ವೈಯಕ್ತಿಕ ದ್ವೇಷವು ಧರ್ಮದ ಗಲಾಟೆ ಅಲ್ಲ ಎಂದ ಕೇಂದ್ರ, ಕರ್ನಾಟಕ ಸೇರಿದಂತೆ 7 ರಾಜ್ಯಗಳ ಪರಿಶೀಲನಾ ವರದಿ ಪಡೆಯುವಂತೆ ‘ಸುಪ್ರೀಂ’ ಸೂಚನೆ
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ದಾಳಿಕೋರರ ವಿರುದ್ಧ ಸೂಕ್ತ ಕ್ರಮ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವೈಯಕ್ತಿಕ ದ್ವೇಷದ ಗಲಾಟೆಗಳನ್ನು ಧರ್ಮದ ಕಾರಣಕ್ಕಾಗಿ ಆದ ಗಲಾಟೆ ಎನ್ನಲಾಗದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನವದೆಹಲಿ: ಕರ್ನಾಟಕ ಸೇರಿದಂತೆ 7 ರಾಜ್ಯಗಳ ಪರಿಶೀಲನಾ ವರದಿ ಪಡೆಯುವಂತೆ ಕೇಂದ್ರ ಗೃಹ ಇಲಾಖೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಕ್ರಿಶ್ಚಿಯನ್ ಸಂಸ್ಥೆ, ಪಾದ್ರಿಗಳ ಮೇಲಿನ ನಡೆದ ದಾಳಿ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತಾದ ಮಾಹಿತಿ ಇದಾಗಿದೆ. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, FIR ದಾಖಲು, ತನಿಖೆ ಸ್ಥಿತಿಗತಿ, ಬಂಧನದ ವಿವರ, ಚಾರ್ಜ್ಶೀಟ್ ಸಲ್ಲಿಕೆಯ ವಿವರ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court ) ಸೂಚಿಸಿದೆ.
ಎರಡು ತಿಂಗಳಲ್ಲಿ ರಾಜ್ಯ ಸರ್ಕಾರಗಳು ಪರಿಶೀಲನಾ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಗಡುವು ನಿಗದಿಪಡಿಸಿದೆ. ಬಳಿಕ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಬೇಕು ಎಂದೂ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ದಾಳಿಕೋರರ ವಿರುದ್ಧ ಸೂಕ್ತ ಕ್ರಮ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ವೈಯಕ್ತಿಕ ದ್ವೇಷದ ಗಲಾಟೆಗಳನ್ನು ಧರ್ಮದ ಕಾರಣಕ್ಕಾಗಿ ಆದ ಗಲಾಟೆ ಎನ್ನಲಾಗದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದರೆ ವಕೀಲ ಕಾಲಿನ್ ಗೋಸಾಲ್ವೆನ್ ಅವರು ಪ್ರಾರ್ಥನಾ ಸಭೆಗಳಿಗೆ ಅಡ್ಡಿ ಮಾಡಲಾಗಿದೆ. ಚರ್ಚ್ ಫಾದರ್ ಗಳ ದಾಳಿಯಾಗಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ 700 ಘಟನೆಗಳು ನಡೆದಿವೆ. ಆರೋಪಿಗಳ ವಿರುದ್ಧ 53 ದೂರು ನೀಡಲಾಗಿದೆ, 23 ಮಂದಿಯನ್ನು ಬಂಧಿಸಲಾಗಿದೆ. ಆದರೆ 510 ಫಾಸ್ಟರ್ ಗಳನ್ನು ಮಾತ್ರವೇ ಬಂಧಿಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದಾಗ ಕೋರ್ಟ್ ಮೇಲಿನ ಸೂಚನೆ ನೀಡಿದೆ.