ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಸರ್ಕಾರಕ್ಕೆ 1 ವರ್ಷ ತುಂಬಿದೆ. ಈ ವೇಳೆ, ಅವರು ಇಂದು ತಮಿಳುನಾಡಿನ ಮಹಾನಗರ ಸಾರಿಗೆ ಸಂಸ್ಥೆ (ಎಂಟಿಸಿ) ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರನ್ನು ಮಾತನಾಡಿಸಿದರು. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಲವು ಘೋಷಣೆಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಕಲ್ಯಾಣದಿಂದ ಹಿಡಿದು ಸಾರ್ವಜನಿಕ ಕುಂದುಕೊರತೆ ಪರಿಹಾರ ಯೋಜನೆಗಳತ್ತ ಗಮನಹರಿಸುವವರೆಗೆ, ಸ್ಟಾಲಿನ್ ಸರ್ಕಾರವು ಹಲವು ಭರವಸೆಗಳನ್ನು ನೀಡಿದೆ.
ಚೆನ್ನೈನ ರಾಧಾಕೃಷ್ಣನ್ ಸಲೈ (ರಸ್ತೆ) ಬಸ್ ಸಂಖ್ಯೆ 29-ಸಿ ಯಲ್ಲಿ ಪ್ರಯಾಣಿಸಿದ ಸಿಎಂ ಎಂಕೆ ಸ್ಟಾಲಿನ್ ಮಹಿಳಾ ಪ್ರಯಾಣಿಕರೊಂದಿಗೆ ಮಾತನಾಡಿ, ಅವರಿಗೆ ಉಚಿತ ಪ್ರಯಾಣದ ಸೌಲಭ್ಯದ ಬಗ್ಗೆ ವಿಚಾರಿಸಿದರು. ಮೊದಲ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಸಿಎಂ ಸ್ಟಾಲಿನ್ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರವನ್ನು ಒದಗಿಸುವುದು, ಪೌಷ್ಠಿಕಾಂಶವನ್ನು ಒದಗಿಸುವುದು ಸೇರಿದಂತೆ ಹಲವು ಸರಣಿ ಘೋಷಣೆಗಳನ್ನು ಮಾಡಿದ್ದಾರೆ.
On his way to Karunanidhi memorial and Anna Memorial at Marina beach in Chennai, Tamil Nadu CM MK Stalin briefly travelled in a govt bus to inspect condition of the buses. He spoke with the passengers & conductor on one year of his government and bus facilities. pic.twitter.com/h65MDGdDMW
— ANI (@ANI) May 7, 2022
2021ರ ವಿಧಾನಸಭೆ ಚುನಾವಣೆಗೂ ಮೊದಲು ಡಿಎಂಕೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಆಡುವುದಾಗಿ ಭರವಸೆ ನೀಡಲಾಗಿತ್ತು. ಎಂಕೆ ಸ್ಟಾಲಿನ್ ಅವರು ತಮ್ಮ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚೆನ್ನೈನ ಮರೀನಾದಲ್ಲಿರುವ ದಿವಂಗತ ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದೊರೈ ಮತ್ತು ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಸ್ಮಾರಕಗಳಿಗೆ ಪುಷ್ಪ ನಮನ ಸಲ್ಲಿಸಿದರು.
ತಮಿಳುನಾಡಿನಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಪೌಷ್ಟಿಕ ಉಪಹಾರವನ್ನು ಒದಗಿಸಲಾಗುವುದು ಎಂದು ಸಿಎಂ ಸ್ಟಾಲಿನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನರ ವೈದ್ಯಕೀಯ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸಲು ಹೆಚ್ಚಿನ ನಗರ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸುವುದಾಗಿ ಸಿಎಂ ಸ್ಟಾಲಿನ್ ಘೋಷಿಸಿದ್ದಾರೆ. ಇದೇ ವೇಳೆ ಅವರು ಕಳೆದ ಒಂದು ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ವಿವಿಧ ಸಾಧನೆಗಳನ್ನು ಮೆಲುಕು ಹಾಕಿದರು.
Tamil Nadu | Chief Minister MK Stalin pays floral tribute to former CM M. Karunanidhi and DMK founder-former CM CN Annadurai at their memorial in Marina Beach, Chennai on the occasion of the completion of one year of DMK government in the state pic.twitter.com/KeZHVCWjbn
— ANI (@ANI) May 7, 2022
1-5 ನೇ ತರಗತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಯೋಜನೆ, ಶ್ರೇಷ್ಠತೆಯ ಶಾಲೆಗಳು, ಶಾಲಾ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ, PHC (ಸಾರ್ವಜನಿಕ ಆರೋಗ್ಯ ಕೇಂದ್ರ), ಎಲ್ಲಾ ಕ್ಷೇತ್ರಗಳಿಗೆ ‘ನಿಮ್ಮ ಕ್ಷೇತ್ರದ ಯೋಜನೆಯಲ್ಲಿ ಸಿಎಂ’ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸ್ಟಾಲಿನ್ ಘೋಷಿಸಿದ್ದಾರೆ.
ಒಂದು ದಶಕದ ನಂತರ ಎಐಎಡಿಎಂಕೆ ಅಧಿಕಾರದಿಂದ ಕೆಳಗಿಳಿದು, ಕಳೆದ ವರ್ಷ ಡಿಎಂಕೆ-ಕಾಂಗ್ರೆಸ್ ಒಕ್ಕೂಟವು ರಾಜ್ಯ ಚುನಾವಣೆಯಲ್ಲಿ ಉತ್ತಮ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು.
Published On - 2:00 pm, Sat, 7 May 22