AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu Assembly Elections 2021: ತಮಿಳುನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಗೆ ಅವಮಾನವೆಸಗಲು ಬಿಡಬಾರದು: ರಾಹುಲ್ ಗಾಂಧಿ

Rahul Gandhi: ಕನ್ಯಾಕುಮಾರಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಆರ್​​ಎಸ್​ಎಸ್​​ನವರು ತಮಿಳು ಸಂಸ್ಕೃತಿ ಅಥವಾ ಸಂಪ್ರದಾಯವನ್ನು ಅವಮಾನ ಮಾಡಲು ನಾವು ಬಿಡಬಾರದು ಎಂದು ಹೇಳಿದ್ದಾರೆ.

Tamil Nadu Assembly Elections 2021: ತಮಿಳುನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಗೆ ಅವಮಾನವೆಸಗಲು ಬಿಡಬಾರದು: ರಾಹುಲ್ ಗಾಂಧಿ
ಕನ್ಯಾಕುಮಾರಿಯ ಮುಳಗುಮೂಡು ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on:Mar 01, 2021 | 3:59 PM

Share

ಕನ್ಯಾಕುಮಾರಿ: ದೇಶದಲ್ಲಿರುವ ಇತರ ಭಾಷೆ, ಧರ್ಮ,ಸಂಸ್ಕೃತಿಗಳಂತೆಯೇ ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಓರ್ವ ಭಾರತೀಯನಾಗಿ ಸಂರಕ್ಷಿಸುವ ಹೊಣೆ ನನಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕನ್ಯಾಕುಮಾರಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ, ಆರ್​​ಎಸ್​ಎಸ್​​ನವರು ತಮಿಳು ಸಂಸ್ಕೃತಿ ಅಥವಾ ಸಂಪ್ರದಾಯವನ್ನು ಅವಮಾನ ಮಾಡಲು ನಾವು ಬಿಡಬಾರದು ಎಂದು ಹೇಳಿದ್ದಾರೆ. ಕನ್ಯಾಕುಮಾರಿಯಲ್ಲಿ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಹುಲ್, ಮುಖ್ಯಮಂತ್ರಿಯವರು ತಮಿಳು ಸಂಸ್ಕೃತಿಯನ್ನು ಅವಮಾನ ಮಾಡಲು ಆರ್​ಎಸ್ಎಸ್​ಗೆ ಬಿಡಬಾರದು. ಮೋದಿಯವರು ಒಂದು ದೇಶ, ಒಂದು ಸಂಸ್ಕೃತಿ, ಒಂದು ಇತಿಹಾಸ ಎಂದು ಹೇಳುತ್ತಾರೆ. ಹಾಗಾದರೆ ತಮಿಳು ಭಾರತೀಯ ಭಾಷೆ ಅಲ್ಲವೇ? ತಮಿಳು ಇತಿಹಾಸ ಭಾರತೀಯರದ್ದು ಅಲ್ಲವೆ? ಅಥವಾ ತಮಿಳು ಸಂಸ್ಕೃತಿ ಭಾರತೀಯರದ್ದು ಅಲ್ಲವೇ? ಭಾರತೀಯನಾಗಿ ತಮಿಳು ಸಂಸ್ಕೃತಿಯನ್ನು ಕಾಪಾಡುವುದು ನನ್ನ ಹೊಣೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ತಮಿಳು ಜನರ ಹೊರತಾಗಿ ಯಾರೂ ಅಧಿಕಾರಕ್ಕೇರಿಲ್ಲ ಎಂಬುದನ್ನು ಇತಿಹಾಸ ನಮಗೆ ತೋರಿಸಿದೆ. ಈ ಚುನಾವಣೆಯಲ್ಲಿಯೂ ಅದೇ ನಡೆಯುತ್ತದೆ ಎಂದಿದ್ದಾರೆ ರಾಹುಲ್. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಿಧನರಾದ ಕನ್ಯಾಕುಮಾರಿ ಸಂಸದ ಎಚ್.ವಸಂತಕುಮಾರ್ ಅವರಿಗೆ ಅಗಸ್ತೀಸ್ವರಂನಲ್ಲಿ  ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್, ಯಾವುದೇ ಒತ್ತಡವಿರಲಿ, ಯಾರೇ ಬೆದರಿಕೆಯೊಡ್ಡಲಿ ವಸಂತಕುಮಾರ್ ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಅವರು ಕಾಂಗ್ರೆಸ್ ಜತೆಗೆ ನಿಂತಿದ್ದರು ಎಂದು ಹೇಳಿದ್ದಾರೆ.

ಪಳನಿಸ್ವಾಮಿ ಮೋದಿಯವರನ್ನು ಪ್ರತಿನಿಧಿಕರಿಸುತ್ತಾರೆ, ತಮಿಳುನಾಡನ್ನು ಅಲ್ಲ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಅವರು ಮೋದಿ ಸರ್ಕಾರದ ನಿರ್ದೇಶನದಂತೆ ಕಾರ್ಯವೆಸಗುತ್ತಿದ್ದು, ರಾಜ್ಯವನ್ನು ಕಡೆಗಣಿಸಿದ್ದಾರೆ. ಕೇಂದ್ರ ಸರ್ಕಾರ ತಮಿಳು ಸಂಸ್ಕೃತಿಯನ್ನು ಗೌರವಿಸುವುದಿಲ್ಲ. ಪಳನಿಸ್ವಾಮಿ ಅವರು ರಾಜ್ಯವನ್ನು ಪ್ರತಿನಿಧಿಕರಿಸುತ್ತಿಲ್ಲ. ಮೋದಿ ಏನು ಬಯಸುತ್ತಾರೋ ಅದನ್ನು ಅವರು ಪ್ರತಿನಿಧಿಕರಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ವಿಧೇಯರಾಗಿ ಬಾಗುವ ವ್ಯಕ್ತಿ ತಮಿಳುನಾಡನ್ನು ಪ್ರತಿನಿಧಿಕರಿಸಲು ಸಾಧ್ಯವಿಲ್ಲ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಮರಾಜ ಅವರ ನಾಯಕತ್ವ ಗುಣ, ರಾಜ್ಯದ ಪ್ರಗತಿಗಾಗಿ ಅವರು ಸ್ವೀಕರಿಸಿದ ಕ್ರಮಗಳು ಶ್ಲಾಘನೀಯ . ರಾಜ್ಯದಲ್ಲಿ ರೈತರು, ಸಣ್ಣ ಉದ್ಯಮ ಮತ್ತು ಕಾರ್ಮಿಕರ ಪರವಾಗಿರುವ ಸರ್ಕಾರವನ್ನು ಕಾಂಗ್ರೆಸ್ ತಮಿಳುನಾಡಿನಲ್ಲಿ ಬಯಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸ್ಥಳೀಯರೊಂದಿಗೆ ತಾಳೆ ಹಣ್ಣು ಸವಿದ ರಾಹುಲ್, ವಿಡಿಯೊ ವೈರಲ್ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ ನಾಗರಕೊಯಿಲ್​ಗೆ ಹೋಗುವ ದಾರಿಯಲ್ಲಿರುವ ಅಚಂಗುಳಂ ಗ್ರಾಮದಲ್ಲಿ ಸ್ಥಳೀಯರೊಂದಿಗೆ ಬೆರೆತು ತಾಳೆಹಣ್ಣು ಸವಿದಿದ್ದಾರೆ. ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಯಲ್ಲಿ ರಾಹುಲ್ ತಾಳೆ ಹಣ್ಣು ಸವಿಯುತ್ತಿರುವ ವಿಡಿಯೊ ಪೋಸ್ಟ್ ಆಗಿದ್ದು, ರಾಹುಲ್ ಸುತ್ತಲೂ ಸ್ಥಳೀಯರು ಸೇರಿರುವುದು ವಿಡಿಯೊದಲ್ಲಿದೆ.

View this post on Instagram

A post shared by Rahul Gandhi (@rahulgandhi)

ಪುಷ್ ಅಪ್ ಚಾಲೆಂಜ್ ಸ್ವೀಕರಿಸಿದ ರಾಹುಲ್ ತಮಿಳುನಾಡಿನ ಮುಳಗುಮೂಡು ಸೇಂಟ್ ಜಾಸೆಫ್ಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ, ಜುಡೊ ಪಟು ಮೆರೊಲಿನ್ ಶೇಣಿಗಾ ರಾಹುಲ್ ಅವರನ್ನು ಪುಷ್ ಅಪ್ ಚಾಲೆಂಜ್​ಗೆ ಆಹ್ವಾನಿಸಿದ್ದಾರೆ. ವಿದ್ಯಾರ್ಥಿನಿಯ ಸವಾಲಿಗೆ ನಗೆ ಬೀರಿದ ರಾಹುಲ್ ಮೈಕ್ ಬದಿಗಿಟ್ಟು ವೇದಿಕೆಯಲ್ಲಿ ಪುಷ್ ಅಪ್ ಮಾಡಿದ್ದಾರೆ. ಸಭಿಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು, ಆಕೆ ಗೆದ್ದಳು ಎಂದು ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಜತೆ ಪುಷ್ ಅಪ್ ಮಾಡುವ ವಿಡಿಯೊವನ್ನು ರಾಹುಲ್ ಗಾಂಧಿ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

 ಇದನ್ನೂ ಓದಿ: Rahul Gandhi: ಸಮುದ್ರಕ್ಕೆ ರಾಹುಲ್​ ಗಾಂಧಿ ಜಿಗಿದಿದ್ದಾಗಲೀ, ಘಟನೆಯ ಚಿತ್ರೀಕರಣವಾಗಲೀ ಪೂರ್ವನಿಯೋಜಿತವಲ್ಲ

Published On - 3:59 pm, Mon, 1 March 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ