾಗಿ ಬದಲಾಯಿಸಬೇಕು ಎಂದು ಕೊವಿಡ್ ಲಸಿಕೆ ಪಡೆಯಲು ಇದ್ದ ಕಡ್ಡಾಯ ನೋಂದಣಿ ಪ್ರಕ್ರಿಯೆಯ ವಿರುದ್ಧ ತನ್ನ ನಿಲುವು ವ್ಯಕ್ತಪಡಿಸಿದೆ.

ದೇಶದಲ್ಲಿ ಕೊವಿಡ್ ಲಸಿಕೆಗಳಿಗೆ ಇರುವ ಭಿನ್ನ ದರಗಳ ಕುರಿತೂ ಕೇಂದ್ರ ಸರ್ಕಾರದ ಕಿವಿ ಹಿಂಡಿರುವ ಸುಪ್ರೀಂಕೋರ್ಟ್, ದೇಶದ ಎಲ್ಲೆಡೆ ಕೊವಿಡ್ ಲಸಿಕೆಗೆ ಒಂದೇ ದರವನ್ನು ನಿಗದಿಪಡಿಸಬೇಕು. ಈ ಕುರಿತು ಸಮರ್ಪಕ ನಿಯಮ ರೂಪಿಸಿ ಎಂದು ನಿರ್ದೇಶನ ನೀಡಿದೆ.

ನದಿಗೆ ಶವ ಎಸೆದ ಫೋಟೊ ಪ್ರಸಾರ: ದೇಶದ್ರೋಹವೇ?
ದೇಶದಲ್ಲಿ ಕೊವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಬಗೆಗಿನ ವಿಚಾರಣೆಯ ವೇಳೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಅಭಿಪ್ರಾಯವೊಂದು ಬಿಜೆಪಿ ನೇತೃತ್ವದ ಸರ್ಕಾರಗಳ ಕುರಿತು ತೀವ್ರ ಸಂಚಲನ ಸೃಷ್ಟಿಸಿದೆ. ನಿನ್ನೆ ಸುದ್ದಿ ವಾಹಿನಿಯೊಂದರಲ್ಲಿ ಶವವನ್ನು ನದಿಗೆ ಎಸೆಯುವ ಫೋಟೋ ವೀಕ್ಷಿಸಿದೆ. ಆ ದೃಶ್ಯವನ್ನು ಪ್ರಸಾರ ಮಾಡಿದ ಕಾರಣಕ್ಕೆ ಆ ಸುದ್ದಿ ವಾಹಿನಿಯ ವಿರುದ್ಧ ಈಗಾಗಲೇ ದೇಶದ್ರೋಹದ ಪ್ರಕರಣ ದಾಖಲಾಗಿದೆಯೇ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ವ್ಯಂಗ್ಯಭರಿತ ದಾಟಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಆಳ್ವಿಕೆಯನ್ನು ಸ್ವತಃ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ. ಅಥವಾ ಟೀಕೆ ಮಾಡುವ ಆಲೋಚನೆಯೂ ಇಲ್ಲ. ಸುಪ್ರೀಂಕೋರ್ಟ್​ಗೆ ಸರ್ಕಾರದ ಕೈಗಳನ್ನು ಬಲಪಡಿಸುವ ಉದ್ದೇಶವಿದೆ. ಕೋರ್ಟ್ ವಿಚಾರಣೆ ನಡೆಸುವ ಉದ್ದೇಶ ಪರ-ವಿರೋಧ ಚರ್ಚೆ ಮಾಡುವುದಷ್ಟೇ ಆಗಿದೆ ಎಂದು ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೊವಿಡ್​ ಮತ್ತೆ ಆವರಿಸಿದೆ ಚೀನಾದಲ್ಲಿ; ಲಸಿಕೆ ಪಡೆಯಲು ಜನ ಪರದಾಟ; ಹೊಸ ಕೇಸ್​ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟ ರದ್ದು

ಕೊವಿಡ್ ಸಂಕಷ್ಟದಲ್ಲಿಯೂ 4 ಲಕ್ಷ ಕಾರ್ಮಿಕರಿಗೆ ಜೀವನಾಧಾರವಾದ ಅಗರಬತ್ತಿ ಉದ್ಯಮ

Published On - 2:53 pm, Mon, 31 May 21