ಇದು ವಿಭಿನ್ನವಾದ ಭಾರತ, ಗಡಿಯಾಚೆಗಿನ ಭಯೋತ್ಪಾದನೆಗೆ ಇದು ತಕ್ಕ ಉತ್ತರ ನೀಡುತ್ತದೆ: ಎಸ್ ಜೈಶಂಕರ್

ಭಾರತವು ತನ್ನ ಗಡಿಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಜೈಶಂಕರ್, ಇಂದು ಜನರು ಎದ್ದು ನಿಲ್ಲಲು ಸಿದ್ಧರಿರುವ ವಿಭಿನ್ನ ಭಾರತವನ್ನು ನೋಡುತ್ತಾರೆ. ಅದು ಉರಿಯಿರಲಿ ಅಥವಾ ಅದು ಬಾಲಾಕೋಟ್ ಆಗಿರಲಿ ಭಾರತವು ತನ್ನ ರಾಷ್ಟ್ರೀಯ ಭದ್ರತೆಯ ಸವಾಲುಗಳನ್ನು ಎದುರಿಸುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ.

ಇದು ವಿಭಿನ್ನವಾದ ಭಾರತ, ಗಡಿಯಾಚೆಗಿನ ಭಯೋತ್ಪಾದನೆಗೆ ಇದು ತಕ್ಕ ಉತ್ತರ ನೀಡುತ್ತದೆ: ಎಸ್ ಜೈಶಂಕರ್
ಎಸ್. ಜೈಶಂಕರ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 13, 2023 | 6:28 PM

ಕಂಪಾಲಾ: ದಶಕಗಳಿಂದ ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿರುವ ಪಡೆಗಳಿಗೆ ಇದು ವಿಭಿನ್ನ ಭಾರತ ಎಂದು ಈಗ ತಿಳಿದಿದೆ, ಅದು ಅವರಿಗೆ ಪ್ರತ್ಯುತ್ತರ ನೀಡುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ. ಇಂದು ದೇಶವು ಚೀನಾ (China) ಮತ್ತು ಪಾಕಿಸ್ತಾನ (Pakistan) ಒಡ್ಡುವ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಬಹುದು ಎಂದು ಅವರು ಒತ್ತಿ ಹೇಳಿದರು. ಬುಧವಾರ ಉಗಾಂಡಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ದೇಶ ನವ ಭಾರತವಾಗಿ ಪರಿವರ್ತನೆಯಾಗಿರುವ ಕುರಿತು ಮಾತನಾಡಿದ್ದಾರೆ. ಭಾರತವು ತನ್ನ ಗಡಿಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಜೈಶಂಕರ್, ಇಂದು ಜನರು ಎದ್ದು ನಿಲ್ಲಲು ಸಿದ್ಧರಿರುವ ವಿಭಿನ್ನ ಭಾರತವನ್ನು ನೋಡುತ್ತಾರೆ. ಅದು ಉರಿಯಿರಲಿ ಅಥವಾ ಅದು ಬಾಲಾಕೋಟ್ ಆಗಿರಲಿ ಭಾರತವು ತನ್ನ ರಾಷ್ಟ್ರೀಯ ಭದ್ರತೆಯ ಸವಾಲುಗಳನ್ನು ಎದುರಿಸುತ್ತದೆ ಎಂದು ಹೇಳಿದ್ದಾರೆ.

2016ರಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರರು ಭಾರತೀಯ ಸೇನಾ ದಳದ ಮುಖ್ಯಕಚೇರಿ ವಿರುದ್ಧ ನಡೆಸಿದ ಉರಿ ದಾಳಿ ಮತ್ತು ಭಯೋತ್ಪಾದಕ ತರಬೇತಿ ಶಿಬಿರದ ವಿರುದ್ಧ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆಸಿದ 2019 ಬಾಲಾಕೋಟ್ ವೈಮಾನಿಕ ದಾಳಿಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.

ಭಾರತದ ವಿರುದ್ಧ ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿರುವ ಮತ್ತು ಭಾರತ ಸಹಿಸಿಕೊಂಡಿರುವ ಶಕ್ತಿಗಳಿಗೆ ಇಂದು ಇದು ವಿಭಿನ್ನ ಭಾರತವೆಂದು ತಿಳಿದಿದೆ. ಈ ಭಾರತವು ಅವರಿಗೆ ಪ್ರತ್ಯುತ್ತರ ನೀಡುತ್ತದೆ ಎಂದು ಅವರು ಹೇಳಿದರು. ಚೀನಾ ಗಡಿಯಲ್ಲಿನ ಸವಾಲುಗಳ ಬಗ್ಗೆಯೂ ಮಾತನಾಡಿದ ಜೈಶಂಕರ್,ಕಳೆದ ಮೂರು ವರ್ಷಗಳಿಂದ  ಒಪ್ಪಂದಗಳನ್ನು ಉಲ್ಲಂಘಿಸಿ, ಚೀನಿಯರು ದೊಡ್ಡ ಪಡೆಗಳನ್ನು ಕರೆತಂದಿದ್ದಾರೆ ಎಂದಿದ್ದಾರೆ.

ಇಂದು ಭಾರತೀಯ ಸೇನೆಯನ್ನು ಅತ್ಯಂತ ಎತ್ತರದಲ್ಲಿ ಮತ್ತು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಈ ಪರಿಸ್ಥಿತಿಯು ಹಿಂದಿನದಕ್ಕಿಂತ ಭಿನ್ನವಾಗಿದೆ. ಏಕೆಂದರೆ ಭಾರತೀಯ ಸೈನಿಕರು ಈಗ ಪೂರ್ಣ ಬೆಂಬಲವನ್ನು ಹೊಂದಿದ್ದಾರೆ. ಅವರು ಸರಿಯಾದ ಉಪಕರಣಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿದ್ದಾರೆ.ಈ ಹಿಂದೆ ನಿರ್ಲಕ್ಷಿಸಿರುವ ಚೀನಾ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಹೆಚ್ಚಿನ ಕೆಲಸ ಮಾಡಬೇಕಿದೆ. ಇದು ವಿಭಿನ್ನ ಭಾರತವಾಗಿದ್ದು ಅದು ತನ್ನ ಹಿತಾಸಕ್ತಿಗಳಿಗಾಗಿ ನಿಲ್ಲುತ್ತದೆ ಮತ್ತು ಜಗತ್ತು ಅದನ್ನು ಗುರುತಿಸುತ್ತದೆಎಂದು ಅವರು ಹೇಳಿದರು.

ಇದನ್ನೂ ಓದಿ: Richest CMs of India: ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಯಾರು ಗೊತ್ತಾ? ಬಸವರಾಜ ಬೊಮ್ಮಾಯಿಗೆ ಯಾವ ಸ್ಥಾನ

ಇಂದು, ಭಾರತದ ನೀತಿಗಳು ಯಾವುದೇ ಹೊರಗಿನ ಒತ್ತಡದಿಂದ ಪ್ರಭಾವಿತವಾಗಿಲ್ಲ. ಇದು ಹೆಚ್ಚು ಸ್ವತಂತ್ರ ಭಾರತ. ನಮ್ಮ ತೈಲವನ್ನು ಎಲ್ಲಿ ಖರೀದಿಸಬೇಕು ಮತ್ತು ನಮ್ಮ ತೈಲವನ್ನು ಎಲ್ಲಿ ಖರೀದಿಸಬಾರದು ಎಂದು ನಮಗೆ ತಿಳಿಸುವ ದೇಶಗಳಿಂದ ಭಾರತವನ್ನು ಒತ್ತಡಕ್ಕೆ ಒಳಪಡಿಸಲಾಗುವುದಿಲ್ಲ. ಈಗಿನ ಭಾರತವು ತನ್ನ ನಾಗರಿಕರು, ಗ್ರಾಹಕರ ಹಿತಾಸಕ್ತಿಗಳನ್ನು ನೋಡಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Thu, 13 April 23