ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು ಇಂದಿನಿಂದ; ನೀವೂ ಭಾಗವಹಿಸಬೇಕೆ? ಮಾಹಿತಿ ಇಲ್ಲಿದೆ

Narendra Modi: ಭಾರತ ಸಂಸ್ಕೃತಿ ಸಚಿವಾಲಯವು ಇಂದಿನಿಂದ ಪ್ರಧಾನಿ ನರೇಂದ್ರ ಮೋದಿಗೆ ಲಭಿಸಿದ ಉಡುಗೊರೆ ಹಾಗೂ ಸ್ಮರಣಿಕೆಗಳ ಹರಾಜನ್ನು ನಡೆಸಲಿದೆ.

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು ಇಂದಿನಿಂದ; ನೀವೂ ಭಾಗವಹಿಸಬೇಕೆ? ಮಾಹಿತಿ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ, ನೀರಜ್ ಚೋಪ್ರಾ
Follow us
TV9 Web
| Updated By: shivaprasad.hs

Updated on: Sep 17, 2021 | 3:50 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಇಂದು 71 ವರ್ಷ ತುಂಬಿದೆ. ಈ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಇಂದಿನಿಂದ (ಸೆಪ್ಟೆಂಬರ್ 17) ಪ್ರಧಾನ ಮಂತ್ರಿಗಳು ಸ್ವೀಕರಿಸಿದ ಉಡುಗೊರೆ ಮತ್ತು ಸ್ಮರಣಿಕೆಗಳ ಇ-ಹರಾಜನ್ನು ಆಯೋಜಿಸಲಿದೆ. ಈ ಹರಾಜಿನಿಂದ ಪಡೆದ ಮೊತ್ತವನ್ನು ನಮಾಮಿ ಗಂಗೆ ಮಿಷನ್‌ಗೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಉಡುಗೊರೆ ಮತ್ತು ಸ್ಮರಣಿಕೆಗಳಲ್ಲಿ ಒಲಂಪಿಕ್ಸ್ ಪದಕ ವಿಜೇತರು ನೀಡಿದ ಉಪಕರಣಗಳು, ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ, ಚಾರ್​ಧಾಮ್, ರುದ್ರಾಕ್ಷ ಸಮಾವೇಶ ಕೇಂದ್ರದ ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರಗಳಿದ್ದು, ಇವುಗಳನ್ನು ಹರಾಜಿನಲ್ಲಿ ಕೊಳ್ಳಬಹುದಾಗಿದೆ.

ಇ-ಹರಾಜಿನಲ್ಲಿ ಭಾಗವಹಿಸುವುದು ಹೇಗೆ? ಈ ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳು, ಸೆಪ್ಟೆಂಬರ್ 17 ರಿಂದ 2021 ರ ಅಕ್ಟೋಬರ್ 7 ರವರೆಗೆ ನಡೆಯುವ ಇ-ಹರಾಜಿನಲ್ಲಿ https://pmmementos.gov.in ವೆಬ್‌ಸೈಟ್ ಮೂಲಕ  ಭಾಗವಹಿಸಬಹುದು. ಇ-ಹರಾಜಿನಿಂದ ಪಡೆದ ಮೊತ್ತವನ್ನು ಗಂಗಾ ಸಂರಕ್ಷಣೆ ಮತ್ತು ನಮಾಮಿ ಗಂಗೆ ಮಿಷನ್‌ಗೆ ನೀಡಲಾಗುವುದು.

ಇಂದಿನ ಹರಾಜಿನಲ್ಲಿ ಯಾವ್ಯಾವ ವಸ್ತುಗಳಿವೆ? ಇಂದಿನ ಇ-ಹರಾಜಿನಲ್ಲಿ ಒಲಿಂಪಿಕ್ ಪದಕ ವಿಜೇತ ಆಟಗಾರರ ಬ್ಯಾಡ್ಮಿಂಟನ್, ಹಾಕಿ ಮತ್ತು ಜಾವೆಲಿನ್ ಅನ್ನು ಕೊಳ್ಳಲು ಅವಕಾಶವಿದೆ. ಈ ಪಟ್ಟಿಯಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ ಅವರ ಜಾವೆಲಿನ್ ಕೂಡ ಇದೆ. ರಾಮ ಮಂದಿರದ ಪ್ರತಿಕೃತಿ, ಚಾರ್​ಧಾಮ್​ನ ಕಲಾಕೃತಿ, ರುದ್ರಾಕ್ಷ್ ಕನ್ವೆನ್ಶನ್ ಸೆಂಟರ್ ಸೇರಿದಂತೆ ಹಲವು ಮಾದರಿಗಳು ಮತ್ತು ಶಿಲ್ಪಗಳನ್ನು ಸಹ ಹರಾಜು ಮಾಡಲಾಗುತ್ತದೆ. ಪ್ರಧಾನ ಮಂತ್ರಿಯವರ ಅಂಗವಸ್ತ್ರಗಳು, ಶಾಲುಗಳು ಮತ್ತು ವರ್ಣಚಿತ್ರಗಳನ್ನು ಇ-ಹರಾಜು ಮೂಲಕ ಖರೀದಿಸಬಹುದು.

ನೀವೂ ಖರೀದಿಸುವ ಆಸಕ್ತಿ ಹೊಂದಿದ್ದೀರಾ? ಹಾಗಾದರೆ ಹೀಗೆ ಮಾಡಿ: ನೀವು https://pmmementos.gov.in ಅನ್ನು ಕ್ಲಿಕ್ ಮಾಡಿದ ತಕ್ಷಣ ಹರಾಜಿನಲ್ಲಿ ಲಭ್ಯವಿರುವ ವಸ್ತುಗಳು ಕಾಣುತ್ತವೆ. ಇದರ ನಂತರ ನಿಮ್ಮ ಪರದೆಯ ಎಡಬದಿಯಲ್ಲಿ ನೀವು ಕಾಣುವ ಒಂದು ಬಾಕ್ಸ್​ನಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ನೀವು ಎಷ್ಟು ಬೆಲೆಯನ್ನು ನೀಡಿ ಖರೀದಿಸಲು ಬಯಸುತ್ತೀರಿ ಎಂದು ನಿಮ್ಮ ಬಜೆಟ್ ಅನ್ನು ಗುರುತಿಸಬಹುದು. ಇದರ ನಂತರ ನೀವು ಯಾವ ಮಾದರಿಯ ವಸ್ತುಗಳನ್ನು ಖರೀದಿಸುತ್ತೀರಿ ಎಂದು ಆಯ್ಕೆ ಮಾಡಬಹುದು. ನೀವು ಚಿತ್ರಕಲೆ ಅಥವಾ ಪೋಸ್ಟರ್ ಖರೀದಿಸಲು ಬಯಸಿದರೆ, ಅದನ್ನು ಅದಕ್ಕೆ ಸಂಬಂಧಪಟ್ಟ ವರ್ಗದಲ್ಲಿ ಗುರುತಿಸಿ. ಅದರ ನಂತರ ನಿಮಗೆ ಹರಾಜಿನ ಮಾಹಿತಿ ಲಭ್ಯವಾಗುತ್ತದೆ.

ಪ್ರಧಾನ ಮಂತ್ರಿಗಳು ಸ್ವೀಕರಿಸಿದ ಉಡುಗೊರೆಯನ್ನು ಹರಾಜು ಹಾಕುವುದು ಇದೇ ಮೊದಲೇನಲ್ಲ. ಈ ಮೊದಲು ಕೂಡ ಹರಾಜು ಹಾಕಲಾಗಿತ್ತು. 2019ರಲ್ಲಿ 2772 ಉಡುಗೊರೆಗಳನ್ನು ಹರಾಜು ಹಾಕಿ, 15.13 ಕೋಟಿ ರೂಗಳನ್ನು ಸಂಗ್ರಹಿಸಲಾಗಿತ್ತು. ಅದನ್ನು  ನಮಾಮಿ ಗಂಗೆ ಮಿಷನ್‌ಗೆ ನೀಡಲಾಗಿತ್ತು.

ಇದನ್ನೂ ಓದಿ:

ಪ್ರಧಾನಿ ನರೇಂದ್ರ ಮೋದಿ ಕುರಿತು ಸಿದ್ಧಗೊಂಡ ಈ ಸಿನಿಮಾ, ವೆಬ್​ ಸೀರಿಸ್​ಗಳನ್ನು ನೋಡಿದ್ದೀರಾ?

PM Modi: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಅವರ ಕುರಿತ ಕೆಲವು ಕುತೂಹಲಕರ ಸಂಗತಿಗಳು

PM Modi Birthday, Karnataka LIVE News: 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ; ಸಂಭ್ರಮಾಚರಣೆ ಹೇಗಿದೆ?

(The gifts and mementos of Prime Minister will be auctioned From today the money will goes to Namami Gange Mission)

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ