20 ಸಾವಿರ ರೂ. ಬೆಲೆಯ ಮಾವಿನ ಹಣ್ಣನ್ನು 500ರೂ.ಗೆ ಕೇಳಿದ ಮಧ್ಯವರ್ತಿ, ರೈತ ಮಾಡಿದ್ದೇನು?

20 ಸಾವಿರ ರೂ. ಬೆಲೆ ಬಾಳುವ ಮಾವಿನ ಹಣ್ಣನ್ನು ವ್ಯಾಪಾರಿ ಹಾಗೂ ಮಧ್ಯವರ್ತಿಗಳು 500 ರೂ.ಗೆ ಕೇಳಿದ್ದಕ್ಕೆ ಬೇಸರಗೊಂಡ ರೈತರೊಬ್ಬರು, ಯಾರೂ ಊಹಿಸದ ಕೆಲಸ ಮಾಡಿದ್ದಾರೆ. ತಾನು ಬೆಳೆದ ಮಾವಿನ ಹಣ್ಣುಗಳನ್ನು ರೈತ ಮಾರಾಟಕ್ಕೆಂದು ಮಾರುಕಟ್ಟೆಗೆ ತಂದಿದ್ದ ರೈತರೊಬ್ಬರಿಗೆ ಮಧ್ಯವರ್ತಿಯೊಬ್ಬರು ಅವಮಾನ ಮಾಡಿದ್ದಾರೆ. 20 ಸಾವಿರ ಬೆಲೆ ಬಾಳುವ ಮಾವಿನ ಹಣ್ಣನ್ನು 500ರೂಪಾಯಿಗೆ ಕೇಳಿದ್ದಾರೆ. ನೊಂದ ರೈತ ಪ್ರತಿಭಟಿಸಿದ್ದಷ್ಟೇ ಅಲ್ಲದೆ ಎಲ್ಲರೂ ಅಚ್ಚರಿಗೊಳಗಾಗುವಂತೆ ಮಾಡಿದ್ದಾರೆ.

20 ಸಾವಿರ ರೂ. ಬೆಲೆಯ ಮಾವಿನ ಹಣ್ಣನ್ನು 500ರೂ.ಗೆ ಕೇಳಿದ ಮಧ್ಯವರ್ತಿ, ರೈತ ಮಾಡಿದ್ದೇನು?
ಮಾವು

Updated on: Jun 04, 2025 | 2:25 PM

ತೆಲಂಗಾಣ, ಜೂನ್ 04: ಈ ಬಾರಿ ಎಲ್ಲೆಡೆ ಮಾವು(Mango) ಫಸಲು ಕೊಂಚ ಕಡಿಮೆಯೇ ಇದೆ. ಎಲ್ಲಾ ರೈತರು ತಾವು ಬೆಳೆಯುವ ಬೆಳೆಯನ್ನು ನಂಬಿಕೊಂಡೇ ಜೀವನ ಸಾಗಿಸುತ್ತಿರುತ್ತಾರೆ, ಹೇಗೂ ಬೆಳೆ ಬರುತ್ತೆ ಒಳ್ಳೆಯ ಹಣ ಗಳಿಸಬಹುದು ಎಂದು ಅಲ್ಲಲ್ಲಿ ಕೈಸಾಲ ಮಾಡಿರುತ್ತಾರೆ. 20 ಸಾವಿರ ರೂ. ಮಾವಿನ ಹಣ್ಣನ್ನು 500ರೂ.ಗೆ ಮಧ್ಯವರ್ತಿ ಹಾಗೂ ವ್ಯಾಪಾರಿ ಕೇಳಿದರೆ ರೈತರಿಗೆ ಬೇಸರವಾಗದೇ ಇದ್ದೀತೆ.

ಕಷ್ಟಪಟ್ಟು ಬೆಳೆದು ಕಾಪಾಡಿಕೊಂಡು ಬಂದಿರುವ ಮಾವಿನ ಹಣ್ಣನ್ನು ತೀರಾ ಕಡಿಮೆ ಬೆಲೆಗೆ ಕೇಳಿರುವುದಕ್ಕೆ ಬೇಸರಗೊಂಡು ರೈತರೊಬ್ಬರು ಏನು ಮಾಡಿದ್ದಾರೆ ಗೊತ್ತಾ?.

ತಾನು ಬೆಳೆದ ಮಾವಿನ ಹಣ್ಣುಗಳನ್ನು ರೈತ ಮಾರಾಟಕ್ಕೆಂದು ಮಾರುಕಟ್ಟೆಗೆ ತಂದಿದ್ದ ರೈತರೊಬ್ಬರಿಗೆ ಮಧ್ಯವರ್ತಿಯೊಬ್ಬರು ಅವಮಾನ ಮಾಡಿದ್ದಾರೆ. 20 ಸಾವಿರ ಬೆಲೆ ಬಾಳುವ ಮಾವಿನ ಹಣ್ಣನ್ನು 500ರೂಪಾಯಿಗೆ ಕೇಳಿದ್ದಾರೆ. ನೊಂದ ರೈತ ಪ್ರತಿಭಟಿಸಿದ್ದಷ್ಟೇ ಅಲ್ಲದೆ ಎಲ್ಲರೂ ಅಚ್ಚರಿಗೊಳಗಾಗುವಂತೆ ಮಾಡಿದ್ದಾರೆ.

ವಾರಂಗಲ್ ಜಿಲ್ಲೆಯ ವರ್ಧನ್ನಪೇಟೆ ಮಂಡಲದ ಇಲ್ಲಂಡ ಗ್ರಾಮದ ಸತೀಶ್​ ಎಂಬ ರೈತ ಐದು ಎಕರೆಯಲ್ಲಿ ಮಾವಿನ ನಾಟಿ ಮಾಡಿದ್ದರು. ಈ ಬಾರಿ ಮಳೆ ಮತ್ತು ಮಣ್ಣಿನ ಸವೆತದಿಂದಾಗಿ ನಿರೀಕ್ಷೆಯಂತೆ ಬೆಳೆ ಬರದೆ ಹಾನಿಗೊಳಗಾಗಿತ್ತು. ಉಳಿದ 7 ಟನ್ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಲಕ್ಷ್ಮೀಪುರಂ ಹಣ್ಣಿನ ಮಾರುಕಟ್ಟೆಗೆ ತಂದಿದ್ದಾರೆ. ಟ್ರಾಲಿ ಲೋಡ್ ಮಾವಿನ ಹಣ್ಣುಗಳನ್ನು 500 ರೂಪಾಯಿಗೆ ಕೇಳಿದ್ದಾರೆ.

ಆಗ ಬೇಸರಗೊಂಡ ರೈತ ಮಾವಿನ ಹಣ್ಣುಗಳನ್ನು ತುಂಬಿದ ಅದೇ ಟ್ರಾಲಿಯನ್ನು ವಾರಂಗಲ್​ನ ಕೆಳ ರೈಲ್ವೆ ಸೇತುವೆ ಬಳಿ ತಂದಿದ್ದಾರೆ. ಆ ದಾರಿಯಲ್ಲಿ ಹೋಗುತ್ತಿದ್ದ ಜನರನ್ನು ಕರೆದು ಎಲ್ಲರಿಗೂ ಉಚಿತವಾಗಿ ಹಣ್ಣುಗಳನ್ನು ಹಂಚಿದ್ದಾರೆ.

ಮತ್ತಷ್ಟು ಓದಿ: ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿದೆ ಮಾವು: ಇಂದೇ ಆರ್ಡರ್​ ಮಾಡಿ, ಇಲ್ಲಿದೆ ವಿವರ

ರೈತರು ಉಚಿತವಾಗಿ ಮಾವಿನ ಹಣ್ಣುಗಳನ್ನು ವಿತರಿಸುತ್ತಿರುವುದನ್ನು ನೋಡಿ ಸ್ಥಳೀಯರು ತಮ್ಮ ಚೀಲಗಳನ್ನು ತುಂಬಿಕೊಂಡು ಹೊರಟುಹೋದರು. ರೈತನಿಗೆ ಹೊಟ್ಟೆ ತಂಪಾಗಿಸುವಂತೆ ಆಶೀರ್ವದಿಸಿ ಹೊರಟುಹೋದರು. ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳ ಶೋಷಣೆಯಿಂದ ಆಘಾತಕ್ಕೊಳಗಾದ ರೈತ 500 ರೂ.ಗೆ ಇಲ್ಲಿಗೆ ಬಂದಿರುವ ಡೀಸೆಲ್ ಹಣ ಕೂಡ ಹುಟ್ಟುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಮಾರುಕಟ್ಟೆಯಲ್ಲಿ ಇಂತಹ ಶೋಷಣೆಯನ್ನು ನಿಲ್ಲಿಸಿ ರೈತರನ್ನು ಬೆಂಬಲಿಸಿ, ಮಧ್ಯವರ್ತಿ ವ್ಯವಸ್ಥೆಯನ್ನು ತೊಡೆದುಹಾಕಿ ಮತ್ತು ರೈತರಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ