ವಿಷ ಮದ್ಯ ಸೇವನೆ ಶಂಕೆ: ಮಧ್ಯಪ್ರದೇಶದಲ್ಲಿ 11 ಸಾವು, 8 ಮಂದಿ ಅಸ್ವಸ್ಥ
ಸೋಮವಾರ ರಾತ್ರಿ ಮನುಪುರ್ ಮತ್ತು ಪಹವಲಿ ಗ್ರಾಮದಲ್ಲಿ ಮದ್ಯ ಸೇವಿಸಿದ 11 ಮಂದಿ ಸಾವಿಗೀಡಾಗಿದ್ದು, ಮದ್ಯ ವಿಷಪೂರಿತವಾಗಿತ್ತೇ ಎಂಬುದು ಇನ್ನೂ ಖಚಿತವಾಗಿಲ್ಲ.
ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮನುಪುರ್ ಮತ್ತು ಪಹವಲಿ ಗ್ರಾಮದಲ್ಲಿ ಶಂಕಿತ ವಿಷ ಮದ್ಯ ಸೇವಿಸಿ 11 ಮಂದಿ ಸಾವಿಗೀಡಾಗಿದ್ದು 8 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮೊರೆನಾ ಎಸ್ಪಿ ಅನುರಾಗ್ ಸುಜನಿಯಾ, ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ. ಗ್ರಾಮದ ಕೆಲವು ಜನರು ಬಿಳಿ ಬಣ್ಣದ ಮದ್ಯ ಸೇವಿಸಿದ್ದು ಇದು ವಿಷ ಮದ್ಯ ಎಂದು ಶಂಕಿಸಲಾಗಿದೆ ಎಂದಿದ್ದಾರೆ. ಮದ್ಯ ಸೇವಿಸಿ ತೀವ್ರ ಅಸ್ವಸ್ಥರಾಗಿರುವ ಎಂಟು ಮಂದಿಯನ್ನು ಗ್ವಾಲಿಯರ್ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ನಂತರವೇ ಜನರು ಸೇವಿಸಿದ ಮದ್ಯ ವಿಷಯುಕ್ತವಾಗಿತ್ತೇ ಎಂಬುದನ್ನು ಖಚಿತವಾಗಿ ಹೇಳಬಹುದು ಎಂದಿದ್ದಾರೆ ಅಧಿಕಾರಿಗಳು.
I'm deeply saddened by this. SHO has been suspended immediately. Senior officials have reached the site. A team will investigate the matter. Accused won't be spared: Madhya Pradesh Minister Narottam Mishra on 10 people died after consuming poisonous liquor in Morena pic.twitter.com/l73eDOyhjr
— ANI (@ANI) January 12, 2021
ಈ ಘಟನೆಯಿಂದ ನನಗೆ ದುಃಖವಾಗಿದೆ. ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಲಾಗುವುದು. ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಈ ತಂಡ ತನಿಖೆ ನಡೆಸಲಿದೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮಧ್ಯ ಪ್ರದೇಶದ ಸಚಿವ ನರೋಟ್ಟಂ ಮಿಶ್ರಾ ಹೇಳಿದ್ದಾರೆ.
Published On - 11:52 am, Tue, 12 January 21