ಸ್ವಾತಿ ಮಲಿವಾಲ್ ಪ್ರಕರಣ: ಅರವಿಂದ್ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್​​ಗೆ 4 ದಿನಗಳ ನ್ಯಾಯಾಂಗ ಬಂಧನ

ಈ ಸಿಸಿಟಿವಿಗಳು ನನ್ನ ಪ್ರಕರಣವನ್ನು ಸಾಬೀತುಪಡಿಸುತ್ತವೆ, ಅವರು ಹಲವಾರು ಬಾರಿ ಹುಡುಕಿ ಸಿಸಿಟಿವಿ ದೃಶ್ಯಗಳನ್ನು ತೆಗೆದುಕೊಂಡಿದ್ದಾರೆ, ಅವರಲ್ಲಿ ಎಷ್ಟು ದೃಶ್ಯಗಳಿವೆ ಎಂಬುದು ನಮಗೆ ತಿಳಿದಿಲ್ಲ. ದೃಶ್ಯಾವಳಿಗಳನ್ನು ಸಂರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ, ”ಎಂದು ಬಿಭವ್ ಕುಮಾರ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.

ಸ್ವಾತಿ ಮಲಿವಾಲ್ ಪ್ರಕರಣ: ಅರವಿಂದ್ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್​​ಗೆ 4 ದಿನಗಳ ನ್ಯಾಯಾಂಗ ಬಂಧನ
ಬಿಭವ್ ಕುಮಾರ್
Follow us
ರಶ್ಮಿ ಕಲ್ಲಕಟ್ಟ
|

Updated on:May 24, 2024 | 4:48 PM

ದೆಹಲಿ ಮೇ 24: ಸ್ವಾತಿ ಮಲಿವಾಲ್ (Swati Maliwal case) ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ತೀಸ್ ಹಜಾರಿ ಕೋರ್ಟ್ ಅರವಿಂದ್ ಕೇಜ್ರಿವಾಲ್ (Arvind Kejriwal) ಸಹಾಯಕ ಬಿಭವ್ ಕುಮಾರ್ (Bibhav Kumar) ಅವರನ್ನು ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮೇ 28 ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಿಭವ್ ಅವರ ವಕೀಲರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಡಿವಿಆರ್‌ಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. “ಈ ಸಿಸಿಟಿವಿಗಳು ನನ್ನ ಪ್ರಕರಣವನ್ನು ಸಾಬೀತುಪಡಿಸುತ್ತವೆ, ಅವರು ಹಲವಾರು ಬಾರಿ ಹುಡುಕಿ ಸಿಸಿಟಿವಿ ದೃಶ್ಯಗಳನ್ನು ತೆಗೆದುಕೊಂಡಿದ್ದಾರೆ, ಅವರಲ್ಲಿ ಎಷ್ಟು ದೃಶ್ಯಗಳಿವೆ ಎಂಬುದು ನಮಗೆ ತಿಳಿದಿಲ್ಲ. ದೃಶ್ಯಾವಳಿಗಳನ್ನು ಸಂರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ ”ಎಂದು ಕುಮಾರ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್, “ಯಾವ ನಿಬಂಧನೆಯ ಅಡಿಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ? ವಿಷಯವು ತನಿಖೆಯಲ್ಲಿರುವ ಕಾರಣ ಈ ಹಂತದಲ್ಲಿ ಇಂಥಾ ಮನವಿಗಳು ಅನ್ವಯಿಸುವುದಿಲ್ಲ” ಎಂದು ವಾದಿಸಿದರು.

ತಮಗೆ ಬೇಕಾದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಅವರು ಯಾವುದೇ ವಿವರವನ್ನು ನೀಡಿಲ್ಲ, ಅದರ ಪ್ರತಿಯನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರಿಗೂ ಅದೇ ಬೇಕು ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಇದು ವೇದಿಕೆಯಲ್ಲ. ಆರಂಭದಲ್ಲಿ ನಾವು ಡಿವಿಆರ್ ಕೇಳಿದ್ದೆವು, ಆದರೆ ಅವರು ಖಾಲಿ ಇದ್ದ ಪೆನ್ ಡ್ರೈವ್ ಅನ್ನು ನಮಗೆ ನೀಡಿದರು. ಈಗ ಅವರು ನಮಗೆ ಎನ್‌ವಿಆರ್ ಅನ್ನು ನೀಡಿದ್ದಾರೆ. ಅದನ್ನು ಪರೀಕ್ಷೆಗಾಗಿ ತಜ್ಞರಿಗೆ ನೀಡಲಾಗಿದೆ” ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಸೇರಿಸಲಾಗಿದೆ.

ಸ್ವಾತಿ ಮಲಿವಾಲ್ ಅವರು ಸಿಎಂ ಸಿವಿಲ್ ಲೈನ್ಸ್ ನಿವಾಸಕ್ಕೆ ‘ಅನಧಿಕೃತ ಪ್ರವೇಶ ಮಾಡಿ ಬೈದಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿದ ಕೆಲವೇ ದಿನಗಳಲ್ಲಿ ಕೇಜ್ರಿವಾಲ್ ಅವರ ಪ್ರಮುಖ ಸಹಾಯಕ ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಕಳೆದ ವಾರ ಬಂಧಿಸಿದ್ದರು.

ತಮ್ಮ ದೂರಿನಲ್ಲಿ, ಕುಮಾರ್ ಅವರು ಮಲಿವಾಲ್ ವಿರುದ್ಧ ಅನಧಿಕೃತ ಪ್ರವೇಶ, ಮೌಖಿಕ ನಿಂದನೆ ಮತ್ತು ಬೆದರಿಕೆಗಳ ಆರೋಪವನ್ನು ಹೊರಿಸಿದ್ದು, ಈ ವಿಷಯದಲ್ಲಿ ಬಿಜೆಪಿಯ ಒಳಗೊಳ್ಳುವಿಕೆಯನ್ನೂ ಸಹ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಸಿಎಂ ಪತ್ರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ವಿದೇಶಾಂಗ ಸಚಿವಾಲಯ

ಮೇ 13 ರಂದು ತನ್ನ “ಎದೆ, ಹೊಟ್ಟೆ ಮತ್ತು ಸೊಂಟಕ್ಕೆ ಒದೆದಿದ್ದ ಬಿಭವ್ ಕುಮಾರ್ “ಕನಿಷ್ಠ ಏಳರಿಂದ ಎಂಟು ಬಾರಿ ನನಗೆ ಕಪಾಳಮೋಕ್ಷ ಮಾಡಿದ್ದಾನೆ. ನಾನು ಕಿರುಚಾಡಿದರೂ ನನ್ನನ್ನು ಎಳೆದಿದ್ದಾನೆ ಎಂದು ಮಲಿವಾಲ್ ದೂರಿನಲ್ಲಿ ಆರೋಪಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ (ಪಿಎ) ಬಿಭವ್ ಕುಮಾರ್ ಅವರ ಸೇವೆಯನ್ನು ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿಲೆನ್ಸ್ ಇಲಾಖೆ ಕಳೆದ ತಿಂಗಳು ರದ್ದುಗೊಳಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Fri, 24 May 24