ರಾಜಕೀಯ ಭಾಷಣಗಳಲ್ಲಿ ನೋಡಿದ್ದಕ್ಕಿಂತ ಭಿನ್ನವಾದ ಅಮಿತ್ ಶಾರನ್ನು ನೋಡಿದೆವು; ಭೇಟಿ ನಂತರ ಗೃಹಸಚಿವರ ಬಗ್ಗೆ ಮುಸ್ಲಿಂ ಮುಖಂಡರ ಮೆಚ್ಚುಗೆ
ನಾವು ನೋಡುತ್ತಿರುವ ರಾಜಕೀಯ ಭಾಷಣಗಳಿಗಿಂತ ಇದು ಭಿನ್ನವಾದ ಅಮಿತ್ ಶಾ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು, ಅವರು ನಾವು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದರು, ಅವರು ನಿರಾಕರಣೆ ಮಾಡುತ್ತಿರಲಿಲ್ಲ ಎಂದ ಮುಸ್ಲಿಂ ನಾಯಕರು.
ದೆಹಲಿ: ಮುಸ್ಲಿಂ (muslim) ಧಾರ್ಮಿಕ ಮುಖಂಡರ ನಿಯೋಗ ಮಂಗಳವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಿದ್ದು, ರಾಮನವಮಿ (Ram Navami) ನಂತರ ನಡೆದ ಕೋಮುಗಲಭೆ ಮತ್ತು ದ್ವೇಷದ ಭಾಷಣಗಳನ್ನು ಖಂಡಿಸಿದೆ. ನಿಯೋಗದ ನೇತೃತ್ವವನ್ನು ಜಮೀಯತ್ ಉಲಮಾ-ಎ-ಹಿಂದ್ (Jamiat Ulama-e-Hind) ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ, ಕಾರ್ಯದರ್ಶಿ ನಿಯಾಜ್ ಫಾರುಕಿ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾದ ಕಮಲ್ ಫಾರುಕಿ ಮತ್ತು ಪ್ರೊಫೆಸರ್ ಅಖ್ತರುಲ್ ವಾಸೆ ವಹಿಸಿದ್ದರು. ಎನ್‌ಡಿಟಿವಿಯೊಂದಿಗೆ ಮಾತನಾಡಿದ ನಿಯಾಜ್ ಫಾರುಕಿ, ನಿಯೋಗವು ದೇಶ ಎದುರಿಸುತ್ತಿರುವ 14 ಸವಾಲುಗಳನ್ನು ಎತ್ತಿದೆ ಎಂದು ಹೇಳಿದರು. ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚಿನ ಕೋಮು ಹಿಂಸಾಚಾರದ ಘಟನೆಗಳು ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳಲ್ಲಿ ಸೇರಿವೆ ಎಂದು ಅವರು ಹೇಳಿದರು.
ನಾವು ನೋಡುತ್ತಿರುವ ರಾಜಕೀಯ ಭಾಷಣಗಳಿಗಿಂತ ಇದು ಭಿನ್ನವಾದ ಅಮಿತ್ ಶಾ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು, ಅವರು ನಾವು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದರು, ಅವರು ನಿರಾಕರಣೆ ಮಾಡುತ್ತಿರಲಿಲ್ಲ ಎಂದಿದ್ದಾರೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ನಡೆದ ಹಲವು ಘಟನೆಗಳು ರಾಮನವಮಿ ಮೆರವಣಿಗೆಯಲ್ಲಿ ನಡೆದಿವೆ. ತಮ್ಮ ರ್ಯಾಲಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸಿದರೆ, ರಾಜಕೀಯ ಲಾಭಕ್ಕಾಗಿ ಹಿಂಸಾಚಾರವನ್ನು ರೂಪಿಸಿದ್ದು ಬಿಜೆಪಿ ಎಂದು ವಿರೋಧ ಪಕ್ಷಗಳು ಹೇಳಿವೆ.
ಬಿಹಾರದ ನಳಂದಾದಲ್ಲಿ ಮದರಸಾವೊಂದಕ್ಕೆ ಬೆಂಕಿ ಹಚ್ಚಿದ ಘಟನೆಯನ್ನು ಮುಸ್ಲಿಂ ಮುಖಂಡರು ಪ್ರಸ್ತಾಪಿಸಿದ್ದಾರೆ ಎಂದು ಫಾರುಕಿ ಹೇಳಿದ್ದಾರೆ.
ರಾಜಸ್ಥಾನದ ಭರತ್‌ಪುರ ನಿವಾಸಿಗಳಾದ ಜುನೈದ್ ಮತ್ತು ನಾಸಿರ್ ಹತ್ಯೆಯ ಬಗ್ಗೆಯೂ ಚರ್ಚೆ ನಡೆದಿದೆ. ಫೆಬ್ರವರಿ 15 ರಂದು ನಾಸಿರ್ (25) ಮತ್ತು ಜುನೈದ್ (35) ಅವರನ್ನು ಗೋರಕ್ಷಕರು ಅಪಹರಿಸಿದ್ದರು ಎಂದು ಹೇಳಲಾಗಿದೆ. ಮರುದಿನ ಬೆಳಿಗ್ಗೆ ಹರ್ಯಾಣದ ಭಿವಾನಿಯಲ್ಲಿ ಸುಟ್ಟ ಕಾರಿನೊಳಗೆ ಅವರ ಶವಗಳು ಪತ್ತೆಯಾಗಿವೆ.
ಇದನ್ನೂ ಓದಿ: ಮೀಡಿಯಾ ಒನ್ ನಿಷೇಧ ರದ್ದು; ನಾಲ್ಕು ವಾರಗಳಲ್ಲಿ ಚಾನೆಲ್‌ನ ಪರವಾನಗಿ ನವೀಕರಿಸುವಂತೆ ಸುಪ್ರೀಂ ಸೂಚನೆ
ಬಿಜೆಪಿ ನಾಯಕರ ದ್ವೇಷದ ಭಾಷಣಗಳ ಬಗ್ಗೆಯೂ ಇಲ್ಲಿ ಮಾತನಾಡಲಾಗಿದೆ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ. ಎಲ್ಲಾ ರೀತಿಯ ಜನರಿದ್ದಾರೆ, ಆದ್ದರಿಂದ ಎಲ್ಲರನ್ನೂ ಒಂದೇ ಕೋನದಲ್ಲಿ ನೋಡುವುದು ಸರಿಯಲ್ಲ. ಸರ್ಕಾರ, ಇದರಲ್ಲಿ ಭಾಗಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ನೀವು ಈ ವಿಚಾರದಲ್ಲಿ ಮೌನವಾಗಿರುವುದು ಮುಸ್ಲಿಮರಲ್ಲಿ ಹತಾಶೆಗೆ ಕಾರಣವಾಗುತ್ತದೆ ಎಂದು ನಾವು ಅವರಿಗೆ ಹೇಳಿದ್ದೇವೆ. ಅವರು ಅದನ್ನು ಪರಿಶೀಲಿಸುವುದಾಗಿ ಶಾ ಹೇಳಿದ್ದಾರೆ.ನಾವು ಯಾವುದೇ ನಾಯಕನನ್ನು ಗುರಿಯಾಗಿಸಿಕೊಂಡಿಲ್ಲ, ಅದು ನಮ್ಮ ಗುರಿಯಾಗಿರಲಿಲ್ಲ. ಸಹಕಾರವನ್ನು ಸೃಷ್ಟಿಸುವುದು ಮತ್ತು ದೇಶದಲ್ಲಿ ವಾತಾವರಣವನ್ನು ಬದಲಾಯಿಸುವುದು ನಮ್ಮ ಗುರಿಯಾಗಿದೆ ಎಂದು ಫಾರೂಕಿ ಹೇಳಿದ್ದಾರೆ.
ಸಲಿಂಗ ವಿವಾಹ ಮತ್ತು ಏಕರೂಪ ನಾಗರಿಕ ಸಂಹಿತೆ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು.ನಾವು ನಮ್ಮ ನಿಲುವನ್ನು ವ್ಯಕ್ತಪಡಿಸಿದ್ದೇವೆ, ಆದರೆ ಅವರು ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಎಂದಿದ್ದಾರೆ ಫಾರೂಕಿ.
ಗೃಹ ಸಚಿವರೊಂದಿಗಿನ ಭೇಟಿಯ ನಂತರ ಮುಸ್ಲಿಂ ನಿಯೋಗ ಎಷ್ಟು ತೃಪ್ತವಾಗಿದೆ ಎಂದು ಕೇಳಿದಾಗ ಬ್ರೇಕಿಂಗ್ ಐಸ್ ಮೀಟ್ ಆಗಿತ್ತು ಎಂದಿದ್ದಾರೆ ಫಾರೂಕಿ.ನಾವು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ, ನಾವು ಸರ್ಕಾರದ ಪರವಾಗಿ ಏನನ್ನೂ ಹೇಳುತ್ತಿಲ್ಲ .ನಾನು ಹೇಳುವುದನ್ನು ಮಾಡುತ್ತೇನೆ, ಆದರಿಂದ ಮುಂದೆ ನೋಡೋಣ ಎಂದು ಅಮಿತ್ ಶಾ ಹೇಳಿರುವುದಾಗಿ ಮುಸ್ಲಿಂ ಮುಖಂಡರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ