ಪೆಂಟಗನ್ನ್ನು ಮೀರಿಸಿ ವಿಶ್ವದ ಅತೀ ದೊಡ್ಡ ಕಚೇರಿ ಕಟ್ಟಡ ಎಂದು ಹೆಗ್ಗಳಿಕೆಗೆ ಪಾತ್ರವಾದ ಸೂರತ್‌ನ ವಜ್ರ ವ್ಯಾಪಾರ ಸಂಸ್ಥೆ
ವಿಸ್ತಾರವಾದ ಸಂಕೀರ್ಣವನ್ನು ನಿರ್ಮಿಸಿದ ಕಂಪನಿಯ ಪ್ರಕಾರ, ಇದರ ವ್ಯಾಪ್ತಿ 7.1 ಮಿಲಿಯನ್ ಚದರ ಅಡಿಗಳಷ್ಟು ಇದೆ. ಈ ಕಟ್ಟಡವನ್ನು ಈ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲು ನಾಲ್ಕು ವರ್ಷ ಬೇಕಾಯಿತು.
ಅಹಮದಾಬಾದ್ ಜುಲೈ 19: 80 ವರ್ಷಗಳ ಕಾಲ ಪೆಂಟಗನ್ (Pentagon) ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವಾಗಿತ್ತು. ಆದರೆ ಈಗ ಆ ಹೆಗ್ಗಳಿಕೆ ಗುಜರಾತ್‌ನ ಸೂರತ್‌ನಲ್ಲಿ (Surat) ವಜ್ರದ ವ್ಯಾಪಾರ ಕೇಂದ್ರವನ್ನು ಹೊಂದಿರುವ ಕಟ್ಟಡವೊಂದು ಪಡೆದುಕೊಂಡಿದೆ ಎಂದು ಸಿಎನ್‌ಎನ್ ವರದಿ ತಿಳಿಸಿದೆ. ಸೂರತ್ ಅನ್ನು ವಿಶ್ವದ ರತ್ನಗಳ ರಾಜಧಾನಿ ಎಂದು ಕರೆಯಲಾಗುತ್ತದೆ, ಅಲ್ಲಿ ವಿಶ್ವದ 90 ಪ್ರತಿಶತದಷ್ಟು ವಜ್ರಗಳನ್ನು ಕಟ್ ಮಾಡಲಾಗುತ್ತದೆ.ಹೊಸದಾಗಿ ನಿರ್ಮಿಸಲಾದ ಸೂರತ್ ಡೈಮಂಡ್ ಬೋರ್ಸ್ (Surat Diamond Bourse) 65,000 ಕ್ಕೂ ಹೆಚ್ಚು ವಜ್ರ ವೃತ್ತಿಪರರಿಗೆ “ಒನ್ ಸ್ಟಾಪ್ ಡೆಸ್ಟಿನೇಶನ್” ಆಗಿದ್ದು, ಇದರಲ್ಲಿ ಕಟ್ಟರ್, ಪಾಲಿಷರ್ ಮತ್ತು ವ್ಯಾಪಾರಿಗಳು ಇದ್ದಾರೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ 15 ಅಂತಸ್ತಿನ ಕಟ್ಟಡವು 35 ಎಕರೆ ಭೂಮಿಯಲ್ಲಿದ್ದು, ಒಂಬತ್ತು ಆಯತಾಕಾರದ ರಚನೆಗಳನ್ನು ಹೊಂದಿದೆ. ಅವೆಲ್ಲವೂ ಮಧ್ಯಭಾಗದ ಕಟ್ಟಡದ ಮೂಲಕ ಪರಸ್ಪರ ಸಂಬಂಧ ಹೊಂದಿವೆ.
ವಿಸ್ತಾರವಾದ ಸಂಕೀರ್ಣವನ್ನು ನಿರ್ಮಿಸಿದ ಕಂಪನಿಯ ಪ್ರಕಾರ, ಇದರ ವ್ಯಾಪ್ತಿ 7.1 ಮಿಲಿಯನ್ ಚದರ ಅಡಿಗಳಷ್ಟು ಇದೆ. ಈ ಕಟ್ಟಡವನ್ನು ಈ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲು ನಾಲ್ಕು ವರ್ಷ ಬೇಕಾಯಿತು.
ಎಸ್‌ಡಿಬಿ ವೆಬ್‌ಸೈಟ್ ಪ್ರಕಾರ, ವ್ಯಾಪಾರ ಸಂಕೀರ್ಣವು ಮನರಂಜನಾ ವಲಯ ಮತ್ತು ಪಾರ್ಕಿಂಗ್ ಪ್ರದೇಶವನ್ನು ಹೊಂದಿದ್ದು ಇದು 20 ಲಕ್ಷ ಚದರ ಅಡಿಗಳಷ್ಟು ವ್ಯಾಪಿಸಿದೆ.
ಸಿಎನ್‌ಎನ್‌ನೊಂದಿಗೆ ಮಾತನಾಡಿದ ಯೋಜನೆಯ ಸಿಇಒ ಮಹೇಶ್ ಗಾಧವಿ, ಹೊಸ ಕಟ್ಟಡ ಸಂಕೀರ್ಣದಿಂದಾಗಿ ಜನರು ವ್ಯಾಪಾರ ಮಾಡಲು ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುವ ಅಗತ್ಯವಿಲ್ಲ.ಅಂತರರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯ ನಂತರ ಭಾರತೀಯ ವಾಸ್ತುಶಿಲ್ಪ ಸಂಸ್ಥೆ ಮಾರ್ಫೋಜೆನೆಸಿಸ್ ಈ ಕಟ್ಟಡವನ್ನು ವಿನ್ಯಾಸಗೊಳಿಸಿದೆ.
“ಪೆಂಟಗನ್ ಅನ್ನು ಮೀರಿಸುವುದು ಸ್ಪರ್ಧೆಯ ಸಂಕ್ಷಿಪ್ತ ಭಾಗವಾಗಿರಲಿಲ್ಲ. ಬದಲಿಗೆ, ಯೋಜನೆಯ ಗಾತ್ರವು ಬೇಡಿಕೆಯಿಂದ ನಿರ್ದೇಶಿಸಲ್ಪಟ್ಟಿದೆ” ಎಂದು ಗಾಧವಿ ಸಿಎನ್ಎನ್ ಗೆ ತಿಳಿಸಿದರು.ನಿರ್ಮಾಣಕ್ಕೂ ಮುನ್ನ ಎಲ್ಲಾ ಕಚೇರಿಗಳನ್ನು ವಜ್ರ ಕಂಪನಿಗಳು ಖರೀದಿಸಿದ್ದವು ಎಂದು ಅವರು ಹೇಳಿದರು.
ಇದನ್ನೂ ಓದಿ: NDA VS INDIA: ಚಿರಾಗ್ ಪಾಸ್ವಾನ್ ಮೋದಿ ಅಪ್ಪುಗೆ: ಇದು ರಾಹುಲ್ ಗಾಂಧಿ ಪ್ರಭಾವ ಎಂದು ಟೀಕಿಸಿದ ಕಾಂಗ್ರೆಸ್
ವಿಡಿಯೊ ಹಂಚಿ ಟ್ವೀಟ್ ಮಾಡಿದ ಮೋದಿ
Surat Diamond Bourse showcases the dynamism and growth of Surat’s diamond industry. It is also a testament to India’s entrepreneurial spirit. It will serve as a hub for trade, innovation and collaboration, further boosting our economy and creating employment opportunities. https://t.co/rBkvYdBhXv
— Narendra Modi (@narendramodi) July 19, 2023
ಸೂರತ್ ಡೈಮಂಡ್ ಬೋರ್ಸ್ ಸೂರತ್‌ನ ಡೈಮಂಡ್ ಉದ್ಯಮದ ಚೈತನ್ಯ ಮತ್ತು ಬೆಳವಣಿಗೆಯನ್ನು ತೋರಿಸುತ್ತದೆ. ಇದು ಭಾರತದ ಉದ್ಯಮಶೀಲತಾ ಮನೋಭಾವಕ್ಕೂ ಸಾಕ್ಷಿಯಾಗಿದೆ. ಇದು ವ್ಯಾಪಾರ, ನಾವೀನ್ಯತೆ ಮತ್ತು ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Wed, 19 July 23