AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy Vijay: ಮತಗಟ್ಟೆ ಮನೆ ಪಕ್ಕದಲ್ಲಿರುವ ಕಾರಣ ನಟ ವಿಜಯ್ ಸೈಕಲ್​ನಲ್ಲಿ ಬಂದಿದ್ದು, ಬೇರೆ ಅರ್ಥ ಕಲ್ಪಿಸಬೇಡಿ; ಸಾರ್ವಜನಿಕ ಸಂಪರ್ಕಾಧಿಕಾರಿಯಿಂದ ಸ್ಪಷ್ಟನೆ

Tamil Nadu Assembly Elections 2021: ವಿಜಯ್ ಮನೆಯ ಪಕ್ಕವೇ ಮತಗಟ್ಟೆ ಇತ್ತು. ಕಿರಿದಾದ ರಸ್ತೆಯಲ್ಲಿ ಕಾರು ತೆಗೆದುಕೊಂಡು ಹೋಗಿ ವಾಹನ ದಟ್ಟಣೆಯುಂಟು ಮಾಡುವುದನ್ನು ತಪ್ಪಿಸಲು ಅವರು ಕಾರಿನ ಬದಲು ಸೈಕಲ್​ನಲ್ಲಿ ಹೋಗಿದ್ದಾರೆ ಎಂದ ಟೀಂ ವಿಜಯ್.

Thalapathy Vijay: ಮತಗಟ್ಟೆ ಮನೆ ಪಕ್ಕದಲ್ಲಿರುವ ಕಾರಣ ನಟ ವಿಜಯ್ ಸೈಕಲ್​ನಲ್ಲಿ ಬಂದಿದ್ದು, ಬೇರೆ ಅರ್ಥ ಕಲ್ಪಿಸಬೇಡಿ; ಸಾರ್ವಜನಿಕ ಸಂಪರ್ಕಾಧಿಕಾರಿಯಿಂದ ಸ್ಪಷ್ಟನೆ
ಮತಗಟ್ಟೆಗೆ ಸೈಕಲ್​ನಲ್ಲಿ ಬಂದ ನಟ ವಿಜಯ್
ರಶ್ಮಿ ಕಲ್ಲಕಟ್ಟ
|

Updated on: Apr 07, 2021 | 12:40 PM

Share

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗ ಮತದಾನ ಮಾಡಲು ತಮಿಳು ನಟ ವಿಜಯ್ ಸೈಕಲ್​ನಲ್ಲಿ ಮತಗಟ್ಟೆಗೆ ಆಗಮಿಸಿದ್ದರು. ಚೆನ್ನೈನ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ವಿಜಯ್ ಬರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸೈಕಲ್​ನಲ್ಲಿ ಬರುತ್ತಿರುವ ವ್ಯಕ್ತಿ ದಳಪತಿ ವಿಜಯ್ ಎಂದು ಜನರಿಗೆ ಗೊತ್ತಾದ ಕೂಡಲೇ ಕೆಲವರು ಹಿಂಬಾಲಿಸಿ ಫೊಟೊ ತೆಗೆಯಲು ಆರಂಭಿಸಿದಾಗ ವಿಜಯ್ ವೇಗವಾಗಿ ಸೈಕಲ್ ತುಳಿದು ಮತಗಟ್ಟೆಗೆ ಬಂದಿದ್ದರು. ಮತಗಟ್ಟೆಗೆ ಬಂದಾಗಲೂ ಅಭಿಮಾನಿಗಳು ಸುತ್ತುವರಿದಿದ್ದು, ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಗಿ ಬಂದಿತ್ತು.

ಸೈಕಲ್ ತುಳಿದು ವಿಜಯ್ ಮತಗಟ್ಟೆಗೆ ಬಂದಿರುವುದು ಸುದ್ದಿಯಾಗುತ್ತಿದ್ದಂತೆ, ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿ ವಿಜಯ್ ಸೈಕಲ್ ನಲ್ಲಿ ಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಬಿಜೆಪಿ ನೇತೃತ್ವದ  ಕೇಂದ್ರ ಸರ್ಕಾರದ ವಿರುದ್ಧ ವಿಜಯ್ ಮೌನವಾಗಿ ಪ್ರತಿಭಟನೆ ತೋರಿದ್ದಾರೆ ಎಂಬ ಪೋಸ್ಟ್ ಗಳು ಫೇಸ್​ಬುಕ್, ಟ್ವಿಟರ್​ನಲ್ಲಿ  ಹರಿದಾಡಿತ್ತು. ಆದರೆ ವಿಜಯ್ ಸೈಕಲ್ ಸವಾರಿ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಟ್ವೀಟ್ ಮಾಡಿದ್ದಾರೆ.

ವಿಜಯ್ ಮನೆಯ ಪಕ್ಕವೇ ಮತಗಟ್ಟೆ ಇತ್ತು. ಕಿರಿದಾದ ರಸ್ತೆಯಲ್ಲಿ ಕಾರು ತೆಗೆದುಕೊಂಡು ಹೋಗಿ ವಾಹನ ದಟ್ಟಣೆಯುಂಟು ಮಾಡುವುದನ್ನು ತಪ್ಪಿಸಲು ಅವರು ಕಾರಿನ ಬದಲು ಸೈಕಲ್​ನಲ್ಲಿ ಹೋಗಿದ್ದಾರೆ. ಇದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ವಿಜಯ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ರಿಯಾಜ್. ಕೆ. ಅಹಮದ್ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ಆಡಳಿತರೂಢ ಪಕ್ಷ ಎಐಎಡಿಎಂಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಇಂಧನ ಬೆಲೆ ಏರಿಕೆ ವಿರುದ್ಧ ವಿಜಯ್ ಸೈಕಲ್ ತುಳಿದು ಪ್ರತಿಭಟನೆಯ ಸಂದೇಶವನ್ನು ದಾಟಿಸಿದ್ದಾರೆ ಎಂದು ಡಿಎಂಕೆಯ ಹಲವಾರು ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ವಿಜಯ್ ಅವರ ತಂಡ ಈ ಸ್ಪಷ್ಟನೆ ನೀಡಿದೆ.

ವಿಜಯ್ ಅವರು ಸೈಕಲ್ ನಲ್ಲಿ ಮತಗಟ್ಟೆಗೆ ಬಂದಿರುವುದು ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಆಗಿರಲಿಲ್ಲ. ಇನ್ನೊಬ್ಬರ ಬೈಕ್ ಮೇಲೆ ಸವಾರಿ ಮಾಡುವುದನ್ನು ಡಿಎಂಕೆ ನಿಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಹೇಳಿದ್ದಾರೆ.

ಇದನ್ನೂ ಓದಿThalapathy Vijay: ಸೈಕಲ್​ನಲ್ಲಿ ಬಂದು ಮತದಾನ ಮಾಡಿದ ದಳಪತಿ ವಿಜಯ್​! ಪೆಟ್ರೋಲ್​ ಬೆಲೆ ಏರಿಕೆಗೆ ನಟನ ತಿರುಗೇಟು?

Tamil Nadu Elections 2021: ತಮಿಳುನಾಡಿನಲ್ಲಿ ಚುನಾವಣೆಗೆ ಮುನ್ನ ಹಣ ಹಂಚಲಾಗಿತ್ತು: ಕಮಲ್ ಹಾಸನ್ ಆರೋಪ

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು