AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ. 1ರಿಂದ ಎಲ್​ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ; ಅಥೆಂಟಿಕೇಶನ್ ಆಗದಿದ್ದರೆ ಏನಾಗುತ್ತದೆ, ಇಲ್ಲಿದೆ ವಿವರ

ಗೃಹ ಬಳಕೆಯ ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿದವರು ಕೂಡಲೇ ತಮ್ಮ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಮಾಡಿಸಬೇಕಾಗುತ್ತದೆ. ಅಕ್ಟೋಬರ್ 1ರಿಂದ ದೃಢೀಕರಣ ಕಡ್ಡಾಯವಾಗಿರುತ್ತದೆ. ಬಯೋಮೆಟ್ರಿಕ್ ದೃಢೀಕರಣ ಮಾಡಿಸದಿದ್ದರೆ ಸಬ್ಸಿಡಿ ಬೆಲೆಗೆ ಎಲ್​ಪಿಜಿ ಸಿಲಿಂಡರ್ ಸಿಗುವುದಿಲ್ಲ. ಸಬ್ಸಿಡಿರಹಿತ ಬೆಲೆಗೆ ಗ್ಯಾಸ್ ಪಡೆಯಬೇಕಾಗುತ್ತದೆ. ಗ್ಯಾಸ್ ವಿತರಕರ ಕಚೇರಿಗೆ ಹೋಗಿ ದೃಢೀಕರಣ ಮಾಡಿಸಬಹುದು.

ಅ. 1ರಿಂದ ಎಲ್​ಪಿಜಿ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯ; ಅಥೆಂಟಿಕೇಶನ್ ಆಗದಿದ್ದರೆ ಏನಾಗುತ್ತದೆ, ಇಲ್ಲಿದೆ ವಿವರ
ಎಲ್​ಪಿಜಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 20, 2026 | 4:22 PM

Share

ನವದೆಹಲಿ, ಸೆಪ್ಟೆಂಬರ್ 20: ಅಕ್ಟೋಬರ್ 1ರಿಂದ ರಿಯಾಯಿತಿ ದರದಲ್ಲಿ ಹಾಗೂ ಸಬ್ಸಿಡಿ ಸಹಿತ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Cylinder) ಬುಕ್ ಮಾಡಲು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು (Biometric Aadhaar Authentication – BAA) ಕಡ್ಡಾಯಗೊಳಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ಪ್ರಕೃತಿ ಅನಿಲ ಸಚಿವಾಲಯ ತಿಳಿಸಿದೆ. ಅರ್ಹ ಕುಟುಂಬಗಳಿಗೆ ಮಾತ್ರ ಸಬ್ಸಿಡಿ ತಲುಪುವಂತೆ ಮಾಡಲು, ನಕಲಿ ಸಂಪರ್ಕಗಳನ್ನು ತಡೆಯಲು ಮತ್ತು ಗೃಹ ಬಳಕೆಯ ಸಿಲಿಂಡರ್‌ಗಳು ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಕೆಯಾಗುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಸೆಪ್ಟೆಂಬರ್ 19ರ ವೇಳೆಗೆ ದೇಶದ ಶೇ. 89.9 ರಷ್ಟು (ಸುಮಾರು 27.43 ಕೋಟಿ) ಸಕ್ರಿಯ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇವರು ಮತ್ತೆ ಯಾವುದೇ ಪ್ರಕ್ರಿಯೆ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಟ್ರಾಯ್ ಹೊಸ ನಿಯಮ: ಈ ರೀತಿಯ ಕರೆಗಳಿಗೆ ಇನ್ನು ಮುಂದೆ ನಿಮಿಷಕ್ಕೆ 5 ಪೈಸೆ ವರೆಗೆ ಶುಲ್ಕ

ಎಲ್​ಪಿಜಿ ಗ್ರಾಹಕರು ಆಧಾರ್ ದೃಢೀಕರಣ ಮಾಡದಿದ್ದರೆ ಏನಾಗುತ್ತದೆ?

ಬಯೋಮೆಟ್ರಿಕ್ ದೃಢೀಕರಣ ಮಾಡದ ಗ್ರಾಹಕರಿಗೂ ಗ್ಯಾಸ್ ಪೂರೈಕೆ ನಿಲ್ಲುವುದಿಲ್ಲ. ಆದರೆ, ಅವರು ಸಬ್ಸಿಡಿ ರಹಿತ ಮಾರುಕಟ್ಟೆ ದರದಲ್ಲಿ (Market Price) ಸಿಲಿಂಡರ್ ಪಡೆಯಬೇಕಾಗುತ್ತದೆ.

ಆಧಾರ್ ದೃಢೀಕರಣ ಪೂರ್ಣಗೊಳಿಸುವ ಕ್ರಮ

  • ಡೆಲಿವರಿ ವೇಳೆ: ಗ್ಯಾಸ್ ಸಿಲಿಂಡರ್ ನೀಡಲು ಬರುವ ಡೆಲಿವರಿ ಸಿಬ್ಬಂದಿ ಮೂಲಕ ಆಪ್ ಬಳಸಿ ದೃಢೀಕರಣ ಮಾಡಿಸಬಹುದು.
  • ಏಜೆನ್ಸಿಗೆ ಭೇಟಿ ನೀಡಿ: ನಿಮ್ಮ ಎಲ್‌ಪಿಜಿ ವಿತರಕರ (Distributor) ಕಚೇರಿಗೆ ತೆರಳಿ ಬಯೋಮೆಟ್ರಿಕ್ ಪ್ರಕ್ರಿಯೆ ಮುಗಿಸಬಹುದು.
  • ಮೊಬೈಲ್ ಆಪ್‌ಗಳ ಮೂಲಕ: ಇಂಡೇನ್ ಗ್ರಾಹಕರು IndianOil ONE ಆಪ್; ಭಾರತ್ ಗ್ಯಾಸ್ (Bharatgas) ಗ್ರಾಹಕರು HelloBPCL ಆಪ್, ಹೆಚ್‌ಪಿ ಗ್ಯಾಸ್ (HP Gas) ಗ್ರಾಹಕರು HP PAY ಆಪ್ ಬಳಸಬಹುದು.
  • ಸಹಾಯವಾಣಿ: ಎಲ್‌ಪಿಜಿ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ನೆರವಿಗಾಗಿ ಉಚಿತ ಟೋಲ್-ಫ್ರೀ ಸಂಖ್ಯೆ 1800 2333 555 ಅನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಪೆಟ್ರೋಲ್ ಬಂಕ್​ನಲ್ಲಿ ಈ ನಂಬರ್ ಗಮನಿಸಿದ್ದೀರಾ? ಇದಕ್ಕೂ ಮೈಲೇಜ್​ಗೂ ಏನು ಸಂಬಂಧ?

ಎಲ್​ಪಿಜಿ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಲು ಜೂನ್ 30ಕ್ಕೆ ಮೊದಲು ಡೆಡ್​ಲೈನ್ ಕೊಡಲಾಗಿತ್ತು. ನಂತರ ಆರೇಳು ಬಾರಿ ಡೆಡ್​ಲೈನ್ ವಿಸ್ತರಣೆಯಾಗಿದೆ. ಈಗ ಅಂತಿಮವಾಗಿ ಅಕ್ಟೋಬರ್ 1ರವರೆಗೆ ಗಡುವು ಕೊಡಲಾಗಿದೆ.

ಆಧಾರ್ ದೃಢೀಕರಣದಿಂದ ಸಬ್ಸಿಡಿಯುಕ್ತ ಎಲ್​ಪಿಜಿ ಪೂರೈಕೆ ಸೋರಿಕೆಯಾಗುವುದನ್ನು ತಪ್ಪಿಸಬಹುದು. ಗ್ಯಾಸ್ ಸಬ್ಸಿಡಿಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಬಹುದು. ಸರ್ಕಾರ ಎಲ್​ಪಿಜಿ ಸಬ್ಸಿಡಿಗಳಿಗೆ ವರ್ಷಕ್ಕೆ ಸಾವಿರಾರು ಕೋಟಿ ರೂ ವ್ಯಯಿಸುತ್ತದೆ. ಒಎಂಸಿ ಕಂಪನಿಗಳೂ ಕೂಡ ಸಾಕಷ್ಟು ಆದಾಯ ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಎಲ್​ಪಿಜಿ ಗ್ರಾಹಕರು ತಮ್ಮ ಆಧಾರ್ ದೃಢೀಕರಣ ಮಾಡಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Sun, 20 September 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!