AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ನಲ್ಲಿ ಪ್ರಧಾನಿ ಭದ್ರತೆ ಲೋಪ; ಆಕ್ಷೇಪ, ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಚಂದ್ರಬಾಬು ನಾಯ್ಡು

ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ಬ್ಲಾಕ್​ ಮಾಡಿದ್ದರ ಜವಾಬ್ದಾರಿಯನ್ನು ಭಾರತೀಯ ಕಿಸಾನ್​ ಯೂನಿಯನ್ (ಕ್ರಾಂತಿಕಾರಿ) ರೈತ ಸಂಘಟನೆ ಹೊತ್ತಿದೆ. 

ಪಂಜಾಬ್​​ನಲ್ಲಿ ಪ್ರಧಾನಿ ಭದ್ರತೆ ಲೋಪ; ಆಕ್ಷೇಪ, ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
TV9 Web
| Updated By: Lakshmi Hegde|

Updated on:Jan 08, 2022 | 3:19 PM

Share

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಜಾಬ್​ಗೆ ಭೇಟಿ ನೀಡಿದ್ದಾಗ ಅಲ್ಲಿ ಉಂಟಾಗಿರುವ ಭದ್ರತಾ ಲೋಪ (PM Security Breach in Punjab) ನಿಜಕ್ಕೂ ಕಳವಳಕಾರಿ ಎಂದು ಆಂಧ್ರಪ್ರದೇಶದ ತೆಲುಗು ದೇಸಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್​.ಚಂದ್ರಬಾಬು ನಾಯ್ಡು(Chandrababu Naidu) ಹೇಳಿದ್ದಾರೆ.  ಪ್ರಧಾನಿಯವರ ಭದ್ರತೆ ಎಂಬುದು ರಾಷ್ಟ್ರದ ಕಾಳಜಿ. ಹೀಗಾಗಿ ಪಂಜಾಬ್​ನಲ್ಲಿ ನಡೆದ ಘಟನೆ ಒಪ್ಪತಕ್ಕಂಥದ್ದಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಬುಧವಾರ (ಜ.5) ಪ್ರಧಾನಿ ನರೇಂದ್ರ ಮೋದಿ ಪಂಜಾಬ್​ನ ಫಿರೋಜ್​ಪುರಕ್ಕೆ ಭೇಟಿ ಕೊಡುವವರು ಇದ್ದರು. ಆದರೆ ಭಟಿಂಡಾ ಏರ್​ಪೋರ್ಟ್​ನಿಂದ ಫಿರೋಜ್​​ಪುರಕ್ಕೆ ಹೋಗುವ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿದ ಪರಿಣಾಮ ಅವರು ಹುಸ್ಸೇನಿವಾಲಾ ಸಮೀಪ ಫ್ಲೈಓವರ್ ಮೇಲೆ 15-20 ನಿಮಿಷ ಕಾದು ನಂತರ ವಾಪಸ್​ ಬರುವಂತಾಯ್ತು. ಇದು ಭಾರತದ ಇತಿಹಾಸದಲ್ಲೇ ದೊಡ್ಡ ಮಟ್ಟದ ಭದ್ರತಾ ಲೋಪ ಎನ್ನಲಾಗಿದ್ದು, ಪ್ರತಿಪಕ್ಷಗಳ ನಾಯಕರೂ ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ನಾಯಕರಂತೂ, ಕಾಂಗ್ರೆಸ್​ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದೆ ಎಂದೇ ಆರೋಪಿಸಿದೆ.  

ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ಬ್ಲಾಕ್​ ಮಾಡಿದ್ದರ ಜವಾಬ್ದಾರಿಯನ್ನು ಭಾರತೀಯ ಕಿಸಾನ್​ ಯೂನಿಯನ್ (ಕ್ರಾಂತಿಕಾರಿ) ರೈತ ಸಂಘಟನೆ ಹೊತ್ತಿದೆ.  ಪ್ರಧಾನಿ ಮೋದಿ ರಸ್ತೆ ಮೂಲಕ ಬರುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ನಂತರ ಪೊಲೀಸರು ಹೇಳಿದರೂ ನಾವು ಅವರು ಸುಳ್ಳು ಹೇಳುತ್ತಾರೆ ಎಂದೇ ಭಾವಿಸಿದೆವು. ನಮಗೆ ಮೋದಿಯವರ ಕಾರನ್ನು ತಡೆಯುವ ಉದ್ದೇಶವಾಗಲಿ, ಯೋಜನೆಯಾಗಲೀ ಇರಲಿಲ್ಲ. ಫಿರೋಜ್​​ಪುರದಲ್ಲಿ ಅವರು ರ್ಯಾಲಿ ನಡೆಸುವ ಜಾಗದಿಂದ ಸ್ವಲ್ಪ ದೂರದಲ್ಲಿ ಪ್ರತಿಭಟನೆ ನಡೆಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಅದರಲ್ಲೂ ಫಿರೋಜ್​ಪುರದಲ್ಲಿ ಹೆಲಿಪ್ಯಾಡ್​ ನೋಡಿ, ಪ್ರಧಾನಿ ಮೋದಿ ಹೆಲಿಕಾಪ್ಟರ್​ ಮೂಲಕವೇ ಬರಲಿದ್ದಾರೆ ಎಂದುಕೊಂಡಿದ್ದೆವು ಎಂದು ಬಿಕೆಯು ಮುಖ್ಯಸ್ಥ ಸುರ್ಜಿತ್​ ಸಿಂಗ್ ಪೂಲ್​ ತಿಳಿಸಿದ್ದಾರೆ.

ಇನ್ನು ಪ್ರಧಾನಿ ಭದ್ರತೆ ಲೋಪ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್​ಗೆ ಭೇಟಿ ನೀಡಿದಾಗಿನ ಪ್ರಯಾಣ ದಾಖಲೆಯನ್ನು ಸಂರಕ್ಷಿಸಿಡುವಂತೆ ಸುಪ್ರೀಂಕೋರ್ಟ್​, ಪಂಜಾಬ್​-ಹರ್ಯಾಣ ಹೈಕೋರ್ಟ್​ನ ರಿಜಿಸ್ಟ್ರಾರ್​ ಜನರಲ್​​ಗೆ ಸೂಚಿಸಿದೆ. ಜನವರಿ 10ಕ್ಕೆ ಮುಂದಿನ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್​, ಅಲ್ಲಿಯವರೆಗೂ ಕೇಂದ್ರ ಗೃಹ ಇಲಾಖೆ ಹಾಗೂ ಪಂಜಾಬ್​ ಸರ್ಕಾರ ಪ್ರಕರಣದ ತನಿಖೆ ನಡೆಸುವದಕ್ಕೆ ಸ್ಟೇ ನೀಡಿದೆ. ಸದ್ಯ ಭದ್ರತಾ ಲೋಪ ತನಿಖೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (NIA)ದ ಏಳು ಸದಸ್ಯರನ್ನೊಳಗೊಂಡ ತಂಡವನ್ನು ರಚಿಸಿದ್ದು, ಪಂಜಾಬ್​ ಸರ್ಕಾರ ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ.

ಇದನ್ನೂ ಓದಿ: ಪ್ರಧಾನಿ ಭದ್ರತೆ ಲೋಪ; ಫಿರೋಜ್​ಪುರ ಎಸ್​ಎಸ್​ಪಿಯನ್ನು ದೂಷಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದ ಭಟಿಂಡಾ ಎಸ್​ಎಸ್​ಪಿ

Published On - 3:18 pm, Sat, 8 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ