AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lemon Water Benefits: ಪ್ರತಿದಿನ ನಿಂಬೆ ನೀರು ಕುಡಿಯುವುದರಿಂದ ದೇಹದಲ್ಲಾಗುವ ಬದಲಾವಣೆಗಳಿವು!

ಪ್ರತಿದಿನ ನಿಂಬೆ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸ. ಇದು ದೇಹಕ್ಕೆ ಹೈಡ್ರೇಷನ್ ನೀಡಲು ಮತ್ತು ವಿಟಮಿನ್ ಸಿ ಪಡೆಯಲು ಸಹಾಯ ಮಾಡುತ್ತದೆ. ಸಕ್ಕರೆ ಪಾನೀಯಗಳ ಬದಲಿಗೆ ಇದನ್ನು ಕುಡಿದರೆ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಆದರೆ ನಿಂಬೆ ನೀರು ತೂಕ ಇಳಿಸುವ ಮ್ಯಾಜಿಕ್ ಡ್ರಿಂಕ್ ಅಲ್ಲ. ಹೆಚ್ಚು ಸೇವಿಸಿದರೆ ಹಲ್ಲಿನ ಎನಾಮೆಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಹಾಗಾಗಿ ಇದರಿಂದ ಸಿಗುವ ಪ್ರಯೋಜನಗಳು ಮತ್ತು ಯಾವ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಬೇಕು.

Lemon Water Benefits: ಪ್ರತಿದಿನ ನಿಂಬೆ ನೀರು ಕುಡಿಯುವುದರಿಂದ ದೇಹದಲ್ಲಾಗುವ ಬದಲಾವಣೆಗಳಿವು!
Lemon Water BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 17, 2026 | 8:59 PM

Share

ಬೆಳಗ್ಗೆ ಎದ್ದ ತಕ್ಷಣ ನಿಂಬೆ ನೀರು ಕುಡಿಯುವ ಅಭ್ಯಾಸ ಹಲವರಿಗಿದೆ. ಕೆಲವರು ಇದನ್ನು ದೇಹದ ಡಿಟಾಕ್ಸ್, ತೂಕ ಇಳಿಕೆ ಮತ್ತು ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿ ಎಂದು ಹೇಳುತ್ತಾರೆ. ಆದರೆ ನಿಂಬೆ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಸಿಗುವ ಪ್ರಯೋಜನವೇನು ಮತ್ತು ಪ್ರತಿದಿನ ಕುಡಿದರೆ ದೇಹದಲ್ಲಿ ಉಂಟಾಗುವ ಬದಲಾವಣೆಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ನಿಂಬೆ ನೀರಿನ ಪ್ರಮುಖ ಪ್ರಯೋಜನ ಅದರಲ್ಲಿರುವ ನೀರು ಮತ್ತು ನಿಂಬೆಯಲ್ಲಿನ ವಿಟಮಿನ್ ಸಿ. ಆದರೆ ಇದನ್ನು ಯಾವುದೇ ಕಾಯಿಲೆಗೆ ಔಷಧಿ ಅಥವಾ ತೂಕ ಇಳಿಸುವ ಮ್ಯಾಜಿಕ್ ಡ್ರಿಂಕ್ ಎಂದು ಪರಿಗಣಿಸಬಾರದು. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹಕ್ಕೆ ಹೈಡ್ರೇಷನ್

ನಿಂಬೆ ನೀರಿನ ಪ್ರಮುಖ ಪ್ರಯೋಜನ ನೀರಿನಿಂದಲೇ ಬರುತ್ತದೆ. ಸಾಕಷ್ಟು ದ್ರವ ಸೇವನೆಯು ದೇಹದ ನೀರಿನ ಸಮತೋಲನ ಕಾಪಾಡಲು, ದೇಹದ ಉಷ್ಣತೆ ನಿಯಂತ್ರಿಸಲು ಮತ್ತು ಸಾಮಾನ್ಯ ದೈಹಿಕ ಕಾರ್ಯಗಳಿಗೆ ಅಗತ್ಯ. ನೀರು ಕುಡಿಯಲು ಇಷ್ಟವಿಲ್ಲದವರಿಗೆ ನಿಂಬೆ ಸೇರಿಸುವುದರಿಂದ ರುಚಿ ಹೆಚ್ಚಾಗಿ ನೀರು ಕುಡಿಯುವ ಪ್ರಮಾಣ ಹೆಚ್ಚಾಗಬಹುದು.

ವಿಟಮಿನ್ ಸಿ ಸಿಗುತ್ತದೆ

ನಿಂಬೆಯಲ್ಲಿ ವಿಟಮಿನ್ ಸಿ ಇದೆ. ಇದು ಆ್ಯಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ ರೋಗನಿರೋಧಕ ವ್ಯವಸ್ಥೆಯ ಸಾಮಾನ್ಯ ಕಾರ್ಯಕ್ಕೆ ಸಹಾಯ ಮಾಡುತ್ತದೆ. ದೇಹದಲ್ಲಿ ಕೊಲಾಜನ್ ಉತ್ಪಾದನೆಗೂ ವಿಟಮಿನ್ ಸಿ ಅಗತ್ಯ. ಆದರೆ ಒಂದು ಗ್ಲಾಸ್ ನಿಂಬೆ ನೀರಿನಿಂದ ದಿನದ ಸಂಪೂರ್ಣ ವಿಟಮಿನ್ ಸಿ ಸಿಗುತ್ತದೆ ಎಂದು ಭಾವಿಸಬಾರದು. ಕೆಲವರಿಗೆ ನಿಂಬೆ ನೀರು ಕುಡಿದ ನಂತರ ಹಗುರವಾದ ಅನುಭವವಾಗಬಹುದು. ಆದರೆ ಇದು ಎಲ್ಲಾ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರವಲ್ಲ. ಆ್ಯಸಿಡಿಟಿ, ಗ್ಯಾಸ್ಟ್ರೈಟಿಸ್, ಹೊಟ್ಟೆ ಉರಿ ಅಥವಾ ನೋವು ಇರುವ ಕೆಲವರಿಗೆ ನಿಂಬೆ ನೀರು ಅಸ್ವಸ್ಥತೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಜಿಮ್‌ಗೆ ಹೋಗುವವರು ತಪ್ಪದೇ ತಿಳಿಯಿರಿ: ವರ್ಕೌಟ್‌ ಮಾಡುವಾಗ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?

ತೂಕ ಇಳಿಕೆಗೆ ಮ್ಯಾಜಿಕ್ ಡ್ರಿಂಕ್ ಅಲ್ಲ

ನಿಂಬೆ ನೀರು ನೇರವಾಗಿ ಕೊಬ್ಬನ್ನು ಕರಗಿಸುತ್ತದೆ ಎಂಬುದಕ್ಕೆ ಸಾಕಷ್ಟು ಆಧಾರವಿಲ್ಲ. ಆದರೆ ಸಕ್ಕರೆ ತುಂಬಿದ ತಂಪು ಪಾನೀಯಗಳ ಬದಲಿಗೆ ಸಕ್ಕರೆ ಇಲ್ಲದ ನಿಂಬೆ ನೀರು ಕುಡಿದರೆ ಹೆಚ್ಚುವರಿ ಸಕ್ಕರೆ ಮತ್ತು ಕ್ಯಾಲೊರಿ ಸೇವನೆ ಕಡಿಮೆಯಾಗಬಹುದು. ಆದರೆ ತೂಕ ನಿಯಂತ್ರಣಕ್ಕೆ ಒಟ್ಟು ಆಹಾರ, ವ್ಯಾಯಾಮ ಮತ್ತು ನಿದ್ರೆ ಕೂಡ ಬಹಳ ಮುಖ್ಯವಾಗುತ್ತದೆ.

ಕಿಡ್ನಿ ಸ್ಟೋನ್‌ಗಳಲ್ಲಿ ಸಿಟ್ರೇಟ್ ಪಾತ್ರ

ನಿಂಬೆಯಂತಹ ಸಿಟ್ರಸ್ ಹಣ್ಣುಗಳಲ್ಲಿ ಸಿಟ್ರೇಟ್ ಇರುತ್ತದೆ. ಸಾಕಷ್ಟು ದ್ರವ ಸೇವನೆ ಕೆಲವು ವಿಧದ ಕಿಡ್ನಿ ಸ್ಟೋನ್‌ಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಸಿಟ್ರೇಟ್ ಕೂಡ ಪ್ರಯೋಜನಕಾರಿಯಾಗಬಹುದು. ಆದರೆ ಈಗಾಗಲೇ ಕಿಡ್ನಿ ಸ್ಟೋನ್ ಅಥವಾ ಕಿಡ್ನಿ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಹಲ್ಲಿನ ಎನಾಮೆಲ್ ಬಗ್ಗೆ ಎಚ್ಚರ ವಹಿಸಿ

ನಿಂಬೆಯಲ್ಲಿರುವ ಸಿಟ್ರಿಕ್ ಆ್ಯಸಿಡ್‌ನಿಂದ ನಿಂಬೆ ನೀರು ಆಮ್ಲೀಯವಾಗಿರುತ್ತದೆ. ಇದನ್ನು ಪದೇಪದೇ ಕುಡಿಯುವುದು ಅಥವಾ ದೀರ್ಘಕಾಲ ಬಾಯಿಯಲ್ಲಿ ಇಟ್ಟುಕೊಳ್ಳುವುದು ಹಲ್ಲಿನ ಎನಾಮೆಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕುಡಿದ ನಂತರ ಸಾಮಾನ್ಯ ನೀರಿನಿಂದ ಬಾಯಿ ಮುಕ್ಕಳಿಸುವುದು ಸಹಾಯಕ.

ಪ್ರತಿದಿನ ಕುಡಿಯಲೇಬೇಕೆಂದಿಲ್ಲ

ನಿಂಬೆ ನೀರು ಇಷ್ಟವಿದ್ದರೆ ಸಕ್ಕರೆ ಸೇರಿಸದೆ, ಮಿತವಾಗಿ ಸೇವಿಸಬಹುದು. ಆದರೆ ಪ್ರತಿದಿನ ಕುಡಿಯಲೇಬೇಕು ಎಂಬ ನಿಯಮವಿಲ್ಲ. ಹಣ್ಣು, ತರಕಾರಿ, ಬೇಳೆ, ಸಂಪೂರ್ಣ ಧಾನ್ಯ ಮತ್ತು ಪ್ರೋಟೀನ್‌ಯುಕ್ತ ಆಹಾರ ಒಳಗೊಂಡ ಸಮತೋಲಿತ ಡಯೆಟ್‌ ಆರೋಗ್ಯಕ್ಕೆ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!