ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಶಾಲಾ ಸೇವಾ ಆಯೋಗದ (SSC) ಮಾಜಿ ಸಲಹೆಗಾರ ಶಾಂತಿ ಪ್ರಸಾದ್ ಸಿನ್ಹಾ ಮತ್ತು ಎಸ್‌ಎಸ್‌ಸಿ ಮಾಜಿ ಅಧ್ಯಕ್ಷ ಅಶೋಕ್ ಸಹಾ ಅವರನ್ನು ಸಿಬಿಐ ಬಂಧಿಸಿದೆ ಎಂದು ಏಜೆನ್ಸಿ ಅಧಿಕಾರಿ ತಿಳಿಸಿದ್ದಾರೆ. ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಜುಲೈ 23 ರಂದು ಜಾರಿ ನಿರ್ದೇಶನಾಲಯ (ED) ಬಂಧಿಸಿದ ನಂತರ ಬಂಗಾಳದ ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಬುಧವಾರ ಇಬ್ಬರು ಅಧಿಕಾರಿಗಳನ್ನು ಬಂಧಿಸಿದೆ.
CBI has arrested former School Service Commission (SSC) advisor Shanti Prasad Sinha and former SSC chairman Ashok Saha, in connection with the West Bengal teacher recruitment scam, says the agency official. pic.twitter.com/wcI4lEDksD
ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!
ಪಶ್ಚಿಮ ಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಿಗೆ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ಮಾಡಿದ ಅಕ್ರಮ ನೇಮಕಾತಿಗಳಲ್ಲಿ ಹಣದ ಜಾಡು ಹಿಡಿದಿರುವ ಇಜಿ, ಚಟರ್ಜಿ ಮತ್ತು ಮುಖರ್ಜಿ ಅವರನ್ನು ಬಂಧಿಸಿತ್ತು.
ನೇಮಕಾತಿಗಾಗಿ ರಚಿಸಲಾದ ವಿಶೇಷ ಸಲಹಾ ಸಮಿತಿಯ ಸಂಚಾಲಕ ಶಾಂತಿ ಪ್ರಸಾದ್ ಸಿನ್ಹಾ ಮತ್ತು ರಾಜ್ಯ ಶಾಲಾ ಸೇವಾ ಆಯೋಗದ ಕಾರ್ಯದರ್ಶಿ ಅಶೋಕ್ ಸಹಾ ಅವರನ್ನು ಸಿಬಿಐ ಇಂದು ಬಂಧಿಸಿದೆ.
ಕಲ್ಕತ್ತಾ ಹೈಕೋರ್ಟ್ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಸಿನ್ಹಾ ಮತ್ತು ಸಹಾ ಅವರನ್ನು ಹಲವು ಬಾರಿ ವಿಚಾರಣೆ ನಡೆಸಲಾಯಿತು. ಬುಧವಾರ ವಿಚಾರಣೆಯ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಮುಖರ್ಜಿಯವರ ಒಡೆತನದ ಅಪಾರ್ಟ್‌ಮೆಂಟ್‌ಗಳಿಂದ ₹ 49.80 ಕೋಟಿ ನಗದು, ಆಭರಣಗಳು ಮತ್ತು ಚಿನ್ನದ ಗಟ್ಟಿಗಳನ್ನು ಇಡಿ ವಶಪಡಿಸಿಕೊಂಡಿದೆ. ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ. ಚಟರ್ಜಿ ಪ್ರಭಾವಿ ವ್ಯಕ್ತಿಯಾಗಿಲ್ಲ ಎಂದು ಪ್ರತಿಪಾದಿಸಿದ ಅವರ ವಕೀಲರು, ನ್ಯಾಯಾಲಯ ವಿಧಿಸುವ ಯಾವುದೇ ಷರತ್ತುಗಳ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದರು.