AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Randstad 2026: ಭಾರತದ ಟಾಪ್ 10 ಉದ್ಯೋಗದಾತ ಕಂಪನಿಗಳ ಪಟ್ಟಿ ಪ್ರಕಟ; ಗೂಗಲ್, ಟಾಟಾ ಗ್ರೂಪ್‌ಗೆ ಅಗ್ರಸ್ಥಾನ!

ರ್ಯಾಂಡ್‌ಸ್ಟಾಡ್ ಎಂಪ್ಲಾಯರ್ ಬ್ರಾಂಡ್ ರಿಸರ್ಚ್ 2026 ವರದಿಯ ಪ್ರಕಾರ, ಗೂಗಲ್ ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ. ಟಾಟಾ ಗ್ರೂಪ್ ಮತ್ತು ಅಮೆಜಾನ್ ನಂತರದ ಸ್ಥಾನದಲ್ಲಿವೆ. ಕೆಲಸ-ಜೀವನ ಸಮತೋಲನ, ವೃತ್ತಿ ಬೆಳವಣಿಗೆಯ ಕೊರತೆ, ಮತ್ತು ಕಡಿಮೆ ಸಂಬಳ ಉದ್ಯೋಗಿಗಳು ಕಂಪನಿ ಬದಲಾಯಿಸಲು ಮುಖ್ಯ ಕಾರಣಗಳಾಗಿವೆ. ಉದ್ಯೋಗಿಗಳು ಈಗ ಕೇವಲ ಸಂಬಳಕ್ಕಿಂತ ಉತ್ತಮ ಕೆಲಸದ ವಾತಾವರಣ, ವೃತ್ತಿ ಅಭಿವೃದ್ಧಿ ಮತ್ತು ಉದ್ಯೋಗ ಭದ್ರತೆ ಬಯಸುತ್ತಾರೆ.

Randstad 2026: ಭಾರತದ ಟಾಪ್ 10 ಉದ್ಯೋಗದಾತ ಕಂಪನಿಗಳ ಪಟ್ಟಿ ಪ್ರಕಟ; ಗೂಗಲ್, ಟಾಟಾ ಗ್ರೂಪ್‌ಗೆ ಅಗ್ರಸ್ಥಾನ!
ರ್ಯಾಂಡ್‌ಸ್ಟಾಡ್ ವರದಿ
ಅಕ್ಷತಾ ವರ್ಕಾಡಿ
|

Updated on: Aug 07, 2026 | 3:04 PM

Share

ರ್ಯಾಂಡ್‌ಸ್ಟಾಡ್( Randstad) ಎಂಪ್ಲಾಯರ್ ಬ್ರಾಂಡ್ ರಿಸರ್ಚ್ 2026ರ ವರದಿಯ ಪ್ರಕಾರ, ಉದ್ಯೋಗಿಗಳನ್ನು ಆಕರ್ಷಿಸುವಲ್ಲಿ ಗೂಗಲ್ ಪ್ರಥಮ ಸ್ಥಾನದಲ್ಲಿದ್ದರೆ, ಟಾಟಾ ಗ್ರೂಪ್ ಎರಡನೇ ಸ್ಥಾನ ಮತ್ತು ಅಮೆಜಾನ್ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವಾ ವಲಯಗಳ ಪ್ರಮುಖ ಕಂಪನಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪ್ರಪಂಚದಾದ್ಯಂತದ 34 ಮಾರುಕಟ್ಟೆಗಳಲ್ಲಿ 1.7 ಮಿಲಿಯನ್ ಹಾಗೂ ಭಾರತದಲ್ಲಿ ಸುಮಾರು 3,500 ಉದ್ಯೋಗಿಗಳ ಅಭಿಪ್ರಾಯಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಜಾಗತಿಕವಾಗಿ ಇದು 26ನೇ ಅಧ್ಯಯನವಾಗಿದ್ದರೆ, ಭಾರತದಲ್ಲಿ ನಡೆಸಲಾದ 16ನೇ ಆವೃತ್ತಿಯಾಗಿದೆ.

ಭಾರತದ ಟಾಪ್ 10 ಅತ್ಯುತ್ತಮ ಉದ್ಯೋಗದಾತರು:

ರಾಂಡ್‌ಸ್ಟಾಡ್ ವರದಿಯ ಪ್ರಕಾರ ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪನಿಗಳ ಪಟ್ಟಿಯಲ್ಲಿ ಗೂಗಲ್, ಟಾಟಾ ಗ್ರೂಪ್, ಅಮೆಜಾನ್, ಸ್ಯಾಮ್‌ಸಂಗ್ ಇಂಡಿಯಾ, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಗ್ರೂಪ್, ಹಿಂದೂಸ್ತಾನ್ ಯೂನಿಲಿವರ್, ಮಹೀಂದ್ರಾ & ಮಹೀಂದ್ರಾ ಮತ್ತು ಡೆಲ್ ಟೆಕ್ನಾಲಜೀಸ್ ಸೇರಿವೆ. ವಿಶೇಷವೆಂದರೆ ಈ ಟಾಪ್ 10 ಪಟ್ಟಿಯಲ್ಲಿ ಐದು ಭಾರತೀಯ ಕಂಪನಿಗಳು ಸ್ಥಾನ ಪಡೆದಿರುವುದು ಗಮನಾರ್ಹ. ಇದು ದೇಶೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ಕೆಲಸದ ಸಂಸ್ಕೃತಿಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿವೆ ಎಂಬುದನ್ನು ತೋರಿಸುತ್ತದೆ.

ಉದ್ಯೋಗಿಗಳು ಕಂಪನಿಗಳನ್ನು ಬದಲಾಯಿಸಲು ಪ್ರಮುಖ ಕಾರಣಗಳು:

ವರದಿಯ ಪ್ರಕಾರ, ಭಾರತೀಯ ಉದ್ಯೋಗಿಗಳು ಉದ್ಯೋಗ ಬದಲಾಯಿಸಲು ಮುಖ್ಯ ಕಾರಣ ಕೆಲಸ ಮತ್ತು ಜೀವನದ ನಡುವಿನ ಸಮತೋಲನದ (Work-Life Balance) ಕೊರತೆಯಾಗಿದೆ. ಸುಮಾರು ಶೇಕಡಾ 49 ರಷ್ಟು ಉದ್ಯೋಗಿಗಳು ತಮ್ಮ ಕೆಲಸ-ಜೀವನದ ಸಮತೋಲನವು ಉತ್ತಮವಾಗಿಲ್ಲದಿದ್ದರೆ ಉದ್ಯೋಗಗಳನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಶೇಕಡಾ 42 ರಷ್ಟು ಜನರು ವೃತ್ತಿ ಬೆಳವಣಿಗೆಯ ಅವಕಾಶಗಳ ಕೊರತೆಯನ್ನು ಹಾಗೂ ಶೇಕಡಾ 41 ರಷ್ಟು ಜನರು ಕಡಿಮೆ ಸಂಬಳ ಮತ್ತು ಸವಲತ್ತುಗಳನ್ನು ಕಾರಣವಾಗಿ ನೀಡಿದ್ದಾರೆ. ಮಿಲೇನಿಯಲ್‌ಗಳಲ್ಲಿ ಶೇಕಡಾ 43 ರಷ್ಟು ಜನರು ಉತ್ತಮ ಬೆಳವಣಿಗೆಯ ಅವಕಾಶಗಳು ಲಭ್ಯವಿಲ್ಲದಿದ್ದರೆ ಉದ್ಯೋಗ ಬದಲಾಯಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಉದ್ಯೋಗಿಗಳ ಬದಲಾಗುತ್ತಿರುವ ಮನಸ್ಥಿತಿ ಮತ್ತು ಹೊಸ ಅಗತ್ಯಗಳು:

2020 ರ ನಂತರ ಉದ್ಯೋಗಿಗಳ ಆಲೋಚನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ರ್ಯಾಂಡ್‌ಸ್ಟಾಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ನಾರಾಯಣ್ ಅಯ್ಯರ್ ತಿಳಿಸಿದ್ದಾರೆ. ಉದ್ಯೋಗಿಗಳು ಕೇವಲ ಸಂಬಳ ಮತ್ತು ಸವಲತ್ತುಗಳನ್ನಷ್ಟೇ ನೋಡದೆ ಒಟ್ಟಾರೆ ಕೆಲಸದ ಅನುಭವ, ಉತ್ತಮ ಕೆಲಸದ ವಾತಾವರಣ, ವೃತ್ತಿ ಅಭಿವೃದ್ಧಿ, ಉದ್ಯೋಗ ಭದ್ರತೆ ಹಾಗೂ ಹೊಂದಿಕೊಳ್ಳುವ ಕೆಲಸದ ಅಭ್ಯಾಸಗಳನ್ನು ಪರಿಗಣಿಸುತ್ತಿದ್ದಾರೆ. ಪ್ರಸ್ತುತ ಮುಂದಿನ ಆರು ತಿಂಗಳಲ್ಲಿ ಸುಮಾರು ಅರ್ಧದಷ್ಟು ಉದ್ಯೋಗಿಗಳು ಕೆಲಸ ಬದಲಾಯಿಸುವ ಆಲೋಚನೆಯಲ್ಲಿದ್ದು, ಸಂಸ್ಥೆಗಳು ದೈನಂದಿನ ಕೆಲಸದ ಅನುಭವ ಮತ್ತು ಉದ್ಯೋಗಿ ತೃಪ್ತಿಯ ಮೇಲೆಯೂ ಗಮನಹರಿಸಬೇಕಾದ ಅಗತ್ಯವಿದೆ.

ಡಿಜಿಟಲ್ ವೃತ್ತಿಪರರ ವಿಶಿಷ್ಟ ಆದ್ಯತೆಗಳು:

ಡಿಜಿಟಲ್ ವಲಯದಲ್ಲಿ ಕೆಲಸ ಮಾಡುವ ಹೊಸ ಪೀಳಿಗೆಯ ಉದ್ಯೋಗಿಗಳು ಇತರ ಉದ್ಯೋಗಿಗಳಿಗೆ ಹೋಲಿಸಿದರೆ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ. ಈ ವಿಭಾಗದ ಶೇಕಡಾ 73 ರಷ್ಟು ವೃತ್ತಿಪರರು ಉತ್ತಮ ಸಂಬಳವನ್ನು ಪ್ರಮುಖ ಅಂಶವೆಂದು ಪರಿಗಣಿಸಿದರೆ, ಶೇಕಡಾ 55 ರಷ್ಟು ಉದ್ಯೋಗಿಗಳು ವೃತ್ತಿಜೀವನದ ಪ್ರಗತಿಗೆ ಅವಕಾಶಗಳಿಲ್ಲದಿದ್ದರೆ ಉದ್ಯೋಗ ತೊರೆಯುವುದಾಗಿ ಹೇಳಿದ್ದಾರೆ. ಹೊಸ ಪೀಳಿಗೆಯ ಉದ್ಯೋಗಿಗಳು ತ್ವರಿತ ವೃತ್ತಿ ಬೆಳವಣಿಗೆ, ಹೊಸ ಕೌಶಲ್ಯಗಳನ್ನು ಕಲಿಯುವ ಅವಕಾಶಗಳು ಮತ್ತು ಉತ್ತಮ ಕೆಲಸದ ಸಂಸ್ಕೃತಿಯನ್ನು ನಿರೀಕ್ಷಿಸುತ್ತಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಹೈಕಮಾಂಡ್​​ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಪ್ರಿಯಾಂಕ್​​ ಖರ್ಗೆ
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೆಆರ್ ಮಾರುಕಟ್ಟೆ ಫ್ಲೈಓವರ್ ಮೂಲಕ ಚಾಮರಾಜಪೇಟೆಗೆ ಹೋಗುವ ಲೂಪ್ ರಸ್ತೆ ಬಂದ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಕೊನೆಯ ಆಷಾಢ ಶುಕ್ರವಾರ; ಚಾಮುಂಡಿ ದರ್ಶನ ಪಡೆದ ತೆಲುಗು ನಟ ಸುನಿಲ್
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ಹೈಕೋರ್ಟ್​​ನಿಂದ ನೋಟಿಸ್​​
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಡಾರ್ಕ್ ಪ್ಯಾಟರ್ನ್ ಬಳಸಿದ 9 ಡಿಜಿಟಲ್ ಕಂಪನಿಗಳಿಗೆ 20 ಲಕ್ಷ ರೂ. ದಂಡ!
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
ಇಂದು ಕೊನೆಯ ಆಷಾಢ ಶುಕ್ರವಾರ: ನಾಡ ದೇವಿ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
'ಎತ್ತರಕ್ಕೆ ಬೆಳೆದರೆ ಅವರನ್ನು ಮುಗಿಸಲು ಪಿತೂರಿ ಮಾಡ್ತಾರೆ': ಸಚಿವ ಜಮೀರ್​​
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಚಾಮುಂಡಿಬೆಟ್ಟದಲ್ಲಿ ನಾಡದೇವಿಗೆ ವಿಶೇಷ ಪೂಜೆ; ಮಳೆ-ಬೆಳೆಗಾಗಿ ಪ್ರಾರ್ಥನೆ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಶಾಸಕ ಶ್ರೀನಿವಾಸ್ ಮಾನೆ ಜನ್ಮದಿನ: ಧರ್ಮಗುರುಗಳಿಗೆ ರಕ್ತ ತುಲಾಭಾರ
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್
ಮೆಜೆಸ್ಟಿಕ್​​ನಲ್ಲಿ ಆದ ಕೆಟ್ಟ ಅನುಭವ ಬಿಚ್ಚಿಟ್ಟ ನಟಿ ಮೋನಿಷಾ ವಿಜಯ್