AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐನಿಂದ ವಿಶ್ವವಿನಾಶವಾಗುತ್ತಾ? ಚಾನ್ಸೇ ಇಲ್ಲ ಎನ್ನುತ್ತಾರೆ ಎನ್​ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಭಿವೃದ್ಧಿ ಇದೇ ವೇಗದಲ್ಲಿ ಸಾಗಿದರೆ ಮಾನವ ಸಂತತಿಗೆ ಉಳಿಗಾಲ ಇಲ್ಲವಾ? ಇಂಥ ಎಚ್ಚರಿಕೆಗಳನ್ನು ಹಲವು ನೀಡುತ್ತಿದ್ದಾರೆ. ಆದರೆ, ಎಐ ಚಿಪ್ ತಯಾರಿಸುವ ಎನ್​ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ಭಿನ್ನ ನಿಲುವು ಹೊಂದಿದ್ದಾರೆ. ಎಐ ಆವಿಷ್ಕಾರಗಳಿಂದ ಯಾವ ಅಪಾಯವೂ ಆಗದು ಎಂದಿದ್ದಾರೆ. ಆದರೆ, ಟೆಕ್ನಾಲಜಿ ಕಂಪನಿಗಳು ಸುರಕ್ಷತೆ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಎಐನಿಂದ ವಿಶ್ವವಿನಾಶವಾಗುತ್ತಾ? ಚಾನ್ಸೇ ಇಲ್ಲ ಎನ್ನುತ್ತಾರೆ ಎನ್​ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್
ಜೆನ್ಸೆನ್ ಹುವಾಂಗ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2026 | 12:44 PM

Share

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 20: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕೆಲವೇ ವರ್ಷಗಳಲ್ಲಿ ಮನುಷ್ಯರ ಸಂತತಿಯೇ ಅಳಿದುಹೋಗಲಿದೆ ಎನ್ನುವಂತಹ ಭೀತಿ ಹುಟ್ಟಿಸಿರುವ ಅಭಿಪ್ರಾಯಗಳನ್ನು ಎನ್​ವಿಡಿಯಾ (Nvidia) ಸಿಇಒ ಜೆನ್ಸೆನ್ ಹುವಾಂಗ್ (Jensen Huang) ಅಲ್ಲಗಳೆದಿದ್ದಾರೆ. ತಂತ್ರಜ್ಞಾನವು 2030ರೊಳಗೆ ಜಗತ್ತನ್ನು ಅಳಿಸುವ ಸಾಧ್ಯತೆ ನೂರಕ್ಕೆ ಸೊನ್ನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಿಬಿಎಸ್ ನ್ಯೂಸ್ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಎಐ ಚಿಪ್ ತಯಾರಕ ಕಂಪನಿಯ ಸಂಸ್ಥಾಪಕರಾದ ಅವರು, ಜಗತ್ತು ವಿನಾಶವಾಗುತ್ತದೆಂಬುದೆಲ್ಲಾ ಸತ್ಯಕ್ಕೆ ದೂರವಾದುದು ಎಂದಿದ್ದಾರೆ.

‘ಎಐ ವಿಚಾರದಲ್ಲಿ ಭೀತಿ ಪ್ರಕಟಿಸುತ್ತಿರುವವರು ರಾಜಕೀಯ ಪ್ರೇರಿತವಾಗಿ ಮಾಡುತ್ತಿರಬಹುದು. ಅಥವಾ ಗಮನ ಸೆಳೆಯು ಪ್ರವೃತ್ತಿಯಿಂದ ಈ ಮಾತುಗಳನ್ನಾಡುತ್ತಿರಬಹುದು. ಅವರ ಹೇಳಿಕೆಗಳಿಗೆ ಯಾವುದೇ ತಂತ್ರಜ್ಞಾನ ಆಧಾರ ಇಲ್ಲ’ ಎಂದು ಜೆನ್ಸೆನ್ ಹುವಾಂಗ್ ಹೇಳಿದರು.

ಇದನ್ನೂ ಓದಿ: ಭಾರತ ಮುಂದಿನ 20 ವರ್ಷದಲ್ಲಿ 38 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ: ಅಜಿತ್ ದೋವಲ್

ತಂತ್ರಜ್ಞಾನ ಬೆಳವಣಿಗೆಯ ವೇಗ ಕುಂಠಿತಗೊಳ್ಳದಿರಲಿ: ಹುವಾಂಗ್

ಎಐ ವಿಪರೀತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಇದನ್ನು ನಿಧಾನಗೊಳಿಸುವುದು ಅಗತ್ಯ ಎನ್ನುವ ಅಭಿಪ್ರಾಯವನ್ನು ಕೆಲ ತಂತ್ರಜ್ಞಾನ ಮುಖಂಡರು ಪದೇ ಪದೇ ಎಚ್ಚರಿಸುತ್ತಿರುವುದುಂಟು. ಆದರೆ, ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಭಿನ್ನ ನಿಲುವು ಹೊಂದಿದ್ಧಾರೆ. ಕಾನೂನು ನಿರ್ಬಂಧಗಳ ಮೂಲಕ ಎಐ ಬೆಳವಣಿಗೆಯ ವೇಗವನ್ನು ನಿಧಾನಗೊಳಿಸುವುದರ ಬದಲು ಎಐ ಆವಿಷ್ಕಾರಗಳ ವೇಗವನ್ನು ಕಾಯ್ದುಕೊಳ್ಳಬೇಕೆಂದು ಅವರು ವಾದಿಸಿದರು.

ತಂತ್ರಜ್ಞಾನ ಕಂಪನಿಗಳು ಆಂತರಿಕ ಗುಣಮಟ್ಟಗಳ ಪರೀಕ್ಷೆಗಳಿಗೆ ಒಡ್ಡಿಕೊಳ್ಳುತ್ತಾ, ಆರ್ಥಿಕ ಬೆಳವಣಿಗೆ ಉತ್ತೇಜಿಸುವ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಸಾಗಬೇಕು ಎಂದು ಜೆನ್ಸೆನ್ ಹುವಾಂಗ್ ತಿಳಿಹೇಳಿದರು.

ಇದನ್ನೂ ಓದಿ: 96ರ ವಯಸ್ಸಲ್ಲಿ ಅಧಿಕಾರ ಬಿಟ್ಟ ವಾರನ್ ಬಫೆಟ್; ಅಪ್ಪ ಶ್ರೀಮಂತನೆಂದು ತಿಳಿಯದೆ ಬೆಳೆದ ಮಕ್ಕಳಿಗೆ ಈಗ ದೊಡ್ಡ ಜವಾಬ್ದಾರಿ

ತಂತ್ರಜ್ಞಾನ ಅಭಿವೃದ್ಧಿಯನ್ನು ತ್ವರಿತವಾಗಿ ಪ್ರಸ್ತುತಪಡಿಸಬೇಕೆಂಬ ತರಾತುರಿಯಲ್ಲಿ ಸುರಕ್ಷತೆಯನ್ನು ಕೈಬಿಡುವುದು, ಅಸಮರ್ಪಕ ವ್ಯವಸ್ಥೆ ನಿರ್ಮಿಸುವುದರ ವಿರುದ್ಧ ಹುವಾಂಗ್ ಎಚ್ಚರಿಸಿದರು. ‘ಯಾವುದೇ ಜವಾಬ್ದಾರಿಯುತ ತಂತ್ರಜ್ಞಾನ ಕಂಪನಿಯು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮುನ್ನ ಅವು ಸಂಪೂರ್ಣ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತವೆ. ಸುರಕ್ಷತೆ ಮತ್ತು ಆವಿಷ್ಕಾರದ ವೇಗ ಪರಿಸ್ಪರ ಪೂರಕವಾಗಿರಬೇಕು’ ಎಂದು ಎನ್​ವಿಡಿಯಾದ ಸಿಇಒ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ