ತಮಿಳುನಾಡು ಸಿಎಂ ವಿಜಯ್ ವಿರುದ್ಧದ ವಿಚ್ಛೇದನ ಅರ್ಜಿ ವಾಪಾಸ್ ಪಡೆದ ಪತ್ನಿ ಸಂಗೀತಾ; ಕೇಸ್ ಮುಕ್ತಾಯ

Updated on: Aug 07, 2026 | 5:39 PM

ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಕಟ್ಟಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದ ನಟ ಜೋಸೆಫ್ ವಿಜಯ್ ಅವರಿಗೆ ಅವರ ಹೆಂಡತಿ ಸಂಗೀತಾ ವಿಚ್ಛೇದನ ಘೋಷಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಅವರ ವೈಯಕ್ತಿಕ ಜೀವನ ಭಾರೀ ಸುದ್ದಿಯಾಗಿತ್ತು. ಇದೀಗ ತಮಿಳುನಾಡಿನ ಸಿಎಂ ಆಗಿರುವ ವಿಜಯ್ ಅವರ ವಿರುದ್ಧದ ವಿಚ್ಛೇದನ ಅರ್ಜಿಯನ್ನು ಪತ್ನಿ ಸಂಗೀತಾ ಹಿಂಪಡೆದಿದ್ದಾರೆ. ಇದರಿಂದಾಗಿ ಆ ಕೇಸ್ ಮುಕ್ತಾಯಗೊಂಡಿದೆ. ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಆಗಲಿ, ನಂತರವಾಗಲಿ ಎಲ್ಲೂ ಸಂಗೀತಾ ಅಥವಾ ಅವರ ಮಕ್ಕಳು ಕಾಣಿಸಿಕೊಂಡಿರಲಿಲ್ಲ.

1 / 8
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಪತ್ನಿ ಸಂಗೀತಾ ಅವರು ನಟ ಹಾಗೂ ರಾಜಕಾರಣಿಯಾಗಿರುವ ವಿಜಯ್ ವಿರುದ್ಧ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಇಂದು ಹಿಂಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ವಿಜಯ್ ಅವರ ಮಗ ತನ್ನ ತಂದೆಯನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಸಂಗೀತಾ ಅವರ ಈ ನಿರ್ಧಾರ ಹೊರಬಿದ್ದಿದೆ.

2 / 8
ಪ್ರಸ್ತುತ ಲಂಡನ್‌ನಲ್ಲಿರುವ ಸಂಗೀತಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ತಮಿಳುನಾಡು ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದುದರಿಂದ ಮುಖ್ಯಮಂತ್ರಿ ವಿಜಯ್ ಅವರು ಖುದ್ದಾಗಿ ಹಾಜರಾಗಿರಲಿಲ್ಲ.

3 / 8
ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ನಡುವಿನ ವಿಚ್ಛೇದನ ಪ್ರಕರಣವನ್ನು ಸಂಗೀತಾ ಅವರು ಹಿಂಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಕೋರ್ಟ್ ಮುಕ್ತಾಯಗೊಳಿಸಿದೆ. ಇಂದು ನಡೆದ ವಿಚಾರಣೆ ವೇಳೆ ಲಂಡನ್‌ನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾದ ಸಂಗೀತಾ, ಅರ್ಜಿಯನ್ನು ಹಿಂಪಡೆಯಲು ಕಾರಣಗಳನ್ನು ನ್ಯಾಯಾಲಯಕ್ಕೆ ತಿಳಿಸಿದರು.

4 / 8
ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ಅವರು ತಮಿಳುನಾಡಿನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ದಾಂಪತ್ಯವನ್ನು ರದ್ದುಗೊಳಿಸುವಂತೆ ಕೋರಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ವಿಜಯ್ ಮತ್ತು ಸಂಗೀತಾ ದಂಪತಿಯ ವೈವಾಹಿಕ ವಿವಾದವು ಈ ವರ್ಷ ಹಲವು ಬಾರಿ ಮುಂದೂಡಿಕೆಗೆ ಒಳಗಾಗಿತ್ತು. ಜೂನ್ 15ರಂದು ನಡೆದ ವಿಚಾರಣೆಯಲ್ಲೇ ಸಂಗೀತಾ ಅವರು ಅರ್ಜಿಯನ್ನು ಹಿಂಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಂತರ ಈ ಪ್ರಕರಣವನ್ನು ಆಗಸ್ಟ್ 7ಕ್ಕೆ ಕಾಯ್ದಿರಿಸಲಾಗಿತ್ತು.

5 / 8
ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಸಂಗೀತಾ ಅವರು ಸರಿಪಡಿಸಲಾಗದ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದ್ದರು. ಜೊತೆಗೆ ಶಾಶ್ವತ ಜೀವನಾಂಶ ಮತ್ತು ಚೆನ್ನೈನ ನೀಲಂಗರೈನಲ್ಲಿರುವ ನಿವಾಸದಲ್ಲಿಯೇ ವಾಸಿಸಲು ಅನುಮತಿ ಕೋರಿದ್ದರು. ವಿಜಯ್ ಮತ್ತು ಸಂಗೀತಾ ಆಗಸ್ಟ್ 25, 1999ರಂದು ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ಅಂತರ್ ಧರ್ಮೀಯ ವಿವಾಹವಾಗಿದ್ದರು. ಈ ದಂಪತಿಗೆ 2000ರಲ್ಲಿ ಒಬ್ಬ ಮಗ ಹಾಗೂ 2005ರಲ್ಲಿ ಒಬ್ಬಳು ಮಗಳು ಜನಿಸಿದ್ದರು.

6 / 8
2023ರಲ್ಲಿ ವಿಜಯ್ ಭಾಗವಹಿಸಿದ ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಗೀತಾ ಕಾಣಿಸಿಕೊಳ್ಳದಿದ್ದಾಗ ದಂಪತಿಯ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ವದಂತಿಗಳು ಆರಂಭವಾಗಿದ್ದವು. ನಂತರ 2025ರಲ್ಲಿ ಟಿವಿಕೆ (TVK) ಪಕ್ಷದ ಎರಡನೇ ರಾಜ್ಯ ಸಮಾವೇಶದಲ್ಲೂ ಅವರು ಗೈರುಹಾಜರಾಗಿದ್ದರು. ಅದಾದ ಬಳಿಕ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ TVK ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ವಿಜಯ್ ಸರ್ಕಾರ ರಚಿಸಿ ತಮಿಳುನಾಡಿನ ಮುಖ್ಯಮಂತ್ರಿಯಾದರು. ಆ ಕಾರ್ಯಕ್ರಮದಲ್ಲೂ ಸಂಗೀತಾ ಭಾಗಿಯಾಗಿರಲಿಲ್ಲ.

7 / 8
ವಿಜಯ್ ಅವರೊಂದಿಗಿನ ಸರಿಪಡಿಸಲಾಗದ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ ಸಂಗೀತಾ ಅವರು ಫೆಬ್ರವರಿಯಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಅವರು ಜೀವನಾಂಶ ಹಾಗೂ ನೀಲಂಗರೈನಲ್ಲಿರುವ ದಂಪತಿಯ ನಿವಾಸದಲ್ಲಿ ವಾಸಿಸುವ ಹಕ್ಕನ್ನು ಕೋರಿದ್ದರು. ಅರ್ಜಿಯ ಪ್ರಕಾರ, ವಿಜಯ್ ಅವರು ನಟಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದರು.

8 / 8
ಈ ವಿಷಯ ತಮಗೆ 2021ರಲ್ಲಿ ತಿಳಿಯಿತು ಎಂದು ಹೇಳಿದ್ದರು. ಆಗ ವಿಜಯ್ ಅವರು ಈ ಸಂಬಂಧವನ್ನು ಕೊನೆಗೊಳಿಸುವುದಾಗಿ ತಮಗೆ ಭರವಸೆ ನೀಡಿದ್ದರು. ಆದರೆ ಆ ಭರವಸೆಯ ಹೊರತಾಗಿಯೂ ಅಕೆಯ ಜೊತೆಗಿನ ಸಂಬಂಧವನ್ನು ಮುಂದುವರಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಪ್ರಸಿದ್ಧ ವ್ಯಕ್ತಿಗಳಾಗಿರುವ ಕಾರಣ ಮತ್ತು ಭದ್ರತಾ ಸಮಸ್ಯೆಯ ಹಿನ್ನೆಲೆಯಲ್ಲಿ ವಿಜಯ್ ಮತ್ತು ಸಂಗೀತಾ ಇಬ್ಬರೂ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗಿರಲಿಲ್ಲ. ಅವರ ಪರ ವಕೀಲರು ಹಾಜರಾಗಿ ಪ್ರಕ್ರಿಯೆಗಳನ್ನು ನಡೆಸಿದ್ದರು.

Published On - 5:14 pm, Fri, 7 August 26

Loading...
Unable to load recommendations.
Follow Us