AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್ ಬಂಕ್​ನಲ್ಲಿ ಈ ನಂಬರ್ ಗಮನಿಸಿದ್ದೀರಾ? ಇದಕ್ಕೂ ಮೈಲೇಜ್​ಗೂ ಏನು ಸಂಬಂಧ?

ಪೆಟ್ರೋಲ್ ಬಂಕ್‌ನ ಯಂತ್ರದಲ್ಲಿ ಬೆಲೆ ಮತ್ತು ಲೀಟರ್‌ಗಳ ಪ್ರಮಾಣದ ಜೊತೆಗೆ ಕಾಣಿಸುವ ಸಾಂದ್ರತೆಯ ಸಂಖ್ಯೆಯನ್ನು ಬಹುತೇಕರು ಗಮನಿಸುವುದಿಲ್ಲ. ಆದರೆ ಇಂಧನದ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿ ಉಪಯುಕ್ತವಾಗಬಹುದು. ಪೆಟ್ರೋಲ್‌ನ ಸಾಂದ್ರತೆ ಎಂದರೇನು, ಮೈಲೇಜ್‌ಗೂ ಇದಕ್ಕೂ ಏನು ಸಂಬಂಧ ಮತ್ತು ಪೆಟ್ರೋಲ್ ಹಾಕಿಸುವಾಗ ಏನೆಲ್ಲ ಗಮನಿಸಬೇಕು ಎಂಬುದನ್ನು ತಿಳಿಯೋಣ.

ಪೆಟ್ರೋಲ್ ಬಂಕ್​ನಲ್ಲಿ ಈ ನಂಬರ್ ಗಮನಿಸಿದ್ದೀರಾ? ಇದಕ್ಕೂ ಮೈಲೇಜ್​ಗೂ ಏನು ಸಂಬಂಧ?
Petrol Density
ಮಾಲಾಶ್ರೀ ಅಂಚನ್​
| Edited By: |

Updated on: Sep 20, 2026 | 12:57 PM

Share

ಮುಖ್ಯಾಂಶಗಳು

  • ಪೆಟ್ರೋಲ್ ಬಂಕ್‌ನ ಯಂತ್ರದಲ್ಲಿ ಕಾಣಿಸುವ ಈ ಸಂಖ್ಯೆಯನ್ನು ಗಮನಿಸಿದ್ದೀರಾ?
  • ಪೆಟ್ರೋಲ್‌ನ ಸಾಂದ್ರತೆ ಮೈಲೇಜ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
  • ಪೆಟ್ರೋಲ್ ಹಾಕಿಸುವಾಗ ಮೀಟರ್‌ನ ಶೂನ್ಯ ಮಾತ್ರ ನೋಡಿದರೆ ಸಾಕೇ?

ಪೆಟ್ರೋಲ್ (Petrol) ಹಾಕಿಸಿಕೊಳ್ಳಲು ಬಂಕ್‌ಗೆ ಹೋದಾಗ ನಾವು ಸಾಮಾನ್ಯವಾಗಿ ಗಮನಿಸುವುದು ಮೀಟರ್‌ನಲ್ಲಿ ತೋರಿಸುವ ಮೊತ್ತ ಮತ್ತು ಲೀಟರ್‌ಗಳ ಪ್ರಮಾಣವನ್ನು ಮಾತ್ರ. ಆದರೆ ಪೆಟ್ರೋಲ್ ಬಂಕ್‌ನ ಯಂತ್ರದಲ್ಲಿ ಇವುಗಳ ಜೊತೆಗೆ ಇನ್ನೊಂದು ಸಂಖ್ಯೆ ಕೂಡ ಕಾಣಿಸುತ್ತದೆ. ಅದೇ ಪೆಟ್ರೋಲ್‌ನ ಸಾಂದ್ರತೆ. ಈ ಸಂಖ್ಯೆಯನ್ನು ಬಹುತೇಕರು ಗಮನಿಸುವುದಿಲ್ಲ. ಆದರೆ ಇಂಧನದ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲು ಇದು ಉಪಯುಕ್ತ ಮಾಹಿತಿಯಾಗಿದೆ.

ಪೆಟ್ರೋಲ್‌ನ ಸಾಂದ್ರತೆ ಎಂದರೇನು?

ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಪ್ರಮಾಣದ ಜಾಗದಲ್ಲಿ ಎಷ್ಟು ಇಂಧನದ ದ್ರವ್ಯರಾಶಿ ಇದೆ ಎಂಬುದನ್ನು ಸಾಂದ್ರತೆ ಸೂಚಿಸುತ್ತದೆ. ಪೆಟ್ರೋಲ್‌ನ ಸಾಂದ್ರತೆಯನ್ನು ಸಾಮಾನ್ಯವಾಗಿ ಕೆಜಿಗೆ ಘನ ಮೀಟರ್ (kg/m³) ಎಂಬ ಅಳತೆಯಲ್ಲಿ ತೋರಿಸಲಾಗುತ್ತದೆ. ಪೆಟ್ರೋಲ್ ಬಂಕ್‌ನ ಯಂತ್ರದಲ್ಲಿ ಬೆಲೆ ಮತ್ತು ಲೀಟರ್‌ಗಳ ಪ್ರಮಾಣದ ಜೊತೆಗೆ ಈ ಸಂಖ್ಯೆಯೂ ಕಾಣಿಸುತ್ತದೆ. ಪೆಟ್ರೋಲ್‌ನ ಸಾಂದ್ರತೆ ಸಾಮಾನ್ಯವಾಗಿ 730ರಿಂದ 770 ಕೆಜಿ/ಘನ ಮೀಟರ್ ವ್ಯಾಪ್ತಿಯಲ್ಲಿರಬೇಕು. ಡೀಸೆಲ್‌ಗೆ ಇದು 820ರಿಂದ 860 ಕೆಜಿ/ಘನ ಮೀಟರ್ ವ್ಯಾಪ್ತಿಯಲ್ಲಿರುತ್ತದೆ.

ಸಾಂದ್ರತೆಗೂ ಮೈಲೇಜ್‌ಗೂ ಏನು ಸಂಬಂಧ?

ಇಂಧನದ ಗುಣಮಟ್ಟ ವಾಹನದ ಕಾರ್ಯಕ್ಷಮತೆ ಮತ್ತು ಮೈಲೇಜ್ ಮೇಲೆ ಪರಿಣಾಮ ಬೀರಬಹುದು. ಗುಣಮಟ್ಟದಲ್ಲಿ ಸಮಸ್ಯೆಯಿರುವ ಅಥವಾ ಕಲಬೆರಕೆಯಾದ ಇಂಧನವನ್ನು ನಿರಂತರವಾಗಿ ಬಳಸಿದರೆ ವಾಹನದ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ. ದೀರ್ಘಕಾಲ ಇಂತಹ ಇಂಧನ ಬಳಕೆಯಿಂದ ಎಂಜಿನ್, ಇಂಧನ ಇಂಜೆಕ್ಟರ್ ಮತ್ತು ಸ್ಪಾರ್ಕ್ ಪ್ಲಗ್‌ನಂತಹ ಭಾಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಆದರೆ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಂದ್ರತೆಯ ಸಂಖ್ಯೆ ನಿಗದಿತ ವ್ಯಾಪ್ತಿಯಿಂದ ಹೊರಗಿದೆ ಎಂದರೆ ಅದನ್ನು ಮಾತ್ರ ಆಧರಿಸಿ ಇಂಧನ ಕಲಬೆರಕೆಯಾಗಿದೆ ಎಂದು ತಕ್ಷಣ ತೀರ್ಮಾನಿಸಬಾರದು. ಇಂಧನದ ಸಾಂದ್ರತೆಯ ಮೇಲೆ ತಾಪಮಾನವೂ ಪರಿಣಾಮ ಬೀರುತ್ತದೆ. ಆದ್ದರಿಂದ ಅನುಮಾನವಿದ್ದರೆ ಬಂಕ್‌ನಲ್ಲಿ ಲಭ್ಯವಿರುವ ಅಧಿಕೃತ ಪರೀಕ್ಷಾ ವಿಧಾನಗಳ ಮೂಲಕ ಪರಿಶೀಲಿಸುವುದು ಸೂಕ್ತ.

Tata Sierra Legend: ಟಾಟಾ ಸಿಯೆರಾ ಲೆಜೆಂಡ್ ಸರಣಿ ಬಿಡುಗಡೆ; ಬೆಲೆ 11.99 ಲಕ್ಷ, ಏನೆಲ್ಲ ಬದಲಾವಣೆ?

ಪೆಟ್ರೋಲ್ ಹಾಕಿಸುವಾಗ ಏನು ಗಮನಿಸಬೇಕು?

ಪೆಟ್ರೋಲ್ ಹಾಕಿಸುವ ಮೊದಲು ಯಂತ್ರದಲ್ಲಿ 0.00 ತೋರಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಲೀಟರ್‌ಗಳ ಪ್ರಮಾಣ ಮತ್ತು ಪ್ರತಿ ಲೀಟರ್‌ಗೆ ಇರುವ ಬೆಲೆಯೂ ಸರಿಯಾಗಿದೆಯೇ ಗಮನಿಸಿ. ಅನುಮಾನವಿದ್ದರೆ ರೂಪಾಯಿ ಮೊತ್ತದ ಬದಲು ನೇರವಾಗಿ 1, 2 ಅಥವಾ 5 ಲೀಟರ್‌ಗಳಂತೆ ಪೆಟ್ರೋಲ್ ಹಾಕಿಸಿಕೊಳ್ಳಬಹುದು.

ಇದಲ್ಲದೆ, ಬಂಕ್‌ನ ಯಂತ್ರದಲ್ಲಿ ಕಾಣಿಸುವ ಸಾಂದ್ರತೆಯ ಸಂಖ್ಯೆಯನ್ನೂ ಗಮನಿಸಬೇಕು. ಇಂಧನದ ಗುಣಮಟ್ಟದ ಬಗ್ಗೆ ಅನುಮಾನವಿದ್ದರೆ ಬಂಕ್ ಸಿಬ್ಬಂದಿಯಿಂದ ಫಿಲ್ಟರ್ ಪೇಪರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೇಳಬಹುದು. ಪ್ರಮಾಣದ ಬಗ್ಗೆ ಅನುಮಾನವಿದ್ದರೆ ಬಂಕ್‌ನಲ್ಲಿ ಲಭ್ಯವಿರುವ ಪ್ರಮಾಣೀಕೃತ 5 ಲೀಟರ್ ಅಳತೆಯ ಪಾತ್ರೆಯ ಮೂಲಕ ಇಂಧನದ ಪ್ರಮಾಣ ಪರಿಶೀಲಿಸುವ ಅವಕಾಶವೂ ಗ್ರಾಹಕರಿಗೆ.

ಹೀಗಾಗಿ ಮುಂದಿನ ಬಾರಿ ಪೆಟ್ರೋಲ್ ಬಂಕ್‌ಗೆ ಹೋದಾಗ ಬೆಲೆ ಮತ್ತು ಲೀಟರ್‌ಗಳ ಪ್ರಮಾಣದ ಜೊತೆಗೆ ಯಂತ್ರದಲ್ಲಿ ಕಾಣಿಸುವ ಸಾಂದ್ರತೆಯ ಸಂಖ್ಯೆಯನ್ನೂ ಒಮ್ಮೆ ಗಮನಿಸಿ. ಇಂಧನದ ಗುಣಮಟ್ಟದ ಬಗ್ಗೆ ಅನುಮಾನ ಬಂದರೆ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಹೆಚ್ಚು ಸುರಕ್ಷಿತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ