AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಅವರ ಕುರಿತ ಕೆಲವು ಕುತೂಹಲಕರ ಸಂಗತಿಗಳು

PM Narendra Modi Birthday: ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಗುಟ್ಟು ಕಾಪಾಡಿಕೊಳ್ಳುವುದರಲ್ಲಿ ಪರಿಣಿತರು ಎಂಬುದು ನಿಮಗೆ ತಿಳಿದಿದೆಯೇ!?

PM Modi: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಅವರ ಕುರಿತ ಕೆಲವು ಕುತೂಹಲಕರ ಸಂಗತಿಗಳು
ಪ್ರಧಾನಿ ಮೋದಿ ಅವರ ಹಳೆಯ ಚಿತ್ರಗಳು
TV9 Web
| Updated By: guruganesh bhat|

Updated on:Sep 16, 2021 | 10:15 PM

Share

ಮೋದಿ ಮೋದಿ ಮೋದಿ.. 2014ರ ತರುವಾಯ ದೇಶದ ಮೂಲೆಮೂಲೆಗೂ ತಲುಪಿದ ಹೆಸರು. ದಕ್ಷಿಣ ಭಾರತದ ರಾಜ್ಯ ಕರ್ನಾಟಕದಲ್ಲಿ ಸಹ ಸ್ಥಳೀಯ ಬಿಜೆಪಿ ನಾಯಕರನ್ನೂ ಮರೆತು ಗುಜರಾತ್ ಮೂಲದ ಮುಖಂಡ ನರೇಂದ್ರ ಮೋದಿ (PM Narendra Modi) ಅವರನ್ನೇ  ಪಠಿಸತೊಡಗಿದ್ದರು. ಯಾವ ಬಿಜೆಪಿ ಕಾರ್ಯಕರ್ತರನ್ನು ಮಾತನಾಡಿಸಿದರೂ ನಮಗೆ ಮೋದಿಯಂತಹ ನಾಯಕ ಬೇಕು ಎನ್ನುತ್ತಿದ್ದರು ಆಗ. ಆ ಮಾತಿನ ಹಿಂದೆ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರಬೇಕು ಎಂಬ ಅದಮ್ಯ ಇಚ್ಛೆಯಿರುತ್ತಿತ್ತು. ನಂತರ ಆ ಹಂಬಲ ಒಂದಲ್ಲ, ಎರಡು ಬಾರಿ ಈಡೇರಿತು ಎಂಬುದು ಇತಿಹಾಸ ಮತ್ತು ವರ್ತಮಾನ.

ಸ್ವಾತಂತ್ರ್ಯಾ ನಂತರ ಹುಟ್ಟಿದ ಮೊದಲ ಪ್ರಧಾನಿ ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹೊಂದಿರುವ ಭಾರತದಲ್ಲಿ ಈವರೆಗೆ ಹಲವು ಪ್ರಧಾನಿಗಳು ಆಡಳಿತ ನಡೆಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರನ್ನು ಬಿಟ್ಟು ಮಿಕ್ಕ ಎಲ್ಲ ಪ್ರಧಾನಿಗಳೂ 1947ಕ್ಕಿಂತ ಮುನ್ನ ಹುಟ್ಟಿದವರು. ಅಂದರೆ ಬ್ರಿಟಿಷ್ ಆಳ್ವಿಕೆಯಲ್ಲಿ ಹುಟ್ಟಿದವರು. ಆದರೆ ನರೇಂದ್ರ ಮೋದಿ ಅವರೊಬ್ಬರೇ ಸ್ವಾತಂತ್ರ್ಯಾನಂತರ ಹುಟ್ಟಿದ ಏಕೈಕ ಪ್ರಧಾನಿ.

ಪ್ರಧಾನಿ ಮೋದಿಗೆ ಬಂದಿದೆ ಇಗ್ ನೊಬೆಲ್ ಅರೇ! ಇದೇನಿದು ಅಂದಿರಾ? ವಿಶ್ವವಿಖ್ಯಾತ ನೊಬೆಲ್ ಪುರಸ್ಕಾರಕ್ಕೂ ಇಗ್ ನೊಬೆಲ್ಗೂ ನೇರಾನೇರ ಯಾವುದೇ ಸಂಬಂಧವಿಲ್ಲ. ಆದರೆ ನೊಬೆಲ್ಗೆ ವಿಡಂಬನೆಯನ್ನಾಗಿ ಇಗ್ ನೊಬೆಲ್ ಎಂಬ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಕೊರೊನಾ ಬಿಕ್ಕಟ್ಟಿನಲ್ಲಿ ಪ್ರಧಾನಿ ಮೋದಿ ಜನರಲ್ಲಿ ಅರಿವು ಮೂಡಿಸಿದ್ದಾರೆ ಮತ್ತು ಪರಿಣಿತರು, ವೈದ್ಯರಿಗಿಂತಲೂ ರಾಜಕಾರಣಿಗಳು ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಕ್ಕೆ ವಿಡಂಬನಾತ್ಮಕವಾಗಿ ಇಗ್ ನೊಬೆಲ್ ಎಂಬ ಪ್ರಶಸ್ತಿಯನ್ನು ನರೇಂದ್ರ ಮೋದಿ ಅವರಿಗೆ ನೀಡಲಾಗಿದೆ.

ಎಂಟೇ ಎಂಟು ವರ್ಷದ ಬಾಲಕ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದ್ದ. ಆ ದಿನ ನರೇಂದ್ರ ಎಂಬ ಪುಟ್ಟ ಬಾಲಕನ ದಿನವನ್ನು ಬದಲಾಯಿಸಿದ ದಿನ ಎಂದು ನಿಶ್ಚಿತವಾಗಿ ಹೇಳಬಹುದು.

ನರೇಂದ್ರ ಮೋದಿ ಸಹಜವಾಗಿ ಓರ್ವ ರಾಜಕಾರಣಿ. ಆದರೆ ಅವರೊಳಗೋರ್ವ ಲೇಖಕನೂ ಇದ್ದಾರೆ ಎಂಬುದು ನಿಮಗೆ ತಿಳಿದಿರಲಾರದು. 2001ರಲ್ಲಿ ಪ್ರಕಟವಾದ ಇನಾಮ್ದಾರ್ ಎಂಬ ಪುಸ್ತಕವೊಂದಕ್ಕೆ ಅವರು ಸಹ ಲೇಖಕರೂ ಹೌದು.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಗುಟ್ಟು ಕಾಪಾಡಿಕೊಳ್ಳುವುದರಲ್ಲಿ ಪರಿಣಿತರು ಎಂಬುದು ನಿಮಗೆ ತಿಳಿದಿದೆಯೇ!? ತಮಗೆ ಬಾಲ್ಯದಲ್ಲೇ ಮದುವೆಯಾಗಿತ್ತು ಎಂಬುದು ಅವರು ಪ್ರಧಾನಿಯಾಗುವವರೆಗೂ ಬಹಿರಂಗಗೊಂಡಿರಲೇ ಇಲ್ಲ! ಅದುವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ, ಜತೆಗೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸಿದ್ದರೂ ಸಹ ಮೋದಿ ಅವಿವಾಹಿತ ಎಂದೇ ಬಿಂಬಿತವಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರಂತೆ ನರೇಂದ್ರ ಮೋದಿಯೂ ಕಟ್ಟಾ ಬ್ರಹ್ಮಚಾರಿ ಎಂದೇ ಜನರು ನಂಬಿದ್ದರು.

ಮ್ಯಾನ್ ವರ್ಸಸ್ ವೈಲ್ಡ್ ಜಗತ್ತಿನ ಗಮನ ಸೆಳೆದ ಅತ್ಯಂತ ರೋಚಕ ಕಾರ್ಯಕ್ರಮ. ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗುವ ಇದು ತನ್ನದೇ ಅಭಿಮಾನಿ ಬಳಗವನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಗ್ಗಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಅವರ ನಂತರ ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರೆಂದರೆ ಅಭಿಮಾನಿ, ಅನುಯಾಯಿ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ್ದ ಆಶ್ರಮಗಳಾದ ಬೇಲೂರು ಮಠವೂ ಸೇರಿ ಕೆಲವು ಹಲವು ಆಶ್ರಮಗಳಿಗೆ ಮೋದಿ ಭೇಟಿ ನೀಡಿದ್ದಾರೆ.

ಶಾಲಾ ದಿನಗಳಿಂದಲೂ ಅವರು ಸಂಘಟನೆಯತ್ತ ಹೆಚ್ಚು ಒತ್ತು ನೀಡುವ ಮನೋಭಾವ ಹೊಂದಿದ್ದರು. ತಮ್ಮ 13-14ನೇ ವಯಸ್ಸಿನಲ್ಲಿ ಶಾಲೆಯ ಗೋಡೆ ರಿಪೇರಿ ಮಾಡಲು ಧನ ಸಂಗ್ರಹಣೆಗೆ ಕಿರು ನಾಟಕವೊಂದನ್ನು ಅವರು ಸಂಘಟಿಸಿದ್ದರು.

ಈ ಬಾರಿ ಪ್ರಧಾನಿ ನರೇಂದ್ರ ಮೋದಿ  ಜನ್ಮದಿನದ ಹಿನ್ನೆಲೆಯಲ್ಲಿ ಗುಜರಾತ್​ ಬಿಜೆಪಿ ಒಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಸೆಪ್ಟೆಂಬರ್​ 17ರಂದು ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬ ಆಚರಣೆ ನಡೆಯಲಿದ್ದು, ಆ ದಿನ ಗುಜರಾತ್ (Gujarat)​ನ ಸುಮಾರು 7100 ಹಳ್ಳಿಗಳಲ್ಲಿ ರಾಮ್​ ಧುನ್​ ಕಾರ್ಯಕ್ರಮ (Ram Dhun Programmes) ನಡೆಯಲಿದೆ

ಈ ಬಾರಿ 71ರ ಸಂಭ್ರಮ ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟಿದ್ದು ಸೆಪ್ಟೆಂಬರ್​ 17, 1950ರಂದು ವಡೋದರಾದಲ್ಲಿ. 1972ರಲ್ಲಿ ಆರ್​ಎಸ್​ಎಸ್​ ಸೇರುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ನಂತರ 1987ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದರು ಮತ್ತು 1998ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರು. 2001ರಲ್ಲಿ ಮೊದಲ ಬಾರಿಗೆ ಗುಜರಾತ್​ ಮುಖ್ಯಮಂತ್ರಿಯಾದ ಅವರು, ನಂತರ ಮೂರು ಅವಧಿಗೆ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೋದಿಯವರೇ ಪ್ರಧಾನಿ ಅಭ್ಯರ್ಥಿ ಎಂದು 2013ರಲ್ಲಿ ಬಿಜೆಪಿ ಘೋಷಿಸಿತ್ತು. ಅದರಂತೆ 2014ರಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ರಧಾನಿ ಹುದ್ದೆಗೆ ಏರಿದ ನರೇಂದ್ರ ಮೋದಿಯವರು ಇದೀಗ 2019ರಲ್ಲೂ ಮತ್ತೆ ಪ್ರಧಾನಿ ಗದ್ದುಗೆಗೆ ಏರಿದ್ದಾರೆ. ಈ ಬಾರಿ 71ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಅವರ ಜನ್ಮದಿನಕ್ಕೆ ನಾವೂ ಒಂದು ವಿಶ್ ಮಾಡಬಹುದೇ?

ಇದನ್ನೂ ಓದಿ:

 Narendra Modi birthday: ರಾಷ್ಟ್ರೀಯ ನಿರುದ್ಯೋಗ ದಿನವಾಗಿ ನರೇಂದ್ರ ಮೋದಿ ಜನ್ಮದಿನ ಆಚರಿಸಲು ಕಾಂಗ್ರೆಸ್ ನಿರ್ಧಾರ

PM Narendra Modi: 71ರ ಹರೆಯದಲ್ಲಿಯೂ ದಣಿವರಿಯದ ನಾಯಕ ನರೇಂದ್ರ ಮೋದಿಯವರ ಆರೋಗ್ಯದ ಗುಟ್ಟೇನು?

(PM Modi 71st Birthday 10 Untold stories of Prime Minister of India in Kannada)

Published On - 10:07 pm, Thu, 16 September 21

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?