ಥಾಣೆ: ಬಿಸಿಯೂಟ ಸೇವಿಸಿ 109 ವಿದ್ಯಾರ್ಥಿಗಳು ಅಸ್ವಸ್ಥ

ಬಿಸಿಯೂಟ ಸೇವಿಸಿದ 109 ವಿದ್ಯರ್ಥಿಗಳು ಅಸ್ವಸ್ಥರಾಗಿರುವ ಘಟನೆ ಥಾಣೆಯಲ್ಲಿ ನಡೆದಿದೆ. 63 ಬಾಲಕಿಯರು ಸೇರಿದಂತೆ 109 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಥಾಣೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಡೆದ ಸಂತ ಗಡ್ಗೆ ಮಹಾರಾಜ್ ಪ್ರಾಥಮಿಕ ಮತ್ತು ಮಾಧ್ಯಮಿಕ ಆಶ್ರಮ ಶಾಲೆ (ಬುಡಕಟ್ಟು ಮಕ್ಕಳ ವಸತಿ ಶಾಲೆಗಳು), ಮುಂಬೈನ ಹೊರವಲಯದಲ್ಲಿರುವ ಶಹಾಪುರ ತಾಲೂಕಿನ ಭಟ್ಸಾಯಿಯಲ್ಲಿದೆ. ಶಾಲೆಯಲ್ಲಿ 1 ರಿಂದ 10 ನೇ ತರಗತಿಯ 200 ವಿದ್ಯಾರ್ಥಿಗಳು ಇದ್ದಾರೆ.

ಥಾಣೆ: ಬಿಸಿಯೂಟ ಸೇವಿಸಿ 109 ವಿದ್ಯಾರ್ಥಿಗಳು ಅಸ್ವಸ್ಥ
ಆಹಾರ
Image Credit source: News 18

Updated on: Feb 01, 2024 | 7:45 AM

ಬಿಸಿಯೂಟ ಸೇವಿಸಿ 109 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಥಾಣೆಯಲ್ಲಿ ನಡೆದಿದೆ. 63 ಬಾಲಕಿಯರು ಸೇರಿದಂತೆ 109 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಥಾಣೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಡೆದ ಸಂತ ಗಡ್ಗೆ ಮಹಾರಾಜ್ ಪ್ರಾಥಮಿಕ ಮತ್ತು ಮಾಧ್ಯಮಿಕ ಆಶ್ರಮ ಶಾಲೆ (ಬುಡಕಟ್ಟು ಮಕ್ಕಳ ವಸತಿ ಶಾಲೆಗಳು), ಮುಂಬೈನ ಹೊರವಲಯದಲ್ಲಿರುವ ಶಹಾಪುರ ತಾಲೂಕಿನ ಭಟ್ಸಾಯಿಯಲ್ಲಿದೆ. ಶಾಲೆಯಲ್ಲಿ 1 ರಿಂದ 10 ನೇ ತರಗತಿಯ 200 ವಿದ್ಯಾರ್ಥಿಗಳು ಇದ್ದಾರೆ.

ನಾಲ್ವರು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲರನ್ನೂ ಚಿಕಿತ್ಸೆ ನಂತರ ಶಹಾಪುರದ ಉಪವಿಭಾಗದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಶಹಾಪುರ ತಹಸೀಲ್ದಾರ್ ಕೋಮಲ್ ಠಾಕೂರ್ ಪಿಟಿಐಗೆ ತಿಳಿಸಿದ್ದಾರೆ.

ಮಧ್ಯಾಹ್ನದ ಊಟಕ್ಕಾಗಿ ವಿದ್ಯಾರ್ಥಿಗಳಿಗೆ ಆಹಾರ (ಪಲಾವ್) ಮತ್ತು ಸಿಹಿ ಖಾದ್ಯವನ್ನು (ಗುಲಾಬ್ ಜಾಮೂನ್) ನೀಡಲಾಗಿತ್ತು, 109 ಜನರಲ್ಲಿ  63 ಹುಡುಗಿಯರು ಮತ್ತು 46 ಹುಡುಗರು ವಾಂತಿ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ ಎಂಟು ಮಕ್ಕಳು ಅಸ್ವಸ್ಥ

ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿಗತಿ ವಿಚಾರಿಸಿದರು. ಪೀಡಿತ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸಹ ವೈದ್ಯಕೀಯ ಸೌಲಭ್ಯದ ಹೊರಗೆ ಜಮಾಯಿಸಿದರು, ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿದೆ.

ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಠಾಕೂರ್ ಹೇಳಿದರು. ಪಲಾವ್ ಮತ್ತು ಗುಲಾಬ್ ಜಾಮೂನ್‌ ಎಲ್ಲಿಂದ ತಂದಿದ್ದಾರೆ ಎಂಬುದು ತಿಳಿದಿಲ್ಲ. ಘಟನೆಯ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us