AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ, ಎನ್‌ಡಿಎ ಹೊಸ ಸಂಸದರು ಹಾಗೂ ಬಂಡಾಯ ನಾಯಕರಿಗೆ ಪ್ರಧಾನಿ ಮೋದಿ ಅಭಯ

ಪ್ರಧಾನಿ ಮೋದಿ ಅವರು ಹೊಸ ಎನ್​ಡಿಎ ಸಂಸದರು ಹಾಗೂ ಬಂಡಾಯ ನಾಯಕರಿಗೆ "ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ" ಎಂದು ಅಭಯ ನೀಡಿದ್ದಾರೆ. ಸಂಸತ್ತಿನ ಕಲಾಪಗಳ ಗದ್ದಲದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹೊಸ ಸಂಸದರು ಸಂಶೋಧನೆ ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಲಹೆ ನೀಡಿದರು. ಕ್ಷೇತ್ರ ಅಭಿವೃದ್ಧಿ, ಜನಸಂಪರ್ಕ ಹಾಗೂ ವಿರೋಧ ಪಕ್ಷದವರೊಂದಿಗೂ ಸೌಹಾರ್ದ ಸಂಬಂಧ ಕಾಯ್ದುಕೊಳ್ಳಲು ಕರೆ ನೀಡುವ ಮೂಲಕ ಮೈತ್ರಿಕೂಟದ ಒಗ್ಗಟ್ಟಿಗೆ ಒತ್ತು ನೀಡಿದರು.

ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ, ಎನ್‌ಡಿಎ ಹೊಸ ಸಂಸದರು ಹಾಗೂ ಬಂಡಾಯ ನಾಯಕರಿಗೆ ಪ್ರಧಾನಿ ಮೋದಿ ಅಭಯ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Aug 07, 2026 | 3:03 PM

Share

ನವದೆಹಲಿ, ಆಗಸ್ಟ್​ 07: ಸಂಸತ್ತಿನ ಕಲಾಪಗಳಲ್ಲಿ ಗದ್ದಲ ಮತ್ತು ಅಡೆತಡೆಗಳು ಉಂಟಾಗುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೊಸದಾಗಿ ಆಯ್ಕೆಯಾದ ಎನ್‌ಡಿಎ (NDA) ಲೋಕಸಭಾ ಸಂಸದರೊಂದಿಗೆ ಉಪಾಹಾರ ಸಭೆ ನಡೆಸಿದ್ದಾರೆ.ತೃಣಮೂಲ ಕಾಂಗ್ರೇಸ್‌ನ ಬಂಡುಕೋರ ನಾಯಕರು ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ಮಾಜಿ ಉದ್ಧವ್ ನಾಯಕರಿಗೆ ಭರವಸೆ ನೀಡಿದ ಪ್ರಧಾನಿ, ಎನ್‌ಡಿಎ ಒಂದು ಕುಟುಂಬ. ಪ್ರತಿಯೊಬ್ಬ ಸಂಸದನೊಂದಿಗೂ ನಾನು ನಿಲ್ಲುತ್ತೇನೆ, ನೀವು ಯಾವುದಕ್ಕೂ ಚಿಂತಿಸಬೇಕಾಗಿಲ್ಲ ಎಂದು ಅಭಯ ನೀಡಿದ್ದಾರೆ.

ಗದ್ದಲಕ್ಕೆ ಕಳವಳ: ಸಂಸತ್ತಿನ ನಿರಂತರ ಕಲಾಪ ತಡೆ ಮತ್ತು ಗದ್ದಲದಿಂದಾಗಿ ಹೊಸ ಸಂಸದರಿಗೆ ಮಾತನಾಡಲು ಅವಕಾಶ ಸಿಗದಿರುವುದಕ್ಕೆ ಪ್ರಧಾನಿ ಬೇಸರ ವ್ಯಕ್ತಪಡಿಸಿದರು. ಸಂಸತ್ತು ಸುಗಮವಾಗಿ ನಡೆಯುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದರು. ಸಂಸದರು ಸಂಸತ್ತಿನ ಇತಿಹಾಸವನ್ನು ಓದಿ, ಸಂಶೋಧಿಸಿ ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಸತ್ತಿನಲ್ಲಿರುವ ಅಪಾರ ಐತಿಹಾಸಿಕ ಮಾಹಿತಿಯನ್ನು ಭಾಷಣ ಸಿದ್ಧಪಡಿಸಲು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು ಮತ್ತು ಅಭಿವೃದ್ಧಿ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡೆತಡೆ ಬಂದರೂ ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯವನ್ನು (PMO) ಸಂಪರ್ಕಿಸುವಂತೆ ಸಂಸದರಿಗೆ ಸೂಚಿಸಲಾಯಿತು.ಬಡ ಕಾರ್ಮಿಕರು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಆಲಿಸುವಂತೆ ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

ಮತ್ತಷ್ಟು ಓದಿ:ಪ್ರಧಾನಿ ಮೋದಿಗೆ ಕರೆ ಮಾಡಿದ ನೆತನ್ಯಾಹು; ಪಶ್ಚಿಮ ಏಷ್ಯಾ ಸಂಘರ್ಷ, ಭಾರತ-ಇಸ್ರೇಲ್ ಸಂಬಂಧದ ಕುರಿತು ಚರ್ಚೆ

ದೆಹಲಿಯ ರಾಜಕೀಯ ಜಾಲದಲ್ಲಿ ಸಿಲುಕಿಕೊಳ್ಳಬೇಡಿ, ವಿರೋಧ ಪಕ್ಷದ ನಾಯಕರೊಂದಿಗೂ ಸೌಹಾರ್ದಯುತ ಬಾಂಧವ್ಯ ಕಾಯ್ದುಕೊಳ್ಳಿ ಎಂದು ಸಂಸದರಿಗೆ ನಗೆಚಟಾಕಿ ಹಾರಿಸಿದರು. ಈ ಉಪಾಹಾರ ಸಭೆಯಲ್ಲಿ ಶಿವಸೇನೆಯ 7, ಎನ್‌ಸಿಪಿ (ಅಜಿತ್ ಪವಾರ್) ಗುಂಪಿನ ಇಬ್ಬರು ಹಾಗೂ ಎನ್‌ಸಿಪಿಐ (NCPI) ನ 20 ಸಂಸದರು ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಎನ್‌ಡಿಎ ಸಂಸದರು ಭಾಗವಹಿಸಿದ್ದರು. ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚೆಗೆ 37 ಬಿಜೆಪಿ ಸಂಸದರಿಗೆ ಭೋಜನಕೂಟ ಆಯೋಜಿಸಿದ್ದರು. ಎನ್‌ಡಿಎ ಮೈತ್ರಿಕೂಟದ ಆಡಳಿತಾರೂಢ ಪಕ್ಷಗಳ ನಡುವೆ ಉತ್ತಮ ಸೌಹಾರ್ದತೆ ಮತ್ತು ಕಾರ್ಯತಂತ್ರ ರೂಪಿಸಲು ಇಂತಹ ಅನೌಪಚಾರಿಕ ಭೇಟಿಗಳನ್ನು ಒಂದೊಂದಾಗಿ ನಡೆಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!