‘ಅಲ್ಲಾ’ ಎಂಬ ಪದದ ಮೂಲ ಸಂಸ್ಕೃತ: ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ಅಲ್ಲಾ(Allah) ಎಂಬ ಪದವು ಸಂಸ್ಕೃತದಿಂದ ಬಂದಿದೆ ಎಂದು ವಾರಾಣಸಿಯ (Varanasi) ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ನಿಶ್ಚಲಾನಂದ ಸರಸ್ವತಿ ಹೇಳಿಕೆ ನೀಡಿದ್ದಾರೆ.

‘ಅಲ್ಲಾ’ ಎಂಬ ಪದದ ಮೂಲ ಸಂಸ್ಕೃತ: ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ
ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

Updated on: Feb 23, 2023 | 1:22 PM

ಅಲ್ಲಾ(Allah) ಎಂಬ ಪದವು ಸಂಸ್ಕೃತದಿಂದ ಬಂದಿದೆ ಎಂದು ವಾರಾಣಸಿಯ (Varanasi) ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಹೇಳಿಕೆ ನೀಡಿದ್ದಾರೆ. ಅಲ್ಲಾ ಎಂಬ ಪದ ಹೆಣ್ತನದ ಶಕ್ತಿಯನ್ನು ಸೂಚಿಸುತ್ತದೆ. ಈ ಪದವನ್ನು ದುರ್ಗಾ ಮಾತೆಯನ್ನು ಆವಾಹಿಸಲು ಬಳಸಲಾಗುತ್ತದೆ. ಜಗತ್ತಿನಲ್ಲಿ ಇರುವುದು ಕೇವಲ ಒಂದೇ ಧರ್ಮ. ಅದು ಹಿಂದೂ ಸನಾತನ ಧರ್ಮ. ಉಳಿದ ಎಲ್ಲಾ ಧರ್ಮಗಳು ಕೇವಲ ಪಂಗಡಗಳು. ಧರ್ಮದ ಬಗ್ಗೆ ಪ್ರಶ್ನೆಯನ್ನು ಎತ್ತುವವರು ಮೊದಲು ಸಂಸ್ಕೃತ ವ್ಯಾಕರಣವನ್ನು ಕಲಿತುಕೊಳ್ಳಿ ಎಂದು ಹೇಳಿದರು.

ಸನಾತನ ಧರ್ಮವನ್ನು ಅನುಸರಿಸುವುದರಿಂದ ಮಾತ್ರ ಜೀವನದಲ್ಲಿ ಸಂತೋಷ ಹಾಗೂ ಮರಣಾನಂತರ ಮೋಕ್ಷ ಸಾಧ್ಯ. ಧರ್ಮದ ಪ್ರಶ್ನೆಗಳನ್ನು ಎತ್ತುವವರು ಮೊದಲು ಸಂಸ್ಕೃತದ ವ್ಯಾಕರಣದ ಅಧ್ಯಯನ ಮಾಡಬೇಕು ಎಂದರು.

ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಎಂಡಿ ಸೈಯದ್ ಅರ್ಷದ್ ಮದನಿ, ಅಲ್ಲಾ ಹಾಗೂ ಓಂ ಒಂದೇ ಎಂದಿರುವುದನ್ನು ಸ್ವಾಮೀಜಿ ಖಂಡಿಸಿದ್ದಾರೆ. ಇತರೆ ಧರ್ಮಗಳನ್ನು ಟೀಕಿಸುವ ಧೈರ್ಯ ಅವರಿಗಿಲ್ಲ, ಅಲ್ಲಾ ಎಂಬ ಪದವು ತಾಯಿಯ ಪದ ಮತ್ತು ಶಕ್ತಿಯುತ ಪದವಾಗಿದೆ. ಓಂ ಎಂಬುದು ದೇವರ ನಾಮ.

ಮಾರಿಷಸ್ ಸೇರಿದಂತೆ 15 ದೇಶಗಳು ಭಾರತ ಹಿಂದೂ ರಾಷ್ಟ್ರವಾಗಲು ಕಾಯುತ್ತಿವೆ. ಈ ಔಪಚಾರಿಕತೆ ಪೂರ್ಣಗೊಂಡ ತಕ್ಷಣ, ಏಷ್ಯಾದ ವಿವಿಧ ದೇಶಗಳು ತಮ್ಮನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿಕೊಳ್ಳುತ್ತವೆ ಎಂದರು.

ದೇಶದಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಆಗಿರುವ ಘಟನೆಗಳು ಆಧುನಿಕ ಶಿಕ್ಷಣ ವ್ಯವಸ್ಥೆಯ ದಿಕ್ಕು ತೋಚದಂತಿರುವುದನ್ನು ತೋರಿಸುತ್ತದೆ ಎಂದರು . ಮಾತೃಶಕ್ತಿಯನ್ನು ಗೌರವಿಸದಿದ್ದರೆ ಜಗತ್ತಿನಲ್ಲಿ ಏನೂ ಉಳಿಯುವುದಿಲ್ಲ. ಮಾತೃಶಕ್ತಿಯನ್ನು ರಕ್ಷಿಸುವುದು ಸನಾತನ ಸಂಪ್ರದಾಯ ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us