ಸಹಪಾಠಿ ಮೇಲೆ ಹಲ್ಲೆ ಪ್ರಕರಣ; ಪೊಲೀಸರೆದುರು ಶರಣಾದ ತೆಲಂಗಾಣದ ಬಿಜೆಪಿ ಅಧ್ಯಕ್ಷರ ಮಗ

| Updated By: ಸುಷ್ಮಾ ಚಕ್ರೆ

Updated on: Jan 19, 2023 | 3:15 PM

ಹೈದರಾಬಾದ್‌ನ ಖಾಸಗಿ ಕಾಲೇಜೊಂದರಲ್ಲಿ ಸಹ ವಿದ್ಯಾರ್ಥಿಯ ಮೇಲೆ ಭಗೀರಥ ಹಲ್ಲೆ ನಡೆಸಿರುವ ವೀಡಿಯೊಗಳು ವೈರಲ್ ಆಗಿತ್ತು.

ಸಹಪಾಠಿ ಮೇಲೆ ಹಲ್ಲೆ ಪ್ರಕರಣ; ಪೊಲೀಸರೆದುರು ಶರಣಾದ ತೆಲಂಗಾಣದ ಬಿಜೆಪಿ ಅಧ್ಯಕ್ಷರ ಮಗ
ಬಂಡಿ ಸಂಜಯ್
Image Credit source: News18
Follow us on

ಹೈದರಾಬಾದ್: ಹಲ್ಲೆ ಪ್ರಕರಣದಲ್ಲಿ ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ (Bandi Sanjay) ಅವರ ಪುತ್ರ ಬಂಡಿ ಸಾಯಿ ಭಗೀರಥ ದುಂಡಿಗಲ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಪೊಲೀಸರ ಪ್ರಕಾರ, ಕ್ರಿಮಿನಲ್ ಮೊಕದ್ದಮೆಯಡಿಯಲ್ಲಿ ದಾಖಲಾಗಿರುವ ಭಗೀರಥ ಬುಧವಾರ ಶರಣಾಗಿದ್ದಾರೆ. ಈ ಹಲ್ಲೆಯ ವಿಡಿಯೋಗಳು ವೈರಲ್ ಆದ ನಂತರ ಮಹೀಂದ್ರಾ ವಿಶ್ವವಿದ್ಯಾಲಯವು ಸಲ್ಲಿಸಿದ ದೂರಿನ ಆಧಾರದ ಮೇಲೆ ಭಗೀರಥನ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

ಹೈದರಾಬಾದ್‌ನ ಖಾಸಗಿ ಕಾಲೇಜೊಂದರಲ್ಲಿ ಸಹ ವಿದ್ಯಾರ್ಥಿಯ ಮೇಲೆ ಭಗೀರಥ ಹಲ್ಲೆ ನಡೆಸಿರುವ ವೀಡಿಯೊಗಳು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 504, ಮತ್ತು 506 ಆರ್/ಡಬ್ಲ್ಯು 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: Viral Video: 5 ರೂ.ಗಾಗಿ ಹಣ್ಣಿನ ವ್ಯಾಪಾರಿಗೆ ಥಳಿಸಿದ ಯುವಕರು; ವಿಡಿಯೋ ವೈರಲ್

ಇದೀಗ ತೆಲಂಗಾಣದ ಬಿಜೆಪಿ ಅಧ್ಯಕ್ಷ ಇದೀಗ ತಮ್ಮ ಮಗ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ. ಸಂಜಯ್ ಅವರ ಮಗ ಭಗೀರಥ ಅವರ ವಿಡಿಯೋಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅವರು ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುತ್ತಿರುವುದು ದಾಖಲಾಗಿತ್ತು. ಬಳಿಕ ಭಗೀರಥ ಹಾಗೂ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ನನ್ನ ಮಗ ಪೊಲೀಸರಿಗೆ ಶರಣಾಗಿದ್ದಾನೆ. ನನ್ನ ಮಗ ಏನಾದರೂ ತಪ್ಪು ಮಾಡಿದ್ದರೆ, ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳಬಬಹುದು ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ