ತಮಿಳುನಾಡಿನಲ್ಲಿ ಕೀಳು ಜಾತಿ ಯಾವುದು?; ವಿವಾದಕ್ಕೀಡಾದ ಪೆರಿಯಾರ್ ವಿವಿ ಪ್ರಶ್ನೆ ಪತ್ರಿಕೆ
ತಮಿಳುನಾಡಿನಲ್ಲಿ ಕೀಳು ಜಾತಿಗೆ ಸೇರಿದ್ದು ಯಾವುದು ಎಂಬ ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರಗಳನ್ನು ಕೊಡಲಾಗಿದೆ. ಇತಿಹಾಸ ಸ್ನಾತಕೋತ್ತರ ಪದವಿ ಪ್ರಥಮ ವರ್ಷದ(ಎರಡನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆ ಕೇಳಲಾಗಿದೆ.

ಸೇಲಂ: ತಮಿಳುನಾಡಿನ (Tamil Nadu) ಪೆರಿಯಾರ್ ವಿಶ್ವವಿದ್ಯಾಲಯದ (Periyar University) ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಜಾತಿ (Caste) ಬಗ್ಗೆ ಪ್ರಶ್ನೆ ಕೇಳಿದ್ದು ಇದು ವಿವಾದಕ್ಕೀಡಾಗಿದೆ. ಗುರುವಾರ ನಡೆದ ಮೊದಲ ವರ್ಷ ಎಂಎ ಇತಿಹಾಸ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಹೀಗೊಂದು ಪ್ರಶ್ನೆ ಕೇಳಲಾಗಿದೆ. ಆದಾಗ್ಯೂ, ಈ ಬಗ್ಗೆ ತನಿಖೆ ನಡೆಸುವುದಾಗಿ ಉಪ ಕುಲಪತಿ ಜಗನ್ನಾಥನ್ ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಕೀಳು ಜಾತಿಗೆ ಸೇರಿದ್ದು ಯಾವುದು ಎಂಬ ಪ್ರಶ್ನೆಗೆ ನಾಲ್ಕು ಆಯ್ಕೆ ಉತ್ತರಗಳನ್ನು ಕೊಡಲಾಗಿದೆ. ಇತಿಹಾಸ ಸ್ನಾತಕೋತ್ತರ ಪದವಿ ಪ್ರಥಮ ವರ್ಷದ(ಎರಡನೇ ಸೆಮಿಸ್ಟರ್) Freedom Movement of Tamil Nadu: From 1800 to 1947’ಎಂಬ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆ ಕೇಳಲಾಗಿದೆ. ಈಗ್ಗೆ ಮಾತನಾಡಿದ ಉಪಕುಲಪತಿ ಇನ್ನೊಂದು ವಿಶ್ವವಿದ್ಯಾಲಯ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಿದ್ದು, ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
Tamil Nadu | 1st-year MA History students of Periyar University in Salem got asked in the exam, “Which one is the lower caste that belongs to Tamil Nadu?” with 4 options mentioning different castes pic.twitter.com/kdJxQrMo5R
— ANI (@ANI) July 15, 2022
ಪರೀಕ್ಷೆ ಪತ್ರಿಕೆಯನ್ನು ತಯಾರು ಮಾಡಿದ್ದು ಪೆರಿಯಾರ್ ವಿಶ್ವವಿದ್ಯಾಲಯ ಅಲ್ಲ. ಬೇರೊಂದು ವಿವಿ ಮತ್ತು ಬೇರೆ ಕಾಲೇಜಿನ ಪ್ರಾಧ್ಯಾಪಕರು ಈ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವುದಕ್ಕಾಗಿ ನಾವು ಪರೀಕ್ಷೆಗಿಂತ ಮುಂಚೆ ಪ್ರಶ್ನೆ ಪತ್ರಿಕೆಗಳನ್ನು ಓದಿ ನೋಡುವುದಿಲ್ಲ. ವಿವಾದತ ಪ್ರಶ್ನೆ ಬಗ್ಗೆ ನನಗೇನೂ ಮಾಹಿತಿ ಇಲ್ಲ. ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ವಿಸಿ ಹೇಳಿದ್ದಾರೆ.
ಪರೀಕ್ಷಾ ಪತ್ರಿಕೆ ಸಿದ್ಧಪಡಿಸಿದ ಪರೀಕ್ಷಾ ಕಂಟ್ರೋಲರ್ ನಿಂದ ನಾವು ವರದಿ ಕೇಳಿದ್ದೇವೆ. ಈ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.
Published On - 5:55 pm, Fri, 15 July 22