ಭಾರತದಿಂದ ಅಫ್ಘಾನಿಸ್ತಾನಕ್ಕೆ ಸಾಗಲಿದೆ ಗೋಧಿ; ಮಂಗಳವಾರ ವಾಘಾ ಮೂಲಕ ಸಾಗಣೆ

ವಾರಗಳ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನದ ಕಡೆಯವರು ಪಾಕಿಸ್ತಾನದ ಭೂ ಮಾರ್ಗಗಳ ಮೂಲಕ ಗೋಧಿಯನ್ನು ಸಾಗಿಸುವ ವಿಧಾನಗಳನ್ನು ಅಂತಿಮಗೊಳಿಸಿದ ನಂತರ ಸಾಗಣೆಯನ್ನು ಕಳುಹಿಸಲಾಗುತ್ತಿದೆ.

ಭಾರತದಿಂದ ಅಫ್ಘಾನಿಸ್ತಾನಕ್ಕೆ ಸಾಗಲಿದೆ ಗೋಧಿ; ಮಂಗಳವಾರ ವಾಘಾ ಮೂಲಕ ಸಾಗಣೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 21, 2022 | 8:26 PM

ದೆಹಲಿ: ಅಫ್ಘಾನಿಸ್ತಾನದ (Afghanistan)ಜನರಿಗೆ ಭಾರತದಿಂದ 10,000 ಟನ್ ಗೋಧಿಯ (wheat) ಮೊದಲ ಸಾಗಣೆಯನ್ನು ಮಂಗಳವಾರ ಅಟ್ಟಾರಿ-ವಾಘಾ (Wagah) ಭೂ ಗಡಿ ದಾಟುವ ಮೂಲಕ ರವಾನಿಸಲಾಗುವುದು. ಮುಂಬರುವ ವಾರಗಳಲ್ಲಿ ಹೆಚ್ಚಿನ ಆಹಾರ ಸರಬರಾಜು ಮತ್ತು ಇತರ ಮಾನವೀಯ ನೆರವನ್ನು ಭಾರತ ನೀಡುವ ನಿರೀಕ್ಷೆ ಇದೆ. ವಾರಗಳ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನದ ಕಡೆಯವರು ಪಾಕಿಸ್ತಾನದ ಭೂ ಮಾರ್ಗಗಳ ಮೂಲಕ ಗೋಧಿಯನ್ನು ಸಾಗಿಸುವ ವಿಧಾನಗಳನ್ನು ಅಂತಿಮಗೊಳಿಸಿದ ನಂತರ ಸಾಗಣೆಯನ್ನು ಕಳುಹಿಸಲಾಗುತ್ತಿದೆ. ಭಾರತ ಮೊದಲು ಅಕ್ಟೋಬರ್ 7 ರಂದು ಅಟ್ಟಾರಿ-ವಾಘಾ ಕ್ರಾಸಿಂಗ್ ಮೂಲಕ 50,000 ಟನ್ ಗೋಧಿಯನ್ನು ಕಳುಹಿಸಲು ಪ್ರಸ್ತಾಪಿಸಿತು. ನವೆಂಬರ್ 24 ರಂದು ಪಾಕಿಸ್ತಾನದಿಂದ ಆರಂಭಿಕ ಪ್ರತಿಕ್ರಿಯೆಯನ್ನು ಪಡೆಯಿತು. ಅಂದಿನಿಂದ, ಉಭಯ ದೇಶಗಳು ವಿಧಾನಗಳ ಕುರಿತು ಮಾತುಕತೆಯಲ್ಲಿ ತೊಡಗಿವೆ. ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಮತ್ತು ಅಫ್ಘಾನಿಸ್ತಾನದಲ್ಲಿ ಗೋಧಿಯನ್ನು ವಿತರಿಸುವ ಜವಾಬ್ದಾರಿಯನ್ನು ಹೊಂದಿರುವ ವಿಶ್ವ ಆಹಾರ ಕಾರ್ಯಕ್ರಮದ (WFP) ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮೊದಲ ಸಾಗಣೆಯನ್ನು ಅಟ್ಟಾರಿ-ವಾಘಾದಲ್ಲಿ ಔಪಚಾರಿಕವಾಗಿ ಚಾಲನೆ ಮಾಡಲಾಗುವುದು. “ಈ ಸಮಯದಲ್ಲಿ ಭಾರತ ಸರ್ಕಾರದ ಸಹಾಯವು ಹೆಚ್ಚು ಮೆಚ್ಚುಗೆ ಪಡೆದಿದೆ. ಅಫ್ಘಾನ್ ಜನರಿಗೆ ಆಹಾರವು ಅತ್ಯಂತ ಅಗತ್ಯವಾದ ವಸ್ತುವಾಗಿದೆ. ವಿಶ್ವ ಆಹಾರ ಕಾರ್ಯಕ್ರಮ ಈಗಾಗಲೇ ಸುಮಾರು ಏಳು ಮಿಲಿಯನ್ ಆಫ್ಘನ್ ಜನರಿಗೆ ಸಹಾಯ ಮಾಡಿದೆ ಮತ್ತು 22 ಮಿಲಿಯನ್ ಜನರು – ಅಥವಾ ಅರ್ಧದಷ್ಟು ಆಫ್ಘನ್ ಜನಸಂಖ್ಯೆಗೆ ಆಹಾರದ ಸಹಾಯದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ” ಎಂದು ವಿಶ್ವ ಆಹಾರ ಕಾರ್ಯಕ್ರಮದ ಭಾರತದ ನಿರ್ದೇಶಕ ಬಿಶೋ ಪರಾಜುಲಿ ಹೇಳಿದರು.

ಭಾರತ ಸರ್ಕಾರವು ಫೆಬ್ರವರಿ 12 ರಂದು ಅಫ್ಘಾನಿಸ್ತಾನದೊಳಗೆ ಆಹಾರ ಧಾನ್ಯಗಳ ವಿತರಣೆಗಾಗಿ ವಿಶ್ವ ಆಹಾರ ಕಾರ್ಯಕ್ರಮದೊಂದಿದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿತು. 10,000 ಟನ್‌ಗಳ ಮೊದಲ ಸಾಗಣೆಯನ್ನು ಒಳಗೊಂಡಿರುವ ಎಂಒಯು, ಭಾರತ ಸರ್ಕಾರ ಮತ್ತು ಡಬ್ಲ್ಯುಎಫ್‌ಪಿ ಮತ್ತು ಇತರ ಮೂಲಭೂತ ಷರತ್ತುಗಳ ಬದ್ಧತೆಗಳು ಮತ್ತು ಜವಾಬ್ದಾರಿಗಳನ್ನು ವಿವರಿಸುತ್ತದೆ ಮತ್ತು ಗೋಧಿಯ ವಿತರಣೆಗೆ ಭಾರತದ ಕಡೆಯವರು ಪಾವತಿಸುತ್ತಿರುವ ಕಾರಣ ಇದು ಅಗತ್ಯವಾಗಿತ್ತು.

ವಿಶ್ವ ಆಹಾರ ಕಾರ್ಯಕ್ರಮವು ತಿಳಿವಳಿಕೆ ಒಪ್ಪಂದವನ್ನು “ಹೆಗ್ಗುರುತು ಒಪ್ಪಂದ” ಎಂದು ವಿವರಿಸಿದೆ ಮತ್ತು “ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿರುವ ಅಫ್ಘಾನಿಸ್ತಾನದ ಜನರಿಗೆ ಬೆಂಬಲವಾಗಿ ಗೋಧಿಯ ಉದಾರ ಕೊಡುಗೆಗಾಗಿ” ಭಾರತೀಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿತು.

ಅಪ್ಘಾನ್ ಟ್ರಕ್‌ಗಳು ಗೋಧಿಯನ್ನು ಡಬ್ಲ್ಯು ಎಫ್​​ಪಿ ಗೋದಾಮುಗಳಿಗೆ ತಲುಪಿಸಿದ ನಂತರ, ವಿಶ್ವ ಸಂಸ್ಥೆಯು ಆಹಾರ ಧಾನ್ಯಗಳನ್ನು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. “ನಾವು 176 ಟ್ರಕ್‌ಗಳು ಮತ್ತು 600 ಜನರ ಫ್ಲೀಟ್ ಅನ್ನು ಹೊಂದಿದ್ದೇವೆ ಮತ್ತು ನಾವು ಅಫ್ಘಾನ್ ನಾಗರಿಕ ಸಮಾಜದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ಆಹಾರದ ಅಗತ್ಯವಿರುವ ಜನರು ಅದನ್ನು ಸ್ವೀಕರಿಸುತ್ತಾರೆ ಎಂದು ನಾವು ಖಚಿತಪಡಿಸುತ್ತೇವೆ ”ಎಂದು ಪರಾಜುಲಿ ಹೇಳಿದರು.

ಅಗತ್ಯವಿರುವಂತೆ ಭಾರತ ಸರ್ಕಾರದೊಂದಿಗೆ ಸೇವೆ ಸಲ್ಲಿಸಲು ಮತ್ತು ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಭಾರತಕ್ಕೆ ಎಷ್ಟು ಸಾಧ್ಯವೋ ಅಷ್ಟು ಮಾಡಲು ನಾವು ಮನವಿ ಮಾಡುತ್ತೇವೆ. ಶೀತ ಹವಾಮಾನ, ಜನರ ಸ್ಥಳಾಂತರ ಮತ್ತು ಆರ್ಥಿಕತೆಯ ನಾಶವು ಅಫ್ಘಾನಿಸ್ತಾನದ ಮೇಲೆ ಭಾರಿ ಪರಿಣಾಮ ಬೀರಿದೆ. 10 ವರ್ಷ ವಯಸ್ಸಿನ ಮಕ್ಕಳು ಸ್ವಲ್ಪ ಹಣ ಸಂಪಾದಿಸಲು ಶೀತ ಚಳಿಗಾಲದಲ್ಲಿ ಬೂಟು ಪಾಲಿಶ್ ಮಾಡುವುದನ್ನು ನೋಡುವುದು ಹೃದಯ ಒಡೆದಂತಾಗುತ್ತದೆ ಎಂದು ಪಾರಾಜುಲಿ ಹೇಳಿದ್ದಾರೆ .

ಭಾರತವು ಶನಿವಾರ ಅಫ್ಘಾನಿಸ್ತಾನಕ್ಕೆ 2.5 ಟನ್ ವೈದ್ಯಕೀಯ ನೆರವು ಮತ್ತು ಚಳಿಗಾಲದ ಉಡುಪುಗಳನ್ನು ಕಳುಹಿಸಿದ ಮೂರು ದಿನಗಳ ನಂತರ ಗೋಧಿಯನ್ನು ರವಾನಿಸಲಾಗುತ್ತದೆ. ಅದು ವರ್ಷದ ಆರಂಭದಿಂದ ಭಾರತ ಕಳುಹಿಸಿದ ಮಾನವೀಯ ನೆರವಿನ ಐದನೇ ರವಾನೆಯಾಗಿದೆ. ಭಾರತವು ಇದುವರೆಗೆ 6.6 ಟನ್ ಜೀವರಕ್ಷಕ ಔಷಧಗಳನ್ನು ಮತ್ತು 500,000 ಡೋಸ್ ಕೊವಿಡ್ -19 ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆ ಪೂರೈಸಿದೆ ಮತ್ತು ಹೆಚ್ಚಿನ ಸಹಾಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇರಾನ್ ಮೂಲಕ ವಿಮಾನಗಳಲ್ಲಿ ಕಳುಹಿಸಲಾಗಿದೆ.

ಇದನ್ನೂ ಓದಿ: ಎಲ್ಲಾ ಧರ್ಮದ ಜನರು ಶಾಲಾ ಸಮವಸ್ತ್ರವನ್ನು ಒಪ್ಪಿಕೊಳ್ಳಬೇಕು: ಗೃಹ ಸಚಿವ ಅಮಿತ್ ಶಾ

Published On - 8:25 pm, Mon, 21 February 22

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ