ಸುಲಿಗೆ ಪ್ರಕರಣ: ಪರಮ್ ಬೀರ್ ಸಿಂಗ್ ತನಿಖೆಗಾಗಿ ವಿಶೇಷ ತಂಡ ರಚಿಸಿದ ಮುಂಬೈ ಪೊಲೀಸ್
Param Bir Singh ಉಪ ಪೊಲೀಸ್ ಆಯುಕ್ತ (ಡಿಸಿಪಿ) ಮಟ್ಟದ ಅಧಿಕಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಮುಂಬೈನ ಮಾಜಿ ಪೊಲೀಸ್ ಆಯುಕ್ತರು ತಮ್ಮ ವಿರುದ್ಧ ಸೋನು ಜಲನ್ ಅವರು ಥಾಣೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಕುರಿತು ತಮ್ಮ ಹೇಳಿಕೆಯನ್ನು ಸಲ್ಲಿಸಿದರು.
ಥಾಣೆ: : ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ (Param Bir Singh) ವಿರುದ್ಧ ದಾಖಲಾಗಿರುವ ಸುಲಿಗೆ ಪ್ರಕರಣದ ತನಿಖೆಗೆ ಥಾಣೆ ಪೊಲೀಸ್ ಕಮಿಷನರ್ ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಉಪ ಪೊಲೀಸ್ ಆಯುಕ್ತ (DCP) ಮಟ್ಟದ ಅಧಿಕಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಮುಂಬೈನ ಮಾಜಿ ಪೊಲೀಸ್ ಆಯುಕ್ತರು ತಮ್ಮ ವಿರುದ್ಧ ಸೋನು ಜಲನ್ ಅವರು ಥಾಣೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಕುರಿತು ತಮ್ಮ ಹೇಳಿಕೆಯನ್ನು ಸಲ್ಲಿಸಿದರು. ಸಿಂಗ್ ಅವರು ಎಸ್ಪ್ಲನೇಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅವರ ವಿರುದ್ಧ ನ್ಯಾಯಾಲಯದ ಘೋಷಣೆಯ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ಸಿಂಗ್ ಪರಾರಿ ಆಗಿದ್ದಾರೆ ಎಂದು ನ್ಯಾಯಾಲಯ ಘೋಷಿಸಿತ್ತು. ನ್ಯಾಯಾಲಯವು ನವೆಂಬರ್ 29 ರಂದು ವಿಚಾರಣೆ ನಡೆಸಲಿದೆ. ಮುಂಬೈ ನ್ಯಾಯಾಲಯದಿಂದ “ಪರಾರಿಯಾಗಿದ್ದಾರೆ” ಎಂದು ಘೋಷಿಸಲ್ಪಟ್ಟಿರುವ ಸಿಂಗ್, ಗೋರೆಗಾಂವ್ ಸುಲಿಗೆ ಪ್ರಕರಣದ ತನಿಖೆಗೆ ಸಹಕರಿಸಲು ಕಾಂದಿವಲಿಯಲ್ಲಿರುವ ಕ್ರೈಂ ಬ್ರಾಂಚ್ ಘಟಕ 11 ಕಚೇರಿಗೆ ಆಗಮಿಸಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅಂದಿನ ಗೃಹ ಸಚಿವ ಮತ್ತು ಎನ್‌ಸಿಪಿಯ ಹಿರಿಯ ನಾಯಕ ಅನಿಲ್ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರ ಮತ್ತು ಕೆಟ್ಟ ನಡತೆ ಕುರಿತು ಪತ್ರ ಬರೆದ ನಂತರ ಸಿಂಗ್ ವಿರುದ್ಧ ಆರು ಭ್ರಷ್ಟಾಚಾರ ಮತ್ತು ಸುಲಿಗೆ ಪ್ರಕರಣಗಳನ್ನು ದಾಖಲಿಸಲಾಗಿದೆ.
, 1988-ಬ್ಯಾಚ್ ಐಪಿಎಸ್ ಅಧಿಕಾರಿ ಆಗಿರುವ ಸಿಂಗ್ ಅವರನ್ನು ಮಾರ್ಚ್ 17 ರಂದು ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ತೆಗೆದುಹಾಕಲಾಯಿತು. ಅವರು ದೇಶಮುಖ್ ವಿರುದ್ಧ ಆರೋಪಗಳನ್ನು ಮಾಡಿದ ನಂತರ ಮಹಾರಾಷ್ಟ್ರ ರಾಜ್ಯ ಗೃಹರಕ್ಷಕ ದಳದ ಜನರಲ್ ಕಮಾಂಡರ್ ಮಾಡಲಾಯಿತು.
ಸುಲಿಗೆ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಗುರುವಾರ ನಗರದ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದರು. ಅಲ್ಲಿ ಅವರನ್ನು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೊಳಪಡಿಸಲಾಯಿತು. ಸಿಂಗ್ ಅವರು ಕ್ರೈಂ ಬ್ರಾಂಚ್(crime branch) ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ. “ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಅವರು ತನಿಖೆಯಲ್ಲಿ ಸಹಕರಿಸುವುದನ್ನು ಮುಂದುವರಿಸುತ್ತಾರೆ” ಎಂದು ಅವರ ವಕೀಲರು ಹೇಳಿದರು. ಪ್ರಸ್ತುತ ಮಹಾರಾಷ್ಟ್ರದ ಹೋಂಗಾರ್ಡ್ಸ್‌ನ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಸಿಂಗ್, ಸಂಜೆ 6.15ರ ಸುಮಾರಿಗೆ ಅಧಿಕೃತ ವಾಹನದಲ್ಲಿ ಅಪರಾಧ ವಿಭಾಗದ ಘಟಕ-11ರಿಂದ ಹೊರಹೋಗುತ್ತಿರುವುದು ಕಂಡುಬಂದಿದೆ.ನಗರ ನ್ಯಾಯಾಲಯದಿಂದ ಘೋಷಿತ ಅಪರಾಧಿ ಎಂದು ಘೋಷಿಸಲ್ಪಟ್ಟ ಐಪಿಎಸ್ ಅಧಿಕಾರಿ ವಿರುದ್ಧ ನಗರದ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸುಲಿಗೆ ಪ್ರಕರಣದಲ್ಲಿ ಹೇಳಿಕೆಯನ್ನು ದಾಖಲಿಸಲು ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದರು.
ಸದ್ಯಕ್ಕೆ ಸಿಂಗ್ ಅವರನ್ನು ಮತ್ತೆ ಕರೆದಿಲ್ಲ ಆದರೆ ಅಗತ್ಯವಿದ್ದಾಗ ಕರೆಯಲಾಗುವುದು ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬುಧವಾರ, ಸಿಂಗ್ ಚಂಡೀಗಢದಲ್ಲಿದ್ದಾರೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸುಲಿಗೆ ತನಿಖೆಗೆ ಶೀಘ್ರದಲ್ಲೇ ಸೇರಬಹುದು ಎಂದು ವರದಿಯಾಗಿದೆ.
ಸಿಂಗ್ ಅವರು ಮಹಾರಾಷ್ಟ್ರದಲ್ಲಿ ಸುಲಿಗೆ ಮತ್ತು ಭ್ರಷ್ಟಾಚಾರದ ಐದು ಪ್ರತ್ಯೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಮಾಜಿ ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಹೆಸರೂ ಇದೆ.
ತಾನು “ದೇಶದಲ್ಲಿಯೇ ಇದ್ದೇನೆ” ಎಂದು ಅವರು ಈ ಹಿಂದೆ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು. ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಮಹಾರಾಷ್ಟ್ರ ಪೊಲೀಸರನ್ನು ಹೊರತುಪಡಿಸಿ ಯಾವುದೇ ಸಂಸ್ಥೆಯಿಂದ ನಡೆಯುವ ತನಿಖೆಗೆ ಸಹಕರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದ ಪರಮ್ ಬೀರ್ ಸಿಂಗ್; 6 ಗಂಟೆಗಳ ಕಾಲ ನಡೆದ ವಿಚಾರಣೆ