ಬಲಗಣ್ಣು ನೋವೆಂದು ದೆಹಲಿ ಆಸ್ಪತ್ರೆಗೆ ಯುಎಸ್​ನಿಂದ ಬಂದ ಮಹಿಳೆ; ಆಕೆಯ ದೇಹದಿಂದ 3 ಜೀವಂತ ಬಾಟ್​ಫ್ಲೈಗಳನ್ನು ಹೊರತೆಗೆದ ವೈದ್ಯರು

ಯುಎಸ್​ನಲ್ಲಿ ಅದೆಷ್ಟೋ ದೊಡ್ಡದೊಡ್ಡ, ತಜ್ಞ ವೈದ್ಯರ ಬಳಿಯೆಲ್ಲ ತೋರಿಸಿದ್ದರೂ, ಕಡಿಮೆ ಆಗುವುದಿರಲಿ, ಆಕೆಗೆ ಆಗಿದ್ದೇನು ಎಂಬುದೇ ಯುಎಸ್​​ನ ತಜ್ಞ ವೈದ್ಯರಿಗೆ ಗೊತ್ತಾಗಿರಲಿಲ್ಲ.

ಬಲಗಣ್ಣು ನೋವೆಂದು ದೆಹಲಿ ಆಸ್ಪತ್ರೆಗೆ ಯುಎಸ್​ನಿಂದ ಬಂದ ಮಹಿಳೆ; ಆಕೆಯ ದೇಹದಿಂದ 3 ಜೀವಂತ ಬಾಟ್​ಫ್ಲೈಗಳನ್ನು ಹೊರತೆಗೆದ ವೈದ್ಯರು
ಸರ್ಜರಿಗೆ ಒಳಗಾದ ಯುಎಸ್​ ಮಹಿಳೆಯೊಂದಿಗೆ ದೆಹಲಿ ಆಸ್ಪತ್ರೆ ಸಿಬ್ಬಂದಿ
Follow us
TV9 Web
| Updated By: Lakshmi Hegde

Updated on:Feb 22, 2022 | 4:09 PM

ಇವರು 32 ವರ್ಷದ ಯುಎಸ್​ ರಾಷ್ಟ್ರದ ಮಹಿಳೆ. ಕಳೆದ 4-6ವಾರದಿಂದ ಇವರ ಬಲ ಕಣ್ಣಿನ ರೆಪ್ಪೆ ಮೇಲ್ಭಾಗ ಊದಿಕೊಂಡಿತ್ತು. ಅಷ್ಟೇ ಅಲ್ಲ ಆ ಭಾಗ ಕೆಂಪಾಗಿ, ಮೃದುವಾಗಿತ್ತು. ಊದಿಕೊಂಡಿದ್ದರೂ ಗಟ್ಟಿಯಾಗಿರಲಿಲ್ಲ. ಯುಎಸ್​ನಲ್ಲಿ ಅದೆಷ್ಟೋ ದೊಡ್ಡದೊಡ್ಡ, ತಜ್ಞ ವೈದ್ಯರ ಬಳಿಯೆಲ್ಲ ತೋರಿಸಿದ್ದರೂ, ಕಡಿಮೆ ಆಗುವುದಿರಲಿ, ಆಕೆಗೆ ಆಗಿದ್ದೇನು ಎಂಬುದೇ ಗೊತ್ತಾಗಿರಲಿಲ್ಲ. ಇದೀಗ ಮಹಿಳೆಗೆ ದೆಹಲಿಯ ವಸಂತ್​ ಕುಂಜ್​​ನಲ್ಲಿರುವ ಫೋರ್ಟಿಸ್​ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಮತ್ತು ಆಕೆ ಚೇತರಿಸಿಕೊಂಡಿದ್ದಾರೆ.

ಅಷ್ಟಕ್ಕೂ ಮಹಿಳೆಗೆ ಆಗಿದ್ದು ಮೈಯಾಸಿಸ್​. ಇದು ನೊಣಗಳ ಲಾರ್ವಾದಿಂದ ಉಂಟಾಗುವ ಒಂದು ಸೋಂಕು. ಈ ಯುಎಸ್​ನ ಮಹಿಳೆಯ ಬಲರೆಪ್ಪೆಯ ಮೇಲಿನಿಂದ ಪೋರ್ಟಿಸ್​ ಆಸ್ಪತ್ರೆ ತಜ್ಞರ ತಂಡ, ಮೂರು ಜೀವಂತ ಮಾನವ ಬಾಟ್​ಫ್ಲೈಗಳನ್ನು ಹೊರತೆಗೆದಿದೆ. ಇಲ್ಲಿ ಹ್ಯೂಮನ್​ ಬಾಟ್​ಫ್ಲೈಗಳೆಂದರೆ ಒಂದು ರೀತಿಯ ನೊಣಗಳು. ಅಂದರೆ ಬಾಟ್​ಫ್ಲೈಗಳ ಒಂದು ಪ್ರಬೇಧ. ಈ ಬಾಟ್​ಫ್ಲೈಗಳ ಲಾರ್ವಾ  ಸಸ್ತನಿಗಳ ದೇಹದ ಆಂತರಿಕ ಭಾಗಗಳಿಗೆ ಪರಾವಲಂಬಿಯಾಗಿರುತ್ತದೆ. ಇವುಗಳನ್ನು ವಾರ್ಬಲ್​ ನೊಣಗಳೆಂದೂ ಕರೆಯಲಾಗುತ್ತದೆ. ಬಾಟ್​ಫ್ಲೈಗಳಲ್ಲೇ ಈ ಹ್ಯೂಮನ್​ ಬಾಟ್​ಫ್ಲೈ ಎಂಬ ಜಾತಿಯ ನೊಣಗಳಿದ್ದು, ಇವುಗಳ ಲಾರ್ವಾ ಮನುಷ್ಯರ ದೇಹಕ್ಕೆ ಪರಾವಲಂಬಿಯಾಗಿರುತ್ತದೆ.  ಹೀಗೆ ಮಾನವ ಬಾಟ್​ಫ್ಲೈಗಳ ಲಾರ್ವಾಗಳು ಈ ಮಹಿಳೆಯರ ಕಣ್ಣಿನ ಭಾಗದಲ್ಲಿ ಸೇರಿಕೊಂಡು, ಅಲ್ಲಿಯೇ ನೊಣಗಳಾಗಿದ್ದವು. ಇದರಿಂದಾಗಿ ಆಕೆ ತೀವ್ರ ಸಮಸ್ಯೆಗೆ ಸಿಲುಕಿದ್ದಳು.

ಯುಎಸ್​ನಲ್ಲಿ ತಜ್ಞರಿಗೆ ಅರ್ಥವಾಗದಾಗ ಆಕೆ ದೆಹಲಿಯ ಪೋರ್ಟಿಸ್ ಆಸ್ಪತ್ರೆಗೆ ಬಂದಿದ್ದರು. ನನಗೆ ಕಳೆದ ನಾಲ್ಕರಿಂದ ಆರು ವಾರಗಳಿಂದ ಕಣ್ಣು ರೆಪ್ಪೆಯ ಒಳಗಡೆ ಏನೋ ಓಡಾಡಿದಂತೆ ಆಗುತ್ತದೆ. ಅದಕ್ಕೂ ಮೊದಲು ನಾನು ಅಮೇಜಾನ್​ ಕಾಡಿಗೆ ಹೋಗಿದ್ದೆ. ಅಲ್ಲಿಂದ ಬಂದ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈದ್ಯರಿಗೆ ವಿವರಿಸಿದ್ದರು. ನಂತರ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮೊಹಮ್ಮದ್​ ನದೀಮ್​, ಡಾ. ಧೀರಜ್​ ಮತ್ತು ಡಾ. ನರೋಲಾ ಯಾಂಗರ್ (ಸರ್ಜನ್​) ಸೇರಿ ಚಿಕಿತ್ಸೆ ನೀಡಿದ್ದಾರೆ. ಆಕೆಯ ಕಣ್ಣು ರೆಪ್ಪೆಯ ಭಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಚಿಕಿತ್ಸೆ ಶುರುವಿಟ್ಟುಕೊಂಡ ವೈದ್ಯರ ತಂಡ, ಸುಮಾರು 2 ಸಿಎಂ ಉದ್ದದ  ಮೂರು ಜೀವಂತ ಬಾಟ್​ ನೊಣಗಳನ್ನು ಹೊರತೆಗೆದಿದ್ದಾರೆ.  ಒಂದು ಬಾಟ್​ಫ್ಲೈ ಮಹಿಳೆಯ ಹಿಂಬದಿಯ ಕುತ್ತಿಗೆ ಮೇಲಿತ್ತು. ಮತ್ತೊಂದು ಬಲ ಕೈಯಿಯ ಮುಂದಿನ ತೋಳಿನಲ್ಲಿತ್ತು. ಇವೆಲ್ಲವನ್ನೂ ಅನಸ್ತೇಶಿಯಾ ಕೊಡದೆಯೇ ತೆಗೆಯಲಾಗಿದೆ.

ಮೈಯಾಸಿಸ್​ ಎಂದರೆ ಈ ಹ್ಯೂಮನ್​ ಬಾಟ್​ಫ್ಲೈಗಳನ್ನು ಹೊರತೆಗೆಯದೆ ಹಾಗೇ ಬಿಟ್ಟರೆ ಜೀವಕ್ಕೂ ಅಪಾಯ ತರುವ ಸಾಧ್ಯತೆ ಇರುತ್ತದೆ. ಅಂಗಾಂಶಗಳನ್ನು ನಾಶ ಮಾಡುತ್ತವೆ. ಮೂಗು, ಮುಖಗಳಲ್ಲಿನ ಅಂಗಾಂಶಗಳ ಸೆವೆತಕ್ಕೆ ಕಾರಣವಾಗುತ್ತದೆ. ತುಂಬ ಅಪರೂಪಕ್ಕೆ ಮಿದುಳಿಗೂ ಹಾನಿಯನ್ನುಂಟು ಮಾಡುವುದಲ್ಲದೆ, ಜೀವ ತೆಗೆಯಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.  ಯುಎಸ್​ನಲ್ಲಿ ಎಂತೆಂಥಾ ಪ್ರಸಿದ್ಧ, ಖ್ಯಾತ ತಜ್ಞರು ಇದ್ದಾರೆ. ಭಾರತೀಯರೇ ಅನೇಕರು ಚಿಕಿತ್ಸೆಗಾಗಿ ಯುಎಸ್​ಗೆ ಹೋಗುತ್ತಾರೆ. ಹಾಗಿದ್ದಲ್ಲಿ, ಅಲ್ಲಿನ ಒಬ್ಬರು ಪ್ರಜೆ ಭಾರತಕ್ಕೆ ಬಂದು ಯಶಸ್ವಿ ಚಿಕಿತ್ಸೆ ಪಡೆದದ್ದು ಹೆಗ್ಗಳಿಕೆಯೇ ಸರಿ ಎಂದು ಈ ಸುದ್ದಿ ಕೇಳಿದವರು ಹೊಗಳುತ್ತಿದ್ದಾರೆ.

ಬಾಟ್ ಫ್ಲೈಗಳೂ ಮಾನವನ ಮಾಂಸ ಸೇರುವುದು ಹೇಗೆ?: ಇದು ಹೊಸದಾದ ಸಮಸ್ಯೆಯಲ್ಲ. ಉಷ್ಣ ಮತ್ತು ಉಪ ಉಷ್ಣವಲಯ ಪ್ರದೇಶಗಳಾದ ಮಧ್ಯ ಮತ್ತು ದಕ್ಷಿಣ ಆಫ್ರಿಕಾ, ಆಫ್ರಿಕಾಗಳಲ್ಲಿ ಈ ಮೊದಲೇ ಇಂಥ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲೂ ತುಂಬ ದುರ್ಗಮವಾಗಿರುವ ಹಳ್ಳಿಗಳಲ್ಲಿ ಪತ್ತೆಯಾಗಿತ್ತು. ಈ ಮಾನವ ಬಾಟ್​ಫ್ಲೈಗಳು ಮೂಗು ಅಥವಾ ಗಾಯಗಳ ಮೂಲಕ ದೇಹವನ್ನು ಸೇರುವ ಸಾಧ್ಯತೆ ಇರುತ್ತವೆ.

ಇದನ್ನೂ ಓದಿ: ಎಸ್ಎಫ್​​ಜೆ ನಂಟು ಇರುವ ಪಂಜಾಬ್ ಪಾಲಿಟಿಕ್ಸ್ ಟಿವಿಯ ಆ್ಯಪ್, ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಕೇಂದ್ರ ನಿಷೇಧ

Published On - 4:08 pm, Tue, 22 February 22

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ