ಸನಾತನ ಧರ್ಮದ ವಿಷಯಕ್ಕೆ ಬಂದರೆ ಸುಮ್ಮನಿರುವುದಿಲ್ಲ; ಸಿಜೆಐ ಮೇಲಿನ ಶೂ ದಾಳಿ ಬಳಿಕ ಅಮಾನತುಗೊಂಡ ವಕೀಲ ಹೇಳಿದ್ದೇನು?
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲಿನ 'ಶೂ ದಾಳಿ'ಯ ನಂತರ ಅಮಾನತುಗೊಂಡ ವಕೀಲ ರಾಕೇಶ್ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ರಾಕೇಶ್ ಕಿಶೋರ್, ನ್ಯಾಯಾಂಗವು ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪಕ್ಷಪಾತ ಹೊಂದಿದೆ ಎಂದು ಆರೋಪಿಸಿದ್ದಾರೆ.

ನವದೆಹಲಿ, ಅಕ್ಟೋಬರ್ 7: ಸೋಮವಾರ ಸುಪ್ರೀಂ ಕೋರ್ಟ್ (Supreme Court) ಒಳಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಅಮಾನತುಗೊಂಡ ವಕೀಲ ರಾಕೇಶ್ ಕಿಶೋರ್, ಸಿಜೆಐ ಅವರ ಹೇಳಿಕೆಗಳಿಂದ ತೀವ್ರವಾಗಿ ನೋವಾಗಿದೆ ಮತ್ತು ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನ್ಯಾಯಾಂಗವು ಪಕ್ಷಪಾತ ಹೊಂದಿದೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯದ ಕೊಠಡಿಯ ಘಟನೆಯ ಸಮಯದಲ್ಲಿ ಭದ್ರತಾ ಸಿಬ್ಬಂದಿಯಿಂದ ತಡೆಹಿಡಿಯಲ್ಪಟ್ಟ 71 ವರ್ಷದ ರಾಕೇಶ್ ಕಿಶೋರ್ ಅವರನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಮಾನತುಗೊಳಿಸಿದೆ. ಇಂದು ನಡೆದ ಘಟನೆಯ ನಂತರ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ನಾನು ಕೋಪದಿಂದ ಆ ರೀತಿ ಮಾಡಿದ್ದಲ್ಲ, ಬದಲಾಗಿ ಹಿಂದೂ ಆಚರಣೆಗಳಲ್ಲಿ ಪುನರಾವರ್ತಿತ ನ್ಯಾಯಾಂಗದ ಹಸ್ತಕ್ಷೇಪದ ಕಾರಣಕ್ಕೆ ಅಸಮಾಧಾನಗೊಂಡು ಹೀಗೆ ಮಾಡಿದ್ದು ಎಂದು ಅವರು ವಿವರಿಸಿದ್ದಾರೆ.
DR RAKESH KISHORE ON HIS ACT IN SC
“I am against violence. I am an MSc, a gold medallist. Very educated. I was not intoxicated. So, you have to ask what brought me to express my frustration in this way.” pic.twitter.com/8OOZgVdPqJ
— Rahul Shivshankar (@RShivshankar) October 7, 2025
ಇದನ್ನೂ ಓದಿ: ಅಕ್ರಮ ಕಂಡುಬಂದರೆ ಬಿಹಾರದ SIR ಪ್ರಕ್ರಿಯೆ ರದ್ದು; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ರಾಕೇಶ್ ಕಿಶೋರ್ ತಾವು ಸಿಜೆಐ ಮೇಲೆ ದಾಳಿ ಮಾಡಸಲು ಪ್ರಯತ್ನಿಸಿದ್ದಕ್ಕೆ ವಿಷಾದಿಸುವುದಿಲ್ಲ ಎಂದು ಹೇಳಿದ್ದಾರೆ. “ನನಗೆ ತುಂಬಾ ನೋವಾಯಿತು. ಸೆಪ್ಟೆಂಬರ್ 16ರಂದು ಮುಖ್ಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಒಬ್ಬ ವ್ಯಕ್ತಿಯಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಯಿತು. ನ್ಯಾಯಮೂರ್ತಿ ಗವಾಯಿ ಅದನ್ನು ಸಂಪೂರ್ಣವಾಗಿ ಅಪಹಾಸ್ಯ ಮಾಡಿದರು. ‘ಹೋಗಿ ವಿಗ್ರಹಕ್ಕೆ ಪ್ರಾರ್ಥಿಸಿ, ವಿಗ್ರಹವು ತನ್ನ ತಲೆಯನ್ನು ಪುನಃಸ್ಥಾಪಿಸಲು ಬೇಡಿಕೊಳ್ಳಿ’ ಎಂದು ಹೇಳಿದ್ದರು” ಎಂದು ಕಿಶೋರ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




