ತೆಲಂಗಾಣ ಚುನಾವಣೆ ಗೆಲ್ಲಲು ಹಿಂದುಳಿದ ವರ್ಗಕ್ಕೆ ಗಾಳ, ತನ್ನ 56% ಸೀಟ್​ಗಳನ್ನು ಒಬಿಸಿಗೆ ಮೀಸಲಿಟ್ಟ ಬಿಜೆಪಿ​

| Updated By: ಆಯೇಷಾ ಬಾನು

Updated on: Oct 29, 2023 | 7:49 AM

Telangana Assembly Election 2023: ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣದಲ್ಲಿ ಬಿಜೆಪಿ ಗೆದ್ದರೆ ಹಿಂದುಳಿದ ವರ್ಗದವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಭಾರತೀಯ ಜನತಾ ಪಕ್ಷವು ತೆಲಂಗಾಣದಲ್ಲಿ ಒಬಿಸಿಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದೆ.

ತೆಲಂಗಾಣ ಚುನಾವಣೆ ಗೆಲ್ಲಲು ಹಿಂದುಳಿದ ವರ್ಗಕ್ಕೆ ಗಾಳ, ತನ್ನ 56% ಸೀಟ್​ಗಳನ್ನು ಒಬಿಸಿಗೆ ಮೀಸಲಿಟ್ಟ ಬಿಜೆಪಿ​
ಹಿಂದುಳಿದ ವರ್ಗಕ್ಕೆ ಬಿಜೆಪಿ ಗಾಳ
Follow us on

ಹೈದರಾಬಾದ್, ಅ.29: ಮುಂದಿನ ತಿಂಗಳು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ (Telangana Assembly Election 2023) ಬಿಜೆಪಿ (BJP) ಭಾರೀ ಕಸರತ್ತು ಮಾಡುತ್ತಿದೆ. ತೆಲಂಗಾಣದಲ್ಲಿ ಹಿಂದುಳಿದ ವರ್ಗದವರನ್ನು (Other Backward Class) ಓಲೈಸುವಲ್ಲಿ ಬಿಜೆಪಿ ನಿರತವಾಗಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು (Amit shah) ತೆಲಂಗಾಣದಲ್ಲಿ ಬಿಜೆಪಿ ಗೆದ್ದರೆ ಹಿಂದುಳಿದ ವರ್ಗದವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಭಾರತೀಯ ಜನತಾ ಪಕ್ಷವು ತೆಲಂಗಾಣದಲ್ಲಿ ಒಬಿಸಿಗಳ ಮೇಲೆ ವಿಶೇಷ ಗಮನವನ್ನು ನೀಡುತ್ತಿದೆ.

ತೆಲಂಗಾಣದಲ್ಲಿ ಬಿಜೆಪಿ ಇದುವರೆಗೆ 53 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ 14 ಸ್ಥಾನಗಳು ಎಸ್‌ಸಿ/ಎಸ್‌ಟಿಗೆ ನೀಡಲಾಗಿದ್ದು, ಉಳಿದ 39 ಸ್ಥಾನಗಳಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಹಿಂದುಳಿದ ವರ್ಗಕ್ಕೆ ಹಂಚಿಕೆ ಮಾಡಿದೆ. ಬಿಜೆಪಿ 13 ಸ್ಥಾನಗಳಲ್ಲಿ (ಶೇ 33) ರೆಡ್ಡಿ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆದರೆ, ಇತರ ಸಮುದಾಯದ ಜನರಿಗೆ 6 (ಶೇ 16) ಟಿಕೆಟ್ ನೀಡಲಾಗಿದೆ.

100 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾಂಗ್ರೆಸ್

ಕಾಂಗ್ರೆಸ್ 100 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪೈಕಿ 23 ಸ್ಥಾನಗಳು ಎಸ್‌ಸಿ-ಎಸ್‌ಟಿಗೆ ಮೀಸಲಾಗಿದ್ದು, 77 ಸಾಮಾನ್ಯ ಸ್ಥಾನಗಳಲ್ಲಿ ಕಾಂಗ್ರೆಸ್ 19 ಸ್ಥಾನಗಳನ್ನು ಒಬಿಸಿಗೆ, 38 ಸ್ಥಾನಗಳನ್ನು ರೆಡ್ಡಿ ಸಮುದಾಯಕ್ಕೆ ಮತ್ತು 20 ಸ್ಥಾನಗಳನ್ನು ಇತರ ಸಮುದಾಯಗಳಿಗೆ ನೀಡಿದೆ.

ಇದನ್ನೂ ಓದಿ: Telangana BJP Candidates List: ತೆಲಂಗಾಣ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಮತ್ತೊಂದೆಡೆ, ಬಿಆರ್‌ಎಸ್ 115 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇವುಗಳಲ್ಲಿ 29 ಸ್ಥಾನಗಳು ಎಸ್‌ಸಿ/ಎಸ್‌ಟಿಗೆ ನೀಡಲಾಗಿದ್ದು, 86 ಸಾಮಾನ್ಯ ಸ್ಥಾನಗಳಲ್ಲಿ ಒಬಿಸಿಗೆ 24 ಸ್ಥಾನ, ರೆಡ್ಡಿ ಸಮುದಾಯಕ್ಕೆ 39 ಸ್ಥಾನ ಮತ್ತು ಬಿಆರ್‌ಎಸ್ ಉಳಿದ ಸ್ಥಾನಗಳಲ್ಲಿ ಇತರ ಸಮುದಾಯದ ಜನರನ್ನು ಕಣಕ್ಕಿಳಿಸಿದೆ.

ತೆಲಂಗಾಣದಲ್ಲಿ ನವೆಂಬರ್ 30 ರಂದು ಮತದಾನ

ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 30 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ತೆಲಂಗಾಣದಲ್ಲಿ ಕೆಸಿಆರ್ ಅವರ ಪಕ್ಷ ಬಿಆರ್ ಎಸ್ ಅಧಿಕಾರದಲ್ಲಿದೆ. ಅವರಿಗೆ ಸವಾಲು ಹಾಕಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ (ಅಂದಿನ ಟಿಆರ್‌ಎಸ್) 88 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಅಧಿಕಾರವನ್ನು ಉಳಿಸಿಕೊಂಡಿತ್ತು. ಅದೇ ಸಮಯದಲ್ಲಿ ಕಾಂಗ್ರೆಸ್ 19 ಸ್ಥಾನಗಳನ್ನು ಮತ್ತು ಎಐಎಂಐಎಂ ಏಳು ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಡಬೇಕಾಗಿತ್ತು.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ