ಶೇಂಗಾ ಪ್ಯಾಕೆಟ್​ ಫ್ರೀಯಾಗಿ ಕೊಡು ಎಂದು ಅಂಗಡಿಯಲ್ಲಿ ಗಲಾಟೆ ಮಾಡ್ತಿದ್ದ ಪೊಲೀಸರ ಅಮಾನತು

|

Updated on: Jul 03, 2024 | 2:38 PM

ಅಂಗಡಿಗೆ ಹೋಗಿ ಶೇಂಗಾ ಪ್ಯಾಕೆಟ್​ ಉಚಿತವಾಗಿ ಕೊಡು ಎಂದು ಪೊಲೀಸರೊಬ್ಬರು ಗಲಾಟೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಇದೀಗ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಶೇಂಗಾ ಪ್ಯಾಕೆಟ್​ ಫ್ರೀಯಾಗಿ ಕೊಡು ಎಂದು ಅಂಗಡಿಯಲ್ಲಿ ಗಲಾಟೆ ಮಾಡ್ತಿದ್ದ ಪೊಲೀಸರ ಅಮಾನತು
ಪೊಲೀಸ್​
Follow us on

ಅಂಗಡಿಗೆ ಹೋಗಿ ಶೇಂಗಾ ಪ್ಯಾಕೆಟ್​ ಫ್ರೀಯಾಗಿ ಕೊಡು ಎಂದು ಗಲಾಟೆ ಮಾಡುತ್ತಿದ್ದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ತಮಿಳುನಾಡಿನ ತಿರುಚ್ಚಿಯಲ್ಲಿ ಘಟನೆ ನಡೆದಿದೆ, ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಜೂನ್ 1 ರಂದು ತಿರುಚ್ಚಿಯ ಪೊಲೀಸ್ ಠಾಣೆಯಲ್ಲಿ ನಿಯೋಜಿತವಾಗಿರುವ ವಿಶೇಷ ಸಬ್-ಇನ್‌ಸ್ಪೆಕ್ಟರ್ ರಾಧಾಕೃಷ್ಣನ್ ಅವರು ಮಾರಾಟಗಾರರಿಂದ ಉಚಿತ ಶೇಂಗಾ ಪ್ಯಾಕೆಟ್‌ಗೆ ಬೇಡಿಕೆಯಿಡುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಚಾರಣೆಗೆ ಬಾಕಿಯಿರುವ ಪೋಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಠಾಣೆಯಿಂದ ಬಂದಿದ್ದೆ, 30 ನಿಮಿಷ ಕಾಯಿಸಿದ್ದರು, ನಾನು ಕಳೆದ ಎರಡು ವರ್ಷಗಳಿಂದ ಇಲ್ಲಿಗೆ ಬರ್ತಿದ್ದೇನೆ, ನಾನು ಸ್ವಲ್ಪ ಶೇಂಗಾ ಕೇಳಿದ್ದೆ, ಅವರು ಕೊಡಬಹುದಿತ್ತಲ್ಲಾ ಎಂದು ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಅಂಗಡಿಯ ಮಾಲೀಕ ರಾಜನ್ ಮಾತನಾಡಿ, ಅಂದು ಮಗ ಅಂಗಡಿಯಲ್ಲಿದ್ದ ಅದೇ ವೇಳೆ ರಾಧಾಕೃಷ್ಣನ್ ಅವರು ಬಂದಿದ್ದರು, ಆಗ ಶೇಂಗಾ ಪ್ಯಾಕೆಟ್​ ಕೊಡು ಎಂದು ಕೇಳಿದ್ದಾರೆ, ಆಗ ಹಣ ಕೊಡಿ ಎಂದು ಮಗ ಕೇಳಿದ್ದಾನೆ, ಅದಕ್ಕೆ ಪೊಲೀಸ್​ ನಾನು ಪೊಲೀಸ್​ ಠಾಣೆಯಿಂದ ಬಂದಿರುವುದು ನನ್ನ ಬಳಿಯೇ ಹಣ ಕೇಳ್ತೀಯಾ ಎಂದು ಹೇಳಿ ಜಗಳವಾಡಿ ಹೊರಟು ಹೋಗಿದ್ದರು.

ಮತ್ತಷ್ಟು ಓದಿ: ಪೊಲೀಸ್​ ಠಾಣೆಯಲ್ಲೇ ಎಣ್ಣೆ ಪಾರ್ಟಿ; ಹೆಡ್ ಕಾನ್ಸ್‌ಟೇಬಲ್ ಅಮಾನತು

ಬಳಿಕ ಅಂಗಡಿ ಮಾಲೀಕ ರಾಜನ್ ತಿರುಚಿ ಪೊಲೀಸ್​ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ರಾಧಾಕೃಷ್ಣನ್ ಮತ್ತೆ ಇಬ್ಬರು ಪೊಲೀಸರೊಂದಿಗೆ ಬಂದು ಬೆದರಿಕೆ ಹಾಕಿದ್ದಾರೆ. ಈ ಅಂಗಡಿಯೂ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋದಲ್ಲಿ ಪೊಲೀಸರು ಅಂಗಡಿಯವರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಧಾಕೃಷ್ಣನ್ ಅವರನ್ನು ಉನ್ನತ ಅಧಿಕಾರಿಗಳು ಮುಂದಿನ ವಿಚಾರಣೆಗಾಗಿ ಅಮಾನತುಗೊಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ