AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ರೋಗನಿರೋಧಕ ಶಕ್ತಿಗೆ ಬೇಕು ಪೌಷ್ಟಿಕ ಆಹಾರ; ಪ್ಲೇಟ್ಅಲ್ಲಿ ತಪ್ಪದೆ ಈ 5 ಫುಡ್ಸ್ ಇರಲಿ

ಹವಾಮಾನ ಬದಲಾದಾಗ ಮಕ್ಕಳಲ್ಲಿ ಶೀತ, ಕೆಮ್ಮು, ಗಂಟಲು ನೋವು ಮತ್ತು ಜ್ವರ ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಸಮತೋಲಿತ ಆಹಾರವು ಮಕ್ಕಳ ಒಟ್ಟಾರೆ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಮೊಸರು, ಹಣ್ಣು, ಬೆಳ್ಳುಳ್ಳಿ, ಬಾದಾಮಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ವಯಸ್ಸಿಗೆ ಅನುಗುಣವಾಗಿ ಮಕ್ಕಳ ಆಹಾರದಲ್ಲಿ ಸೇರಿಸಬಹುದು.

ಮಕ್ಕಳ ರೋಗನಿರೋಧಕ ಶಕ್ತಿಗೆ ಬೇಕು ಪೌಷ್ಟಿಕ ಆಹಾರ; ಪ್ಲೇಟ್ಅಲ್ಲಿ ತಪ್ಪದೆ ಈ 5 ಫುಡ್ಸ್ ಇರಲಿ
Kids Immunity And NutritionImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Sep 20, 2026 | 8:35 PM

Share

ಹವಾಮಾನ ಬದಲಾದಾಗ ಮಕ್ಕಳಲ್ಲಿ ಶೀತ, ಕೆಮ್ಮು, ಗಂಟಲು ನೋವು ಮತ್ತು ಜ್ವರದಂತಹ ಸೋಂಕುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಲ್ಲಿ ಇತರ ಮಕ್ಕಳ ಸಂಪರ್ಕದಿಂದ ವೈರಲ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮಗುವಿನ ಆಹಾರದಲ್ಲಿ ವಿವಿಧ ಪೋಷಕಾಂಶಗಳನ್ನು ಒಳಗೊಂಡ ಸಮತೋಲಿತ ಆಹಾರಕ್ಕೆ ಆದ್ಯತೆ ನೀಡುವುದು ಮುಖ್ಯ. ಕೆಲವು ಆಹಾರಗಳು ರೋಗನಿರೋಧಕ ಶಕ್ತಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಹಾಗದರೆ ಅಂತಹ ಆಹಾರಗಳು ಯಾವುದು ಮತ್ತು ಇಮ್ಯೂನಿಟಿಗೆ ಆಹಾರದ ಜೊತೆಗೆ ಮಕ್ಕಳ ಆರೋಗ್ಯ ಕಾಪಾಡಲು ಏನು ಮಾಡಬಹುದು ಎಂಬುದರ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಮೊಸರು ಮಕ್ಕಳ ಆಹಾರದಲ್ಲಿರಲಿ

ಸಾಮಾನ್ಯವಾಗಿ ಮೊಸರು ಅಥವಾ ಸಾದಾ ಯೋಗರ್ಟ್‌ ಅನ್ನು ಮಕ್ಕಳ ಆಹಾರದಲ್ಲಿ ಸೇರಿಸಬಹುದು. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳಿವೆ. ಕೆಲವು ಯೋಗರ್ಟ್‌ಗಳು ಕರುಳಿನ ಆರೋಗ್ಯಕ್ಕೂ ಸಹಾಯ ಮಾಡಬಹುದು. ಆದರೆ ಮಕ್ಕಳಿಗೆ ಸಿಗುವ ಮೊಸರಿನಲ್ಲಿ ಹೆಚ್ಚುವರಿ ಸಕ್ಕರೆ ಸೇರಿಸುವುದನ್ನು ತಪ್ಪಿಸಿ, ಸಾದಾ ಮೊಸರಿಗೆ ಆದ್ಯತೆ ನೀಡುವುದು ಉತ್ತಮ.

ಬೆಳ್ಳುಳ್ಳಿ ಬಳಸಬಹುದು

ನಿಮಗೆ ತಿಳಿದಿರಬಹುದು ಬೆಳ್ಳುಳ್ಳಿಯಲ್ಲಿ ಸಲ್ಫರ್ ಹೊಂದಿರುವ ಅಲಿಸಿನ್ ಸೇರಿದಂತೆ ಕೆಲವು ಸಸ್ಯ ಸಂಯುಕ್ತಗಳಿವೆ. ಇದನ್ನು ಆಹಾರದ ಭಾಗವಾಗಿ ಬಳಸುವುದು ಆರೋಗ್ಯಕರ ಆಹಾರ ಪದ್ಧತಿಯ ಒಂದು ಭಾಗವಾಗಬಹುದು. ಆದರೆ ಬೆಳ್ಳುಳ್ಳಿ ತಿಂದರೆ ಮಕ್ಕಳಿಗೆ ಸೋಂಕು ಬರುವುದಿಲ್ಲ ಅಥವಾ ಅದು ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ: ಶಾಲಾ ಮಕ್ಕಳಲ್ಲಿ ಬೊಜ್ಜು ಹೆಚ್ಚಳ: ಆರೋಗ್ಯ ಇಲಾಖೆಯಿಂದ ಪೋಷಕರಿಗೆ ಜಂಕ್ ಫುಡ್ ಬಗ್ಗೆ ಎಚ್ಚರಿಕೆ

ಹಣ್ಣುಗಳಿಂದ ಸಿಗುತ್ತೆ ವಿಟಮಿನ್ ಸಿ

ಕಿತ್ತಳೆ, ಮೋಸಂಬಿ, ನಿಂಬೆಹಣ್ಣು, ಪೇರಳೆ, ಸ್ಟ್ರಾಬೆರಿ ಮುಂತಾದ ಹಣ್ಣುಗಳಲ್ಲಿ ವಿಟಮಿನ್ ಸಿ ಸೇರಿದಂತೆ ವಿವಿಧ ಪೋಷಕಾಂಶಗಳಿವೆ. ವಿಟಮಿನ್ ಸಿ ರೋಗನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯಕ್ಕೆ ಅಗತ್ಯ. ಮಗುವಿನ ವಯಸ್ಸಿಗೆ ತಕ್ಕ ಪ್ರಮಾಣದಲ್ಲಿ ವಿವಿಧ ಬಣ್ಣದ ಹಣ್ಣುಗಳನ್ನು ನೀಡುವುದು ಉತ್ತಮ. ಹಣ್ಣಿನ ಜ್ಯೂಸ್‌ಗಿಂತ ಸಂಪೂರ್ಣ ಹಣ್ಣಿಗೆ ಆದ್ಯತೆ ನೀಡಿ.

ಅರಿಶಿನ ಹಾಲು ಕೊಡಬಹುದೇ?

ಅರಿಶಿನವನ್ನು ಆಹಾರದಲ್ಲಿ ಮಿತವಾಗಿ ಬಳಸಬಹುದು. ಹಾಲು ಮಕ್ಕಳಿಗೆ ಸೂಕ್ತವಾಗಿದ್ದರೆ, ಅರಿಶಿನವನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿಸಿ ನೀಡಬಹುದು. ಆದರೆ ಅರಿಶಿನ ಹಾಲು ಶೀತ, ಜ್ವರ ಅಥವಾ ಯಾವುದೇ ಸೋಂಕಿಗೆ ಖಚಿತ ಚಿಕಿತ್ಸೆ ಅಲ್ಲ. ಜೇನುತುಪ್ಪ ಸೇರಿಸುವಾಗ ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡಬಾರದು ಎಂಬುದನ್ನು ಗಮನಿಸಿ.

ಬಾದಾಮಿ ಮತ್ತು ಇತರ ನಟ್ಸ್

ಸಾಮಾನ್ಯವಾಗಿ ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ಫೈಬರ್, ವಿಟಮಿನ್ ಇ ಸೇರಿದಂತೆ ಹಲವು ಪೋಷಕಾಂಶಗಳಿವೆ. ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಸೂಕ್ತ ಪ್ರಮಾಣದಲ್ಲಿ ಬಾದಾಮಿ ನೀಡಬಹುದು. ಚಿಕ್ಕ ಮಕ್ಕಳಿಗೆ ಬಾದಾಮಿ ನೀಡುವಾಗ ಒಮ್ಮೆಲೆ ನುಂಗುವ ಅಪಾಯ ಇರುವುದರಿಂದ ಅದನ್ನು ಪುಡಿ ಮಾಡಿ ಅಥವಾ ಸೂಕ್ತ ರೂಪದಲ್ಲಿ ನೀಡುವುದು ಸುರಕ್ಷಿತ.

ಇಮ್ಯೂನಿಟಿಗೆ ಆಹಾರ ಮಾತ್ರ ಸಾಕಾಗುವುದಿಲ್ಲ

ಮಗುವಿನ ರೋಗನಿರೋಧಕ ವ್ಯವಸ್ಥೆಗೆ ಒಂದೇ ಒಂದು ಆಹಾರ ಕಾರಣವಾಗುವುದಿಲ್ಲ. ವಿವಿಧ ತರಕಾರಿಗಳು, ಹಣ್ಣುಗಳು, ಸಂಪೂರ್ಣ ಧಾನ್ಯಗಳು, ಬೇಳೆಕಾಳುಗಳು, ಮೊಟ್ಟೆ ಅಥವಾ ಸೂಕ್ತ ಪ್ರೋಟೀನ್ ಮೂಲಗಳು, ಹಾಲು ಉತ್ಪನ್ನಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡ ಸಮತೋಲಿತ ಆಹಾರ ಮುಖ್ಯ. ಜೊತೆಗೆ ಸಾಕಷ್ಟು ನಿದ್ರೆ, ದೈಹಿಕ ಚಟುವಟಿಕೆ, ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಅಭ್ಯಾಸ ಮತ್ತು ವಯಸ್ಸಿಗೆ ಅನುಗುಣವಾದ ಲಸಿಕೆಗಳನ್ನು ಸಮಯಕ್ಕೆ ಪಡೆಯುವುದು ಕೂಡ ಮುಖ್ಯವಾಗುತ್ತದೆ. ಮಗುವಿಗೆ ಪದೇಪದೇ ಜ್ವರ, ಉಸಿರಾಟದ ತೊಂದರೆ, ತಿನ್ನಲು ಅಥವಾ ಕುಡಿಯಲು ಸಾಧ್ಯವಾಗದಿರುವುದು, ಅತಿಯಾದ ಸುಸ್ತು ಅಥವಾ ಸೋಂಕುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದರೆ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!