AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೋದಿ ಸರ್ಕಾರ ಅದ್ಭುತ ಕೆಲಸ ಮಾಡಿದೆ’: ಭಾರತದಲ್ಲಿ ಬದಲಾದ ವಾತಾವರಣದ ಕುರಿತು ಬ್ಲ್ಯಾಕ್‌ಸ್ಟೋನ್ ಅಧ್ಯಕ್ಷ ಜಾನ್ ಗ್ರೇ ಪ್ರಶಂಸೆ

ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಆರ್ಥಿಕ ವೃದ್ಧಿಗಾಗಿ ಅದ್ಭುತ ಕೆಲಸ ಮಾಡಿದೆ ಎಂದು ಬ್ಲ್ಯಾಕ್​ಸ್ಟೋನ್ ಪ್ರೆಸಿಡೆಂಟ್ ಜಾನ್ ಗ್ರೇ ಹೇಳಿದ್ದಾರೆ. ಆರ್ಥಿಕ ಬೆಳವಣಿಗೆಯ ವೇಗ ದ್ವಿಗುಣಗೊಳ್ಳುವ ಹಂತಕ್ಕೆ ಭಾರತ ಹತ್ತಿರವಾಗುತ್ತಿದೆ ಎಂದು ಜಾನ್ ಗ್ರೇ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಬಹಳ ವರ್ಷದಿಂದ ಹಿನ್ನಡೆಯಾಗಿದ್ದ ಮೂಲಭೂತ ಸೌಕರ್ಯ ಕೊರತೆಯನ್ನು ಈ ಸರ್ಕಾರ ನೀಗಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

'ಮೋದಿ ಸರ್ಕಾರ ಅದ್ಭುತ ಕೆಲಸ ಮಾಡಿದೆ': ಭಾರತದಲ್ಲಿ ಬದಲಾದ ವಾತಾವರಣದ ಕುರಿತು ಬ್ಲ್ಯಾಕ್‌ಸ್ಟೋನ್ ಅಧ್ಯಕ್ಷ ಜಾನ್ ಗ್ರೇ ಪ್ರಶಂಸೆ
ಭಾರತImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2026 | 7:55 PM

Share

ನವದೆಹಲಿ, ಸೆಪ್ಟೆಂಬರ್ 20: ಜಾಗತಿಕ ಪ್ರೈವೇಟ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯಾದ ಬ್ಲ್ಯಾಕ್‌ಸ್ಟೋನ್ (Blackstone) ಅಧ್ಯಕ್ಷ ಮತ್ತು ಸಿಒಒ ಜಾನ್ ಗ್ರೇ (Jon Gray) ಅವರು ಭಾರತದ ಆರ್ಥಿಕ ಪ್ರಗತಿಯನ್ನು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ದೇಶದ ಮೂಲಸೌಕರ್ಯ ಹಾಗೂ ಆಡಳಿತ ಸುಧಾರಣೆಯಲ್ಲಿ “ಅದ್ಭುತ ಕೆಲಸ” ಮಾಡಿದೆ ಎಂದು ಶ್ಲಾಘಿಸಿದ್ದಾರೆ. ಅವರು ‘ಬ್ಲೂಮ್‌ಬರ್ಗ್ ಟೆಲಿವಿಷನ್’ಗೆ ನೀಡಿದ ಸಂದರ್ಶನದಲ್ಲಿ ಭಾರತದಲ್ಲಿ ತಮಗಾದ ಅನುಭವ ಮತ್ತು ದೇಶದ ಆರ್ಥಿಕತೆಯಲ್ಲಿ ಉಂಟಾದ ಪ್ರಮುಖ ಬದಲಾವಣೆಗಳ ಕುರಿತು ಮಾತನಾಡಿದ್ದಾರೆ.

ಭಾರತವು ತನ್ನ ಆರ್ಥಿಕ ಬೆಳವಣಿಗೆಯ ದರವನ್ನು ಮತ್ತಷ್ಟು ವೇಗಗೊಳಿಸುವ ‘ಟಿಪ್ಪಿಂಗ್ ಪಾಯಿಂಟ್’ಗೆ ದಿನದಿಂದ ದಿನಕ್ಕೆ ಅತ್ಯಂತ ಹತ್ತಿರವಾಗುತ್ತಿದೆ. ದೇಶವೊಂದರ ಬೆಳವಣಿಗೆಯ ದರವನ್ನು ವಿಸ್ತರಿಸುವ ಹಂತಕ್ಕೆ ತಲುಪಲು ಸಮಯ ಹಿಡಿಯುತ್ತದೆ, ಭಾರತ ಈಗ ಆ ಹಂತ ತಲುಪಿದೆ ಎಂದು ಜಾನ್ ಗ್ರೇ ತಿಳಿಸಿದ್ದಾರೆ.

ಇದನ್ನೂ ಓದಿ: ಸೆಮಿಕಾನ್ ಇಂಡಿಯಾ 2026: 50,000ಕ್ಕೂ ಹೆಚ್ಚು ನೋಂದಣಿ, 600ಕ್ಕೂ ಹೆಚ್ಚು ಕಂಪನಿಗಳು ಭಾಗಿ; ಗಮನ ಸೆಳೆದ ಕರ್ನಾಟಕ ಪೆವಿಲಿಯನ್

ಬ್ಲ್ಯಾಕ್‌ಸ್ಟೋನ್‌ನ ಬದಲಾದ ತಂತ್ರಜ್ಞಾನ ಮತ್ತು ಯಶಸ್ಸು

ಆರಂಭದಲ್ಲಿ ಬ್ಲ್ಯಾಕ್‌ಸ್ಟೋನ್ ಸಣ್ಣ ತಂಡದೊಂದಿಗೆ ಭಾರತ ಪ್ರವೇಶಿಸಿದಾಗ ಸರಿಯಾದ ಸ್ಟ್ರಾಟಿಜಿ ಇಲ್ಲದೆ ಹಿನ್ನಡೆ ಅನುಭವಿಸಿತ್ತು. ಆದರೆ ನಂತರ ಕಂಪನಿಗಳ ನಿಯಂತ್ರಣ ಪಾಲುದಾರಿಕೆ (Majority Stakes), ಐಟಿ ಸೇವೆಗಳು, ವಾಣಿಜ್ಯ ರಿಯಲ್ ಎಸ್ಟೇಟ್ ಮತ್ತು ಸ್ಥಳೀಯ ಉತ್ಪಾದನಾ ವಲಯದ ಮೇಲೆ ಗಮನ ಹರಿಸಿತು. ಈ ಬದಲಿ ತಂತ್ರದಿಂದಾಗಿ ಬ್ಲ್ಯಾಕ್‌ಸ್ಟೋನ್‌ಗೆ ಜಾಗತಿಕವಾಗಿ ಅತಿ ಹೆಚ್ಚಿನ ಪ್ರೈವೇಟ್ ಈಕ್ವಿಟಿ ರಿಟರ್ನ್ಸ್ (ಲಾಭ) ಸಿಕ್ಕಿರುವುದು ಭಾರತದಲ್ಲೇ ಆಗಿದೆ.

ಮೂಲಸೌಕರ್ಯ ಕೊರತೆ ನೀಗಿಸಿದ ಮೋದಿ ಸರ್ಕಾರ

“ಭಾರತವನ್ನು ಬಹಳ ಸಮಯದಿಂದ ಹಿಂದೆಳೆದದ್ದು ದೇಶದಲ್ಲಿದ್ದ ಮೂಲಸೌಕರ್ಯದ ಕೊರತೆ. ಇದು ಕೇವಲ ಭೌತಿಕ ಮೂಲಸೌಕರ್ಯ ಮಾತ್ರವಲ್ಲದೆ, ಕಾನೂನು ಮತ್ತು ಬಂಡವಾಳ ಮಾರುಕಟ್ಟೆಯ ಮೂಲಸೌಕರ್ಯ ವ್ಯವಸ್ಥೆಗೂ ಅನ್ವಯಿಸುತ್ತದೆ. ಈ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಆಡಳಿತವು ಅದ್ಭುತ ಕೆಲಸ ಮಾಡಿದೆ ಮತ್ತು ಪ್ರತಿಯೊಂದೂ ಕೂಡ ಸರಿಯಾದ ಜಾಗಕ್ಕೆ ತಲುಪುತ್ತಿದೆ” ಎಂದು ಗ್ರೇ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಎಐನಿಂದ ವಿಶ್ವವಿನಾಶವಾಗುತ್ತಾ? ಚಾನ್ಸೇ ಇಲ್ಲ ಎನ್ನುತ್ತಾರೆ ಎನ್​ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್

ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಏರಿಕೆ

2005 ರಲ್ಲಿ 14ನೇ ಸ್ಥಾನದಲ್ಲಿದ್ದ ಭಾರತದ ಜಿಡಿಪಿ (GDP) ಇಂದು ಜಾಗತಿಕವಾಗಿ 4ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ($3.69 ಟ್ರಿಲಿಯನ್). ಯುವ ಹಾಗೂ ಶಿಕ್ಷಣ ಪಡೆದ ಅಪಾರ ಜನಸಂಖ್ಯೆ ಭಾರತದ ಆರ್ಥಿಕ ಭವಿಷ್ಯಕ್ಕೆ ದೊಡ್ಡ ಬಲವಾಗಿದೆ ಎಂದು ಬ್ಲ್ಯಾಕ್​ಸ್ಟೋನ್ ಛೇರ್ಮನ್ ಹೇಳಿದ್ದಾರೆ.

ಅಮೆರಿಕ-ಭಾರತ ಸಂಬಂಧಗಳು

ಸುಂಕ (Tariffs) ಮತ್ತು ಅಂತಾರಾಷ್ಟ್ರೀಯ ಘರ್ಷಣೆಗಳಿಂದಾಗಿ ತೈಲ ಬೆಲೆ ಏರಿಕೆಯಂತಹ ಸಣ್ಣಪುಟ್ಟ ಸವಾಲುಗಳು/ಅಡೆತಡೆಗಳು ಎದುರಾಗಬಹುದಾದರೂ, ಅಮೆರಿಕದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಹಾಗೂ ಬಂಡವಾಳ ಸಂಬಂಧಗಳು ನಿರಂತರವಾಗಿ ಗಟ್ಟಿಯಾಗುತ್ತಲೇ ಸಾಗಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!