Prayagraj: ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ, 5 ಜನ ಸ್ಥಳದಲ್ಲೇ ಸಾವು
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ದ ಪ್ಲಾಜಾನಲ್ಲಿರುವ ಹ್ಯಾಂಡಿಯಾ ಟೋಲ್ ಬಳಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 5 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರಯಾಗ್‌ರಾಜ್: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸೇರಿ ಒಟ್ಟು ಐದು ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ದ ಪ್ಲಾಜಾನಲ್ಲಿರುವ ಹ್ಯಾಂಡಿಯಾ ಟೋಲ್ ಬಳಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ತಮ್ಮ ತವೇರಾ ಕಾರಿನಲ್ಲಿ ವಿಂಧ್ಯಾಚಲ ದೇವಸ್ಥಾನಕ್ಕೆ ಹೋಗುತ್ತಿದ್ದರು.
ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಹಂಡಿಯಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM), ಸರ್ಕಲ್ ಆಫೀಸರ್ (CO) ಮತ್ತು ಸ್ಟೇಷನ್ ಹೌಸ್ ಆಫೀಸರ್ (SHO) ಅವರು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಎಸ್‌ಡಿಎಂ ಹ್ಯಾಂಡಿಯಾ ಅವರ ಪ್ರಕಾರ, ಬೆಳಿಗ್ಗೆ 6.40 ರ ಹೊತ್ತಿಗೆ, ವಾರಣಾಸಿ ಹೆದ್ದಾರಿಯ ಹ್ಯಾಂಡಿಯಾ ಟೋಲ್ ಪ್ಲಾಜಾ ಬಳಿ ಹತ್ತು ಜನರಿದ್ದ ಟವೇರಾ ಕಾರು ಅಪಘಾತಕ್ಕೀಡಾಯಿತು. ಇವರು ಶಿವಗಢ ಪೊಲೀಸ್ ಠಾಣೆ ವ್ಯಾಪ್ತಿಯ ಸರೈ ಲಾಲ್ ಗ್ರಾಮದಿಂದ ವಿಂಧ್ಯಾಚಲಕ್ಕೆ ಹೋಗುತ್ತಿದ್ದರು. ಕಾರು ಚಾಲಕನಿಗೆ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಮೃತರಲ್ಲಿ 4 ಮಹಿಳೆಯರು ಮತ್ತು ಒಂದು ವರ್ಷದ ಮಗು ಎಂದು ಹೇಳಲಾಗಿದೆ.
Prayagraj, UP| 5 dead & 5 injured after their car heading towards Vindhyachal collided with electric pole on highway near Handia. Injured sent to hospital & post-mortem of dead being done. Police & admn extending all kinds of help to affected families: A Agrawal, Addl SP Gangapar pic.twitter.com/WM7izDtEk9
— ANI UP/Uttarakhand (@ANINewsUP) October 27, 2022
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯವನ್ನು ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
#UPCM @myogiadityanath ने जनपद प्रयागराज में सड़क हादसे में हुई जनहानि पर गहरा दुःख प्रकट किया है।
मुख्यमंत्री जी ने दिवंगतों की आत्मा की शांति की कामना करते हुए शोक संतप्त परिजनों के प्रति संवेदना व्यक्त की है।
— CM Office, GoUP (@CMOfficeUP) October 27, 2022
ಮೃತರಲ್ಲಿ ರೇಖಾ (45), ರೇಖಾ (32), ಕೃಷ್ಣಾದೇವಿ (70), ಕವಿತಾ (36) ಮತ್ತು ಒಂದು ವರ್ಷದ ಕುಮಾರಿ ಓಜಸ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಉಮೇಶ್, ಮತ್ತು ಅವರ ಪತ್ನಿ ಪ್ರಿಯಾ ಹಾಗೂ ಅವರ ಪುತ್ರಿ ಗೋಟು (12), 26 ವರ್ಷದ ರಿಷಬ್ ಮತ್ತು ಚಾಲಕ ಇರ್ಷಾದ್ ಎಂದು ಗುರುತಿಸಲಾಗಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published On - 12:19 pm, Thu, 27 October 22