AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿ ಸಾವಿನ ಸುದ್ದಿ ಕೇಳಿ ವಿಮಾನ ಹಾರಾಟ ಸಾಧ್ಯವಿಲ್ಲ ಎಂದ ಪೈಲಟ್, 162 ಪ್ರಯಾಣಿಕರು 3 ಗಂಟೆಗಳ ಕಾಲ ಕಾಯುವಂತಾಯ್ತು

ಇಂಡಿಗೋದ ವಿಮಾನವು ಒಟ್ಟು 162 ಪ್ರಯಾಣಿಕರೊಂದಿಗೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸಿದ್ಧವಾಗಿ ನಿಂತಿತ್ತು. ಪೈಲಟ್ ಕಾಕ್‌ಪಿಟ್‌ಗೆ ಪ್ರವೇಶಿಸಲು ಸಿಬ್ಬಂದಿ ಸದಸ್ಯರು ಕಾಯುತ್ತಿದ್ದರು. ತಮ್ಮ ವಿಮಾನ ಟೇಕಾಫ್ ಆಗಲಿದೆ ಎಂದು ಪ್ರಯಾಣಿಕರು ಭಾವಿಸಿದ್ದರು. ಆದರೆ ನಂತರ ಪೈಲಟ್ ಟೇಕಾಫ್ ಮಾಡಲು ನಿರಾಕರಿಸಿದ್ದಾರೆ. ಅಜ್ಜಿ ತೀರಿಕೊಂಡಿದ್ದರು ಎಂದು ಕಾರಣ ನೀಡಿದ್ದರು.

ಅಜ್ಜಿ ಸಾವಿನ ಸುದ್ದಿ ಕೇಳಿ ವಿಮಾನ ಹಾರಾಟ ಸಾಧ್ಯವಿಲ್ಲ ಎಂದ ಪೈಲಟ್, 162 ಪ್ರಯಾಣಿಕರು 3 ಗಂಟೆಗಳ ಕಾಲ ಕಾಯುವಂತಾಯ್ತು
ಇಂಡಿಗೋ ವಿಮಾನ
ನಯನಾ ರಾಜೀವ್
|

Updated on: Jan 18, 2024 | 12:23 PM

Share

ಇಂಡಿಗೋದ ವಿಮಾನವು ಒಟ್ಟು 162 ಪ್ರಯಾಣಿಕರೊಂದಿಗೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸಿದ್ಧವಾಗಿ ನಿಂತಿತ್ತು. ಪೈಲಟ್ ಕಾಕ್‌ಪಿಟ್‌ಗೆ ಪ್ರವೇಶಿಸಲು ಸಿಬ್ಬಂದಿ ಸದಸ್ಯರು ಕಾಯುತ್ತಿದ್ದರು. ತಮ್ಮ ವಿಮಾನ ಟೇಕಾಫ್ ಆಗಲಿದೆ ಎಂದು ಪ್ರಯಾಣಿಕರು ಭಾವಿಸಿದ್ದರು. ಆದರೆ ನಂತರ ಪೈಲಟ್ ಟೇಕಾಫ್ ಮಾಡಲು ನಿರಾಕರಿಸಿದ್ದಾರೆ. ಅಜ್ಜಿ ತೀರಿಕೊಂಡಿದ್ದರು ಎಂದು ಕಾರಣ ನೀಡಿದ್ದರು.

ಈ ಇಂಡಿಗೋ ವಿಮಾನ ಸಂಖ್ಯೆ 6E 126 ಪಾಟ್ನಾ ಮತ್ತು ಪುಣೆ ನಡುವೆ ಹಾರಾಟ ನಡೆಸಬೇಕಿತ್ತು. ಈ ಘಟನೆಯ ನಂತರ ವಿಮಾನ ಸುಮಾರು ಮೂರು ಗಂಟೆಗಳ ಕಾಲ ತಡವಾಯಿತು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಮಾಹಿತಿಯ ಪ್ರಕಾರ, ಬುಧವಾರ, ಪಾಟ್ನಾದಿಂದ ಪುಣೆಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಪಾರ್ಕಿಂಗ್ ಬೇಯಿಂದ ಹೊರಡಲು ಸಿದ್ಧವಾಗಿತ್ತು. ಈ ವೇಳೆ ಪೈಲಟ್ ತನ್ನ ಅಜ್ಜಿಯ ಹಠಾತ್ ಸಾವಿನ ಬಗ್ಗೆ ಮಾಹಿತಿ ಪಡೆದರು. ಮಾಹಿತಿ ಪಡೆದ ಪೈಲಟ್, ವಿಮಾನ ಹಾರಿಸಲು ಮಾನಸಿಕವಾಗಿ ಅಂತಹ ಸ್ಥಿತಿಯಲ್ಲಿಲ್ಲ ಎಂದು ವಿಮಾನಯಾನ ಅಧಿಕಾರಿಗಳಿಗೆ ತಿಳಿಸಿದರು.

ವಿಮಾನವು ಮಧ್ಯಾಹ್ನ 1.25 ರ ಸುಮಾರಿಗೆ ಹೊರಡಬೇಕಿತ್ತು ಪೈಲಟ್ ಟೇಕ್ ಆಫ್ ಮಾಡಲು ನಿರಾಕರಿಸಿದ ನಂತರ, ವಿಮಾನಯಾನ ಅಧಿಕಾರಿಗಳು ತಕ್ಷಣವೇ ವಿಮಾನವನ್ನು ಪಾರ್ಕಿಂಗ್ ಬೇಯಲ್ಲಿ ನಿಲ್ಲಿಸಿದರು, ಇದರಿಂದಾಗಿ ರನ್‌ವೇಯಲ್ಲಿನ ಇತರ ವಿಮಾನಗಳ ಮೇಲೆ ಪರಿಣಾಮ ಬೀರಲಿಲ್ಲ. ಇದಾದ ನಂತರ ವಿಮಾನವನ್ನು ಹಾರಿಸಲು ಮತ್ತೊಬ್ಬ ಪೈಲಟ್‌ನನ್ನು ಕರೆಸಲಾಯಿತು. ಪಾಟ್ನಾ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಪಾಟ್ನಾ ಮತ್ತು ಪುಣೆ ನಡುವೆ ಹಾರುವ 6E 126 ಸಂಖ್ಯೆಯ ವಿಮಾನ  ಮಧ್ಯಾಹ್ನ 1.25 ರ ಹಾರಾಟ ನಿಗದಿಯಾಗಿತ್ತು. ಆದರೆ ಪೈಲಟ್ ನಿರಾಕರಿಸಿದ್ದರಿಂದ ಸಂಜೆ 4.41ರ ಸುಮಾರಿಗೆ ಟೇಕಾಫ್ ಆಯಿತು.

ಪ್ರಯಾಣಿಕರು 3 ಗಂಟೆಗಳ ಕಾಲ ಕಾಯಬೇಕಾಯಿತು ಇದೆಲ್ಲದರ ನಡುವೆ ವಿಮಾನಯಾನ ಸಂಸ್ಥೆ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದೆ. ಹೊಸ ಪೈಲಟ್ ಆಗಮನದ ನಂತರ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು. ಇದೆಲ್ಲದರ ನಡುವೆ ಮೂರು ಗಂಟೆಗೂ ಹೆಚ್ಚು ಸಮಯ ಕಳೆದಿತ್ತು.

ಇದರಿಂದ ಪ್ರಯಾಣಿಕರು ಅದರಲ್ಲೂ ಮಕ್ಕಳು, ವೃದ್ಧರು ತೀವ್ರ ತೊಂದರೆ ಅನುಭವಿಸಿದರು. 162 ಪ್ರಯಾಣಿಕರು ತಮ್ಮ ವಿಮಾನ ಹೊರಡಲು ಮೂರು ಗಂಟೆಗಳ ಕಾಲ ಕಾಯುತ್ತಿದ್ದರು. ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಬೀಳುತ್ತಿದೆ. ಇದರಿಂದಾಗಿ ವಿಮಾನಗಳ ಹಾರಾಟ ವಿಳಂಬವಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ
ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ