Sputnik V: ಸ್ಪುಟ್ನಿಕ್ ಬೂಸ್ಟರ್​ ಶಾಟ್​ಗೆ ಕೇಂದ್ರದಿಂದ ಅನುಮೋದನೆ; ಶೀಘ್ರದಲ್ಲೇ 6 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ

Covid-19 Vaccine: ಕೇಂದ್ರ ಸರ್ಕಾರವು ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ಆಗಿ ಸ್ಪುಟ್ನಿಕ್ ಲೈಟ್ ಅನ್ನು ಬಳಸಲು ಅನುಮೋದಿಸಿದೆ. ಇದರಿಂದಾಗಿ ಶೀಘ್ರದಲ್ಲೇ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಗಳು ಲಭ್ಯವಾಗಲಿದೆ.

Sputnik V: ಸ್ಪುಟ್ನಿಕ್ ಬೂಸ್ಟರ್​ ಶಾಟ್​ಗೆ ಕೇಂದ್ರದಿಂದ ಅನುಮೋದನೆ; ಶೀಘ್ರದಲ್ಲೇ 6 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ
ಸ್ಫುಟ್ನಿಕ್ ವಿ
Follow us
| Updated By: ಸುಷ್ಮಾ ಚಕ್ರೆ

Updated on:May 07, 2022 | 1:31 PM

ನವದೆಹಲಿ: ಭಾರತದಲ್ಲಿ ಮತ್ತೆ ಕೊವಿಡ್-19 (COVID-19) ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿದೆ. ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ (Sputknk V) ಕೊವಿಡ್ ಲಸಿಕೆಯನ್ನು ಆಯ್ಕೆ ಮಾಡಿಕೊಂಡು, ಈಗಾಗಲೇ ಲಸಿಕೆ ಹಾಕಿಸಿಕೊಂಡಿರುವ ಆರು ಲಕ್ಷಕ್ಕೂ ಹೆಚ್ಚು ಜನರು ಶೀಘ್ರದಲ್ಲೇ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅರ್ಹತೆ ಹೊಂದುತ್ತಾರೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೂರನೇ ಡೋಸ್ ಕೊವಿಡ್ ಲಸಿಕೆಯನ್ನು ಪಡೆಯಲು ಪ್ರಾರಂಭಿಸಿದ್ದರೂ, ಇದು ಕೊವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಎರಡು ಡೋಸ್ ಸ್ಪುಟ್ನಿಕ್ ವಿ ಲಸಿಕೆ ಪಡೆದವರಿಗೆ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ಪಡೆಯಲು ಯಾವುದೇ ಆಯ್ಕೆಗಳಿರಲಿಲ್ಲ. ಇದೀಗ ಅದಕ್ಕೂ ಅನುಮತಿ ನೀಡಲಾಗಿದೆ.

ಕೇಂದ್ರ ಸರ್ಕಾರವು ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ಆಗಿ ಸ್ಪುಟ್ನಿಕ್ ಲೈಟ್ ಅನ್ನು ಬಳಸಲು ಅನುಮೋದಿಸಿದೆ. ಇದರಿಂದಾಗಿ ಶೀಘ್ರದಲ್ಲೇ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಗಳು ಲಭ್ಯವಾಗಲಿದೆ. ಸ್ಪುಟ್ನಿಕ್ ಲೈಟ್ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ತುರ್ತು ಬಳಕೆಯ ಅಧಿಕಾರವನ್ನು ಸಹ ಪಡೆದಿತ್ತು. ಸ್ಪುಟ್ನಿಕ್ ವಿ ಲಸಿಕೆಯ ಎರಡು ಡೋಸ್‌ಗಳನ್ನು 21-30 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಇದು ವಿಭಿನ್ನ ಸಂಯೋಜನೆಗಳನ್ನು ಹೊಂದಿರುತ್ತದೆ.

ರಷ್ಯಾದ ಕೊವಿಡ್-19 ಲಸಿಕೆ ಪಡೆದವರಿಗೆ ಸ್ಪುಟ್ನಿಕ್ ವಿ ಲಸಿಕೆಯ ಬೂಸ್ಟರ್​ ಶಾಟ್​ ನೀಡಬಹುದು ಎಂದು ಎನ್​ಟಿಎಜಿಐ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ಹೇಳಿತ್ತು. ಸ್ಪುಟ್ನಿಕ್​ನ 2 ಡೋಸ್​ಗಳು ಪ್ರತ್ಯೇಕ ಸಂಯೋಜನೆಗಳನ್ನು ಹೊಂದಿದೆ. ರಷ್ಯಾದ ಲಸಿಕೆಯನ್ನು ಪಡೆದವರಿಗೆ ಈಗ ಪ್ರತ್ಯೇಕವಾಗಿ ಮುನ್ನೆಚ್ಚರಿಕಾ ಲಸಿಕೆಗಳನ್ನು ನೀಡುವ ನೀತಿ ಇಲ್ಲ. ಕೊವಿನ್ ಆ್ಯಪ್​ನಲ್ಲೂ ಸ್ಪುಟ್ನಿಕ್ ವಿ ಲಸಿಕೆಗೆ ಮುನ್ನೆಚ್ಚರಿಕಾ ಡೋಸ್ ಆಯ್ಕೆ ಇರಲಿಲ್ಲ. ಕಳೆದ ಜುಲೈ ನಲ್ಲಿ ಸ್ಪುಟ್ನಿಕ್ ವಿ 2ನೇ ಡೋಸ್ ಪಡೆದವರಿಗೆ ಬೂಸ್ಟರ್ ಡೋಸ್ ಲಸಿಕೆ ಪಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ. (Source)

ಇದನ್ನೂ ಓದಿ
Image
ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಡಾ. ಎನ್​.ಕೆ.ಅರೋರಾ ಆಕ್ಷೇಪ; ಅಂಕಿ-ಅಂಶಗಳ ಸಮೇತ ವಿವರಣೆ
Image
ರಾಜ್ಯದಲ್ಲಿ ಮತ್ತೆ BA.4, BA.5 ಎಂಬ ಒಮಿಕ್ರಾನ್‌ನ ಎರಡು ಉಪತಳಿಗಳು ಪತ್ತೆ
Image
ಕೋವಿಡ್ ರೂಪಾಂತರಿ ಪತ್ತೆಗೆ ಹೊಸ ಅಸ್ತ್ರ; ಜಂಟಿಯಾಗಿ ಕಾರ್ಯಾಚರಣೆಗಿಳಿದ ಬಿಬಿಎಂಪಿ, BWSSB

ಸ್ಪುಟ್ನಿಕ್ ವಿ ಲಸಿಕೆಯನ್ನು ಕೊರೊನಾ ತಡೆಗಟ್ಟುವ ಡೋಸ್ ಆಗಿ ತೆಗೆದುಕೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ ಈಗಾಗಲೇ ಯಾವ ಲಸಿಕೆಯನ್ನು ಮೊದಲನೆಯ ಲಸಿಕೆಯಾಗಿ ಬಳಸಲಾಗಿದೆಯೋ ಅದನ್ನೇ ಮೂರನೇ ಡೋಸ್ ಆಗಿ ತೆಗೆದುಕೊಳ್ಳಬೇಕಾಗುತ್ತದೆ. ಅಂದರೆ, ಎರಡು ಡೋಸ್ ಸ್ಪುಟ್ನಿಕ್ ತೆಗೆದುಕೊಂಡವರಿಗೆ ಮೂರನೇ ಡೋಸ್ ಕೂಡ ಸ್ಪುಟ್ನಿಕ್ ಆಗಿರಬೇಕು. ಸ್ಪುಟ್ನಿಕ್ ವಿ ಲಸಿಕೆಯನ್ನು ತೆಗೆದುಕೊಂಡ ಜನರಲ್ಲಿ ಮೂರನೇ ಡೋಸ್ ಬಗ್ಗೆ ಇದುವರೆಗೆ ಗೊಂದಲವಿತ್ತು. ಏಕೆಂದರೆ ಕೊವಿನ್ ಆ್ಯಪ್‌ನಲ್ಲಿ ಮುನ್ನೆಚ್ಚರಿಕೆ ಡೋಸ್‌ ಪಟ್ಟಿಯಲ್ಲಿ ಸ್ಪುಟ್ನಿಕ್ ವಿ ಆಯ್ಕೆ ಇರಲಿಲ್ಲ. ಕಳೆದ ವರ್ಷ ರಷ್ಯಾದ ಲಸಿಕೆ ಸ್ಪುಟ್ನಿಕ್‌ ವಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಲಕ್ಷಾಂತರ ಜನರು ಮೂರನೇ ಡೋಸ್ ವಿಷಯದಲ್ಲಿ ಗೊಂದಲಕ್ಕೆ ಒಳಗಾಗಿದ್ದರು. ಏಕೆಂದರೆ ಸ್ಪುಟ್ನಿಕ್‌ನ ಎರಡು ಡೋಸ್‌ಗಳ ನಡುವಿನ ವ್ಯತ್ಯಾಸವು ಸುಮಾರು 30 ದಿನಗಳದ್ದಾಗಿತ್ತು. ಆದ್ದರಿಂದ ಜನರು ಎರಡನ್ನೂ ಒಂದು ತಿಂಗಳ ಅವಧಿಯಲ್ಲಿ ತೆಗೆದುಕೊಂಡಿದ್ದರು.

ಕೊರೊನಾವೈರಸ್ ಕುರಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Sat, 7 May 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ