ಮಹಾರಾಷ್ಟ್ರದಲ್ಲಿ 45 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ; ಜಲಗಾಂವ್ನಲ್ಲೇ ಜಾಸ್ತಿ ಇದೆ ಅಪಾಯಕಾರಿ ವೈರಸ್
Delta Plus: ಜಿನೋಮ್ ಸಿಕ್ವೆನ್ಸಿಂಗ್ಗಾಗಿ ಕಳಿಸಲಾಗಿದ್ದ ಮಾದರಿಗಳಲ್ಲಿ ಶೇ.80ರಷ್ಟರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದೆ. ಒಟ್ಟೂ ಪತ್ತೆಯಾದ 45 ಪ್ರಕರಣಗಳಲ್ಲಿ ಜಲಗಾಂವ್ನಲ್ಲಿ ಅತ್ಯಂತ ಹೆಚ್ಚು ಅಂದರೆ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಹಾರಾಷ್ಟ್ರ (Maharashtra)ದಲ್ಲಿ ಜಿನೋಮ್ ಸಿಕ್ವೆನ್ಸಿಂಗ್ ನಡೆಸಿದಾಗಿ ಒಟ್ಟು 45 ಡೆಲ್ಟಾ ಪ್ಲಸ್ (Delta Plus) ರೂಪಾಂತರ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಹಾಗೇ, ಅದರಲ್ಲಿ ಒಬ್ಬ ಡೆಲ್ಟಾ ಪ್ಲಸ್ (Delta) ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದೂ ಹೇಳಿದ್ದಾರೆ. ಜಲ್ಗನ್ನಲ್ಲಿ ಅತಿ ಹೆಚ್ಚು ಅಂದರೆ 13 ಡೆಲ್ಟಾ ಪ್ಲಸ್ ಸೋಂಕಿತರು ಪತ್ತೆಯಾಗಿದ್ದು ಅದು ಬಿಟ್ಟರೆ ರತ್ನಗಿರಿಯಲ್ಲೇ ಜಾಸ್ತಿ (11) ಜನರಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಜಿನೋಮ್ ಸಿಕ್ವೆನ್ಸಿಂಗ್ಗಾಗಿ ಕಳಿಸಲಾಗಿದ್ದ ಮಾದರಿಗಳಲ್ಲಿ ಶೇ.80ರಷ್ಟರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದೆ. ಒಟ್ಟೂ ಪತ್ತೆಯಾದ 45 ಪ್ರಕರಣಗಳಲ್ಲಿ ಜಲಗಾಂವ್ನಲ್ಲಿ 13, ರತ್ನಗಿರಿಯಲ್ಲಿ 11, ಮುಂಬೈ 6, ಥಾಣೆ 5 ಹಾಗೂ ಪುಣೆಯಲ್ಲಿ ಮೂವರಲ್ಲಿ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ. ಹಾಗೇ, ಫಾಲ್ಗರ್, ಸಿಂಧುದುರ್ಗ್, ಸಾಂಘ್ಲಿ, ನಂದುರ್ಬಾರ್, ಔರಂಗಾಬಾದ್, ಕೊಲ್ಲಾಪುರ ಮತ್ತು ಬೀಡ್ಗಳಲ್ಲಿ ತಲಾ ಒಬ್ಬೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ತ್ರಿಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಹಿಂದೆ ಅಮಿತ್ ಶಾ ಕೈವಾಡ; ಸಿಎಂ ಮಮತಾ ಬ್ಯಾನರ್ಜಿ ಆರೋಪ
ಮಂಜು ಜತೆ ಫ್ರೆಂಡ್ಶಿಪ್ ಹಾಳಾಗೋಕೆ ಚಕ್ರವರ್ತಿ ಕಾರಣ; ಪ್ರಶಾಂತ್ ಸಂಬರಗಿ ಗಂಭೀರ ಆರೋಪ
Published On - 9:10 am, Mon, 9 August 21